ನಗರದ ಐವರಿಗೆಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ. 23: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಇದೇ ಮೊದಲಬಾರಿಗೆ ಜಿಲ್ಲೆಯ ವ್ಯಾಪಾರ – ವಾಣಿಜ್ಯೋದ್ಯಮಿಗಳನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿರುವ `ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2024’ನ್ನು  ಐವರಿಗೆ ಸಾಧಕರಿಗೆ ಪ್ರದಾನ ಮಾಡಿದೆ.
ನಗರದ ಬಲಿಜ ಭವನದಲ್ಲಿ ನಿನ್ನೆ ನಡೆದ ಸಂಸ್ಥೆಯ 71ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಾಂಪ್ರದಾಯಿಕ ಕಲೆ ಮತ್ತು ಬೋಟಿಕ್ ವಿಭಾಗದಲ್ಲಿ  ಪ್ರಕೃತಿ ಸೋರಪ್ಪು ಅವರಿಗೆ `ಬಿಡಿಸಿಸಿ ಅಂಡ್ ಐ ವುಮನ್ ಎಂಟ್ರಿಪ್ಯುನರ್’ ಅವಾರ್ಡ್,
ಪ್ರಥಮ ದರ್ಜೆ ಗುತ್ತಿಗೆದಾರ ಮಸೀದಿಪುರ  ಸಿದ್ಧರಾಮನಗೌಡ ಅವರಿಗೆ  ಮೂಲಭೂತ ಸೌಲಭ್ಯಗಳ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಇನ್ಫಾç ಅವಾರ್ಡ್’ ಮತ್ತು ಸತ್ರಾಲ ರಮೇಶ್ ಅವರಿಗೆ ಜ್ಯುಯಲರಿ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಎಂಟ್ರಿಪ್ಯುನರ್’ ಅವಾರ್ಡ್.
ಗಣಪಾಲ್ ಐನಾಥ್‌ರೆಡ್ಡಿ ಅವರಿಗೆ ಫರ್ಟಿಲೈಜರ್ ಅಂಡ್ ಕೆಮಿಕಲ್ಸ್ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಅಗ್ರಿಪ್ಯುನರ್’ ಮತ್ತು ಸುಧಾಕರ ಪೈಪ್ಸ್ನ ಅನಂತುಲ ಸುಧಾಕರ್ ಅವರಿಗೆ ಕೈಗಾರಿಕಾ ಉತ್ಪನ್ನ ವಿಭಾಗದಲ್ಲಿ `ಬಿಡಿಸಿಸಿ ಅಂಡ್ ಐ ಮ್ಯಾನ್ಯುಫಕ್ಚರಿಂಗ್ ಬ್ಯುಸಿನೆಸ್ ಅವಾರ್ಡ್’ ಪ್ರದಾನ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮತ್ತು ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಅವರು, `ಬಿಡಿಸಿಸಿ ಅಂಡ್ ಐ ಬ್ಯುಸಿನೆಸ್ ಅವಾರ್ಡ್-2024′ ಅವಾರ್ಡ್ಗಳು ವೃತ್ತಿ ನಾವೀನ್ಯತೆ, ನಾಯಕತ್ವ ಮತ್ತು ಉದ್ಯಮದಲ್ಲಿರುವ ಸಾಧನೆಯನ್ನು ಗುರುತಿಸಿ ಗೌರವಿಸುವ ವೇದಿಕೆಯಾಗಿದೆ. ಈ ಪ್ರಶಸ್ತಿ – ಪುರಸ್ಕಾರ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆಗಳಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಲು, ಸ್ಟಾರ್ಟ್ಅಪ್‌ಗಳನ್ನು ಬೆಳೆಸುವ ನಿಟ್ಟಿನಲ್ಲಿ ಪೂರಕವಾಗಿವೆ ಎಂದರು.‌
`ಬಿಡಿಸಿಸಿ ಅಂಡ್ ಐ ವುಮನ್ ಎಂಟ್ರಿಪ್ಯುನರ್’ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿದ  ಪ್ರಕೃತಿ ಸೋರಪ್ಪು ಅವರು, ಮಹಿಳೆಯಾದ ನನ್ನನ್ನು ಗುರುತಿಸಿ, ಪ್ರಶಸ್ತಿ  – ಪುರಸ್ಕಾರ ನೀಡಿ ಗೌರವಿಸಿದ್ದಕ್ಕಾಗಿ, ಜಿಲ್ಲೆಯ ಮಹಿಳಾ ಉದ್ಯಮಿಗಳ ಸಾಧನೆಗೆ ಪ್ರೋತ್ಸಾಹ ನೀಡಿದಂತಾಗಿದೆಂದರು.‌
2023-24ರ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ರ‍್ಯಾಂಕ್‌ಗಳನ್ನು ಪಡೆದು, ತೇರ್ಗಡೆ ಆಗಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯ್ತು.
ಶ್ರೀನಿವಾಸರೆಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು  ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.