ಗ್ರಾಮದೇವತೆ ಗಂಗಾ ತಾಯಿ ಜಾತ್ರೆಗೆ ಚಾಲನೆ
ವಿಜಯಪುರ, ಮೇ೨೩- ಊರಿನ ಗ್ರಾಮದೇವತೆ ಗಂಗಾತಾಯಿಯ ೫೪ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಚಾಲನೆ ನೀಡಿದರು.
ಪಟ್ಟಣದ ಬೆಸ್ತರಪೇಟೆಯಲ್ಲಿ ನೆಲೆಸಿರುವ ಗ್ರಾಮದೇವತೆ ಗಂಗಾತಾಯಿ ದೇವಾಲಯದ ಆವರಣದಲ್ಲಿ ಗಂಗಾ ದೇವಿಯ ೫೪ ನೇ ವರ್ಷದ ಜಾತ್ರಾ ಮಹೋತ್ಸವದ ಮೊದಲ ದಿನ ವಾದ ಮೇ ೨೧ ರಂದು ಜಾತ್ರಾ ಕಮಿಟಿ ವತಿಯಿಂದ ಸಾಟು ಇಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಊರಿನ ಗ್ರಾಮದೇವತೆ ಗಂಗಾ ತಾಯಿಯ ೫೪ ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸಾಟಿ ಡುವ ಮೂಲಕ ಚಾಲನೆ ದೊರೆತಿದ್ದು, ಮೊದಲಿನಿಂದ ಊರಿನ ಹಿರಿಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುವ ಪದ್ಧತಿ ಈಗಲೂ ಮುಂದುವರೆದಿದೆ. ಅದೇ ರೀತಿ ಗಂಗಾತಾಯಿಯು ಊರಿನ ಜನರನ್ನು ಪೋಷಿಸಿ ಎಲ್ಲರಿಗೂ ಒಳಿತನ್ನು ಮಾಡುತ್ತಾ ಬರುತ್ತಿದ್ದು ತಾಯಿಯ ಅನುಗ್ರಹ ನಮ್ಮೆಲ್ಲರ ಮೇಲೆ ಹೀಗೆ ಇರಲಿ ಎಂದು ತಿಳಿಸಿದರು.
ಜಾತ್ರಾ ಸಮಿತಿಯ ಗೌರವ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ಪಟ್ಟಣದ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಪಟ್ಟಣದ ಅನೇಕ ದೇವಾಲಯಗಳ ಅಭಿವೃದ್ಧಿಗೆ ನೆರವಾಗಿದ್ದಾರೆ. ಅದೇ ರೀತಿ ಈ ವರ್ಷ ಗಂಗಾ ತಾಯಿಯ ಸೇವೆ ಮಾಡುವ ಅವಕಾಶ ಅವರಿಗೆ ದೊರೆತಿದ್ದು, ಅವರ ಮುಂದಾಳತ್ವ ಮತ್ತು ಸಹಕಾರದೊಂದಿಗೆ ಜಾತ್ರಾ ಮಹೋತ್ಸವ ಮತ್ತಷ್ಟು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯುತ್ತದೆ. ಹಿಂದೂ ಜನಾಂಗದ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು ಜಾತ್ರೆಯ ಚಾಲನಾ ಮಹೋತ್ಸವದಲ್ಲಿ ಭಾಗವಹಿಸಿ ಸಹಕಾರ ನೀಡಿದ್ದಾರೆ. ಇದು ಒಂಭತ್ತು ದಿನಗಳ ಕಾರ್ಯ ಕ್ರಮವಾಗಿದ್ದು, ಮುಂದಿನ ಮಂಗಳ ವಾರ ಮೇ ೨೮ ರಂದು ಗಂಗಾ ತಾಯಿಯ ಜಾತ್ರೆ ಇದೆ ಎಂದು ತಿಳಿಸಿದರು.
ಮೇ ೨೧ ರಿಂದ ೭ ದಿನಗಳ ಕಾರ್ಯಕ್ರಮ:
ಜಾತ್ರೆಗೆ ಸಾಟು ಇಡುವುದು ಎಂದರೆ ಜಾತ್ರೆಗೆ ಒಂದು ವಾರ ಮೊದಲೇ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಇದನ್ನು ಊರಿನ ತುಂಬೆಲ್ಲಾ ಡಂಗೂರ ಹೊಡೆದು ಸಾರುತ್ತಾರೆ ( ಸಾಟಿಡುತ್ತಾರೆ). ಊರಿನ ನಿವಾಸಿಗಳು ಯಾರೂ ಜಾತ್ರೆ ಮುಗಿಯುವ ತನಕ ಊರಿನಿಂದ ಹೋಗಬಾರದು. ಸಾಟು ಇಟ್ಟ ದಿನದಿಂದ ಮುಂದಿನ ೭ ದಿನಗಳ ಕಾಲ ಗಂಗಾತಾಯಿಯ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು ಜಾತ್ರೆಯ ದಿನ ಮೇ ೨೮ರ ಮಂಗಳವಾರದಂದು ಬೆಳಗ್ಗೆ ೬ ಗಂಟೆಯಿಂದ ರಾತ್ರಿಯವರೆಗೆ ದೇವರಿಗೆ ಊರಿನ ಪ್ರತಿ ಮನೆಯವರು ತಂಬಿಟ್ಟಿನ ಆರತಿ ಮಾಡಿ ಕೊಂಡು ಬಂದು ಬೆಳಗುವ ಪದ್ದತಿ ಇದೆ, ಕಳಸ ದೀಪಾರತಿ ಯೊಂದಿಗೆ ಕುಟುಂಬ ಸಮೇತರಾಗಿ ದರ್ಶನ ಪಡೆದು ತಾಯಿಗೆ ಮಡಲಕ್ಕಿ ತುಂಬಿ ಹೋಗುತ್ತಾರೆ.ಮೇ ೨೧ ರಿಂದ ೯ ದಿನಗಳ ಕಾಲ ಪ್ರತಿ ದಿನ ರಾತ್ರಿ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಪ್ರಸಾದ ಸೇವೆ ನಡೆಯಿತು.
ಶ್ರೀ ಗಂಗಾದೇವಿ ರವರಿಗೆ ಪ್ರಥಮ ಪೂಜೆ ಬಳಿಕ ತೋಟಿ ದೊಡ್ಡ ಕೆಂಪಣ್ಣನವರ ಬಿ ಕೆಂಪಯ್ಯನವರ ಮಗ ಕೆ ಮುನಿರಾಜು ಮತ್ತು ದೊಡ್ಡ ಆಂಜಿನಪ್ಪನವರ ಮಗ ಡಿ ರವಿಕುಮಾರ್, ಕೆಂಪರಾಜು, ಹೇಮಂತ್ ಊರಿನ ಪ್ರಮುಖ ಬೀದಿಗಳಲ್ಲಿ ಸಾಟಿಡುವ ಕಾರ್ಯಕ್ರಮವನ್ನು ಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಗಂಗಾ ಮತಸ್ಥರ ಸಂಘದ ಉಪಾಧ್ಯಕ್ಷ ಶಿವರಾಜ್, ಪುರಸಭಾ ಮಾಜಿ ಉಪಾಧ್ಯಕ್ಷರಾದ ಎಂ ಕೇಶವಪ್ಪ ಪುರಸಭಾ ಸದಸ್ಯರಾದ ಕವಿತಾ ಮುನಿ ಅಂಜಿನಪ್ಪ, ಸಿಎಂ ರಾಮು, ಶ್ರೀಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜೆ. ಎಸ್ ರಾಮಚಂದ್ರಪ್ಪ, ಗಂಗಾಮತಸ್ಥರ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಎನ್ ಮುನಿರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ಅನ್ನಪೂರ್ಣಮ್ಮ ,ಮುನಿಕೃಷ್ಣ ಮಾಜಿ ಉಪಾಧ್ಯಕ್ಷರಾದ ಎನ್ ನಾರಾಯಣಸ್ವಾಮಿ, ಮಾಜಿ ಪುರಸಭಾ ಸದಸ್ಯರಾದ ಡಿ ನವೀನ್ ಕುಮಾರ್, ಕೆ ಬಿ ಎಸ್ ಭಾಸ್ಕರ್, ಲಕ್ಷ್ಮೀಬಾರ್ ಸಂಪತ್ ಕುಮಾರ್, ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಮೋಹನ್ ಬಾಬು, ವಿ ಎಂ ಪಿ ಸಿ ಎಸ್ ಮಾಜಿ ಉಪಾಧ್ಯಕ್ಷರಾದ ಕೆ ಮುನಿರಾಜು, ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾz ಎಂ ನಾರಾಯಣಸ್ವಾಮಿ, ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಾಲಯ ಪ್ರಧಾನ ಕಾರ್ಯದರ್ಶಿ ಡಿ.ಆರ್. ಚನ್ನಕೃಷ್ಣ, ಅಂಜಿನಪ್ಪ ( ಗುಂಡಣ್ಣ) ವಕೀಲರುಗಳಾದ ವೆಂಕಟಗಿರಿಯಪ್ಪ,ಶಿವಕುಮಾರ್, ಗಂಗಾ ತಾಯಿ ಜಾತ್ರಾ ಕಮಿಟಿಯ ಅಧ್ಯಕ್ಷ ನಾಗರಾಜ್, ಜಾತ್ರಾ ಕಮಿಟಿಯ ಪದಾಧಿಕಾರಿಗಳು, ಮಹೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಸಿದ್ಧಪ್ಪ, ಆಂಜಿನಪ್ಪ, ಮೋಹನ್ ಬಾಬು, ಪವನ್ ಮತ್ತಿತರರು ಇದ್ದರು.