ನವಲಿ ಆಣೆಕಟ್ಟು ನಿರ್ಮಾಣಕ್ಕೆ ಶೀಘ್ರ ಕ್ರಮಮತ್ತೆ ಅದೇ ರಾಗ ಅದೇ ಹಾಡು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.23: ತುಂಗಭದ್ರ ಹೂಳಿನಿಂದ ನಷ್ಟವಾಗುತ್ತಿರುವ ನೀರು ಮತ್ತು ರೈತರ ಎರಡನೇ ಬೆಳೆಯ ನೀರಿನ ಸಂಕಷ್ಟಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತೆ ಅದೇ ರಾಗ, ಅದೇ ಹಾಡು ಹಾಡಿದ್ದಾರೆ.
ನಿನ್ನೆ ಡ್ಯಾಂಗೆ ಬಾಗೀನ ಅರ್ಪಿಸಿದ ನಂತರ ಮುನಿರಬಾದ್ ನಲ್ಲಿ ನಡದ ಸಮಾರಂಭದಲ್ಲಿ
ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಮುಂದಾಗುತ್ತೇವೆ. ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಿದ್ದೇವೆ. ಸುಮಾರು ಹದಿನೈದು ಸಾವಿರ ಎಕರೆ ಭೂಮಿ ಇದಕ್ಕೆ ಬೇಕಾಗಿದೆ. ಈ ಕುರಿತು ನೆರೆಯ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ” ಎಂದಿದ್ದಾರೆ. ಈ ರೀತಿ ಆಂದ್ರಪ್ರದೇಶದ ಜೊತೆ ಮಾತನಾಡುವೆ ಎಂದು ಹಲವು ಬಾರಿ ಹೇಳಿದ್ದಾರೆ ಅದರೆ ಒಂದು ಬಾರಿಯೂ ಆಗಿಲ್ಲ.
“ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣಕ್ಕೆ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ  ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಅಣೆಕಟ್ಟು. ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಸಹಕಾರವನ್ನು ಕೇಳಲಾಗುವುದು” ಎಂದಿದ್ದಾರೆ.
ಈ ರೀತಿ ಡ್ಯಾಂಗೆ ಬಂದ ಜಲ ಸಂಪನ್ಮೂಲ ಸಚಿವರು, ಮುಖ್ಯ ಮಂತ್ರಿಗಳು ಬರೀ ಬಾಯಿ ಮಾತು ಹೇಳಿದ್ದಾರೆ ಹೊರೆತು, ಕ್ರಿಯಾತ್ಮಕವಾಗಿ ನಡೆದಿಲ್ಲ.