ಮಾನವ ಸರಪಳಿ ಪ್ರದರ್ಶನ
ಗದಗ, ಮೇ 23: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ವಾರ್ತಾ ಇಲಾಖೆ, ಗದಗ, ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗಿ ದಿನ ನಿಮಿತ್ಯ ಜಿಲ್ಲಾ ಮಟ್ಟದ ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮ ಜರುಗಿತು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗದೇವ ಬಿ, ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್.ನೀಲಗುಂದ ಇವರು ಜಿಲ್ಲಾ ಮಟ್ಟದ ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಸರ ಸ್ವಚ್ಛತೆ ಹಾಗೂ ನೀರಿನ ಸರಿಯಾದ ನಿರ್ವಹಣೆ ಮೂಲಕ ಹಾಗೂ ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಡೆಂಗಿ ಜ್ವರವನ್ನು ಹರಡದಂತೆ ತಡೆಯಬಹುದು. ಡೆಂಗಿ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅವಶ್ಯ ಎಂದು ಹೇಳಿದರು.
ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮದಲ್ಲಿ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರಿತ್ ಖೋನಾ, ಕೀಟಶಾಸ್ತ್ರಜ್ಞರಾದ ಶ್ರೀಮತಿ ಅನ್ನಪೂರ್ಣ ಶೆಟ್ಟರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೀತಾ ಕಾಂಬ್ಳೆ, ಬಿ ಎಮ್ ಹುಲ್ಯಾಳ ಈರಣ್ಣ ಚಲ್ಕಿ. ಆರೋಗ್ಯ ಇಲಾಖೆ ಸಿಬ್ಬಂದಿ, ಎಸ್ ಎನ್ ಲಿಂಗದಾಳ, ಅಜಯಕುಮಾರ ಕಲಾಲ, ರಿಯಾಜ ಫೆÇ?ಡುನಾಯ್ಕರ, ಎಮ್ ಹೆಚ್ ಕದಾಂಪೂರ, ಪ್ರಭು ಹೊನ್ನಗುಡಿ, ಬಿ ಸಿ ಹೀರೆಹಾಳ, ಏಕನಾಥ ಪಾಟೀಲ, ಎಸ್ ಬಿ ಗಡಾದ, ವಾ0iÀiï ಎನ್ ಕಡೆಮನಿ. ಶ್ರೀಮತಿ ಎಸ್ ಎನ್ ಕಟ್ಟಿಮನಿ, ವಾ0iÀiï ವಾ0iÀiï ಹಕ್ಕಿ ಮತ್ತು ಆಶಾ ಕಾರ್ಯಕರ್ತೆಯರು, ಭಾಗವಹಿಸಿದ್ದರು.
ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮದಲ್ಲಿ ಗಾಂಧಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಸ್ತೆ ಉದ್ದಕ್ಕೂ ಡೆಂಗಿ ಕುರಿತು ಧ್ವನಿವರ್ಧಕದ ಮೂಲಕ ಅರಿವು ಮೂಡಿಸಿತು. ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಬೀದಿಗಳಲ್ಲಿ ಸಂಚರಿಸಿತು. ಕರಪತ್ರಗಳನ್ನು ಮಡಿಕೆ ಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.