ರಸಮಂಜರಿ, ಸನ್ಮಾನ
ಗುಳೇದಗುಡ್ಡ,ಮೇ23: ಸಮೀಪದ ಹಳದೂರು ಗ್ರಾಮದೇವತೆ ಶ್ರೀ ದ್ಯಾಮಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ 19 ವಿಜೇತೆ ಪ್ರಗತಿ ಬಸವರಾಜ ಬಡಿಗೇರ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಪ್ರಗತಿ ಬಡಿಗೇರ, ತಂದೆ ಬಸವರಾಜ ಬಡಿಗೇರ, ಸಹೋದರಿಯರಾದ ತ್ರಿವೇಣಿ, ಪ್ರತೀಕ್ಷಾ , ಮೌನೇಶ ಬಡಿಗೇರ, ಕುಮಾರ ರಾಠೋಡ ಅವರು ಹಾಡು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಬಳಿಕ ಗ್ರಾಮದ ವತಿಯಿಂದ ಗಾಯಕಿ ಪ್ರಗತಿ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.