ಸುನಿಧಿ ಭರತನಾಟ್ಯ ರಂಗ ಪ್ರವೇಶ
ಬೆಂಗಳೂರು:ಮಹಾವೀರ ಲಲಿತಕಲಾ ಅಕಾಡೆಮಿ ಹಾಗೂ ಸುಮೇರು ಟ್ರಸ್ಟ್ ಸಹಯೋಗದಲ್ಲಿ ಕುಮಾರಿ ಸುನಿಧಿ ಮಂಜುನಾಥ್ ಅವರು ಭರತನಾಟ್ಯ ರಂಗ ಪ್ರವೇಶವನ್ನು ಮೇ ೨೬ರಂದು ಭಾನುವಾರ ಬೆಳಗ್ಗೆ ೧೦ ಗಂಟೆಗೆ ಬೆಂಗಳೂರು ವಿಶ್ವವಿದ್ಯಾಲಯದ ಮಲ್ಲತ್ತಳ್ಳಿ ಬಳಿ ಇರುವ ಕಲಾಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ನಾಡೋಜ ಸಾಹಿತಿ ದಂಪತಿಗಳಾದ ಡಾ. ಕಮಲ ಹಂಪನಾ ಮತ್ತು ಡಾ. ಹಂಪ ನಾಗರಾಜಯ್ಯ ಅವರು ಹಾಗೂ ಪದ್ಮಶ್ರೀ ಪುರಸ್ಕೃತ ಸಾಹಿತಿಗಳಾದ ಡಾ. ದೊಡ್ಡ ರಂಗೇಗೌಡರು, ಶ್ರೀ ಶಕ್ತಿ ಆರ್ಟ್ಸ್ ನ ಕಲಾ ನಿರ್ದೇಶಕರಾದ ಜೆ ಬಿ ಸರವಣನ್ ಪಿಳೈ ರವರು
ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರೂಪ ಜಿ. ಮತ್ತು ಮಂಜುನಾಥ ಪಾಳ್ಯ ದಂಪತಿಗಳ ಏಕೈಕ ಸುಪುತ್ರಿ. ಕು. ಸುನಿಧಿ ಮಂಜುನಾಥ್. ಇವರು ಭರತನಾಟ್ಯ ಕಲಿಕೆಯನ್ನು ತನ್ನ ೮ನೇ ವಯಸ್ಸಿನಲ್ಲಿ ನೃತ್ಯ ಗುರು ಶ್ರೀಮತಿ ತನುಜಾಜೈನ್, ಕಲಾ ನಿರ್ದೇಶಕರು, ಮಹಾವೀರ ಲಲಿತಕಲಾ ಅಕಾಡೆಮಿ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ನೃತ್ಯವನ್ನು ಆರಂಭಿಸುವ ಮೂಲಕ ತನ್ನ ಬಾಲ್ಯದ ಕನಸನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಹೆಜ್ಜೆಯನ್ನಿರಿಸಿದರು.
೨೦೧೯ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್‌ಇಇಬಿ) ನಡೆಸುವ ’ಜೂನಿಯರ್ ಗ್ರೇಡ್ ನೃತ್ಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೨೦೨೨ರಲ್ಲಿ ’ಸೀನಿಯರ್ ಗ್ರೇಡ್ ನೃತ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ೨೦೧೯ರಲ್ಲಿ ಗುರು, ಶ ವಿನುತ ಸುರೇಶ್‌ರವರಲ್ಲಿ ಕರ್ನಾಟಕ ಸಂಗೀತ ಕಲಿಕೆಯನ್ನು ಪ್ರಾರಂಭಿಸಿದರು.