ಅಂಚೆ ಚೀಟಿ ಪ್ರದರ್ಶನ ಮಕ್ಕಳ ಮನೋವಿಕಾಸಕ್ಕೆ ಸಹಕಾರಿ: ರಂಜಿತ್ ಕುಮಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.23: ಇಲ್ಲಿನ  ಪೊಲೀಸ್ ಜಿಮ್‍ಖಾನದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನದಡಿ ಅಂಚೆ ಚೀಟಿ, ನಾಣ್ಯ, ಪತ್ರಗಳ ಸಂಗ್ರಹ ಮತ್ತು ಪ್ರದರ್ಶನ ಕುರಿತು ಕಾರ್ಯಾಗಾರ ಮತ್ತು ವಿಚಾರ ಸಂಕಿರಣ  ನಿನ್ನೆ ಸಂಜೆ ನಡೆಯಿತು.
ಭಾರತೀಯ ಅಂಚೆ ಇಲಾಖೆಯ ಬಳ್ಳಾರಿ ವಿಭಾಗದಿಂದ ಹಮ್ಮಿಕೊಂಡಿದ್ದ ಈ ಪ್ರದರ್ಶನಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು ಚಾಲನೆ ನೀಡಿ. ಇಂತಹ ಪ್ರದರ್ಶನಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗಲಿವೆಂದರು
ಪ್ರರ್ಶನದಲ್ಲಿ ಅನೇಕ ಅಂಚೆಚೀಟಿ, ನಾಣ್ಯ ಸಂಗ್ರಹಗಾರರಿಂದ ಇತಿಹಾಸ, ಕ್ರೀಡೆ, ಸ್ಮಾರಕಗಳು, ಸಂಶೋಧನೆ, ವಿಜ್ಞಾನಿಗಳು, ವಿವಿಧ ಕ್ಷೇತ್ರಗಳ ಸಾಧಕ ವ್ಯಕ್ತಿಗಳು, ಖ್ಯಾತ ಸ್ಥಳಗಳು, ಪ್ರಾಣಿ ಪಕ್ಷಿಗಳ ಬಗ್ಗೆ ಅದರಲ್ಲೂ ಬಳ್ಳಾರಿ ಜಿಲ್ಲೆಯ ಕರಡಿ ಧಾಮ, ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ, ಬಳ್ಳಾರಿಯ ರಾಘವ, ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಸೇರಿದಂತೆ ಅನೇಕ ಮಹನಾ ವ್ಯಕ್ತಿಗಳ ಅಂಚೆ ಕವರ್ಗಳ ಪ್ರದರ್ಶನ ಗಮನ ಸೆಳೆಯಿತು.
ಅದೇ ರೀತಿ, ಪ್ರಾಚೀನ ನಾಣ್ಯ ಮತ್ತು ನೋಟುಗಳು ಸಹ ಮಕ್ಕಳ ಸಮಾನ್ಯ ಜ್ಞಾನ ಅರಿಯುವಿಕೆಗೆ ಸಹಕಾರಿಯಾತು.
82 ವರ್ಷದ ಹಿರಿಯ ಅಂಚೆಚೀಟಿ ಸಂಗ್ರಾಹಕ ಶ್ರೀರಾಮುಲು ಅವರು ಅಸಕಾಶವಾಣಿ ಜೊತೆ  ಮಾತನಾಡಿ ನಾನು ಚಿಕ್ಕವನಿದ್ದಾಗಲಿಂದ ಈ ಹವ್ಯಾಸ ಬೆಳಸಿಕೊಂಡಿರುವೆ,  ವಿಶೇಷ ಅಂಚೆ ಚೀಟಿಗಳನ್ನು ಇಂದಿಗೂ ಖರೀದಿಸುತ್ತಿರುವೆ. ನನ್ನ ಬಳಿ 10 ಲಕ್ಷದಷ್ಟು ನಾಣ್ಯ, ಅಂಚೆಚೀಟಿ, ಕವರ್ ಸಗ್ರಹಿಸಿಟ್ಟುಕೊಂಡಿರುವೆ, ಇದೆಲ್ಲ ನನ್ನ ಸಂತೋಷಕ್ಕೆ ಹವ್ಯಾಸವಾಗಿರಿಸಿಕೊಂಡಿರುವೆ, ಮಕ್ಕಳು ಈ ಹವ್ಯಾಸ ಬೆಳಸಿಕೊಂಡರೆ ಉತ್ತಮ ಎಂದರು.
ಬಳ್ಳಾರಿ ಉಪ ವಿಭಾಗದ ಸಹಾಯಕ ಅಧೀಕ್ಷಕ ಪಿ.ಚಿದಾನಂದ ಮತ್ತು ಕಚೇರಿಯ ಸಹಾಯಕ ರವಿ ಅವರು ಅಂಚೆ ಇಲಾಕೆಯ 167 ವರ್ಷಗಳ ಇತಿಹಾಸ, ಇಲಾಖೆ ನಡೆದು ಬಂದ ದಾರಿ.  ಅಂಚೆ ಚೀಟಿ ಸಂಗ್ರಹ ಅದರಿಂದಾಗುವ ಲಾಭ, ಅಂಚೆ ಚೀಟಿ ಸಂಗ್ರಹ ಹವ್ಯಾಸಕ್ಕೆ ದೀನ್ ದಯಾಳ್ ಸ್ಪರ್ಷ್ ವಿದ್ಯಾರ್ಥಿ ವೇತನವನ್ನು  ಕೇಂದ್ರ ಸರ್ಕಾರ ನೀಡುತ್ತಿರುವುದರ ಬಗ್ಗೆ ತಿಳಿಸುತ್ತ ಸ್ಟ್ಯಾಂಪ್, ನಾಣ್ಯಗಳನ್ನು ಸಂಗ್ರಹಿಸಿ ವಿಶ್ವದೆಲ್ಲಡೆ ಪ್ರದರ್ಶನ ಮಾಡಿ ಖ್ಯಾತಿಗಳಿಸಬಹುದೆಂದರು
ಬಳ್ಳಾರಿ ವಿಭಾಗೀಯ ಅಧೀಕ್ಷಕ ವಿ.ಎಲ್.ಚಿತಕೋಟಿ ಅವರು ಮಾತನಾಡಿ, ಅಂಚೆ ಇಲಾಖೆ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದ್ದು. ಬ್ಯಾಂಕಿಂಗ್, ವಿಮೆ, ಸಾರ್ವಜನಿಕ ಸೌಲಭ್ಯಗಳಾದ ಆಧಾರ ನೋಂದಣಿ, ಪಾಸ್ ಪೋರ್ಟ್ ಸೇವೆ, ಬಸ್ ರೈಲ್ವೇ ಟಿಕೆಟ್ ಬುಕಿಂಗ್ ಕಾರ್ಯ ಸಹ ಮಾಡಲಿದ್ದು ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದರು
ಜಿಮ್ ಖಾನ ಅಧ್ಯಕ್ಷ ಕೆ.ಜಿತೇಂದ್ರ ಇಂತಹ ಹವ್ಯಾಸ ನಮ್ಮ ಮಕ್ಕಳಲ್ಲೂ ಬೆಳೆಸೋಣ ಎಂದರು.
ಕಾರ್ಯಕ್ರಮದಲ್ಲಿ 30 ಜನರ ಆಧಾರ ನೋಂದಣೆ ಮಾಡಿದರೆ, ಮೂರು ಜನ ಪಿಲ್ಯಾಟಲಿ ಸದಸ್ಯರಾದರು, 18 ಜನ ಮೈ ಸ್ಟ್ಯಾಂಪ್ ಮಾಡಿಸಿದರು.
ಟಿ.ಟಿಅಸ್ಟರ್ ಮತ್ತು ಹಿರಿಯ ಅಂಚೆಚೀಟಿ ಸಂಗ್ರಾಹಕ ಶಿವಾನಂದ, ಅಲ್ಲಸಾಬ್ ಮೊದಲಾದವರು ಇದ್ದರು.