ವಿಧಾನ ಪರಿಷತ್ ಚಿಂತಕ ಚಾವಡಿ ಅನರ್ಹರ ಪ್ರವೇಶ ಕಳವಳಕಾರಿ
ಕೋಲಾರ, ಮೇ ೨೩-ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಪ್ರಮುಖ ಅಂಗವಾಗಿದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ ಎರಡು ವಿಧವಾದ ಜನಪ್ರತಿನಿಧಿಗಳ ಆಯ್ಕೆ ಮಾಡಬೇಕಾಗಿರುವುದು ಮತದಾರರ ಜವಾಬ್ದಾರಿಯಾಗಿದೆ. ಈ ಪೈಕಿ ವಿಧಾನ ಪರಿಷತ್‌ನ್ನು ಚಿಂತಕರ ಚಾವಡಿಯೆಂದೇ ಬಿಂಬಿತವಾಗಿದೆ. ಮೇ,೩ ರಂದು ಅಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಡಾ,ವೈ.ಎ. ನಾರಾಯಣಸ್ವಾಮಿಯವರು ಸ್ವರ್ಧಿಸಿದ್ದಾರೆ.ಅವರಿಗೆ ಎಲ್ಲಾ ಶಿಕ್ಷಕರು ತಮ್ಮ ಮತವನ್ನು ನೀಡುವ ಮೂಲಕ ವಿಧಾನ ಪರಿಷತ್‌ಗೆ ಯೋಗ್ಯರಾದವರನ್ನು ಆಯ್ಕೆ ಮಾಡ ಬೇಕೆಂದು ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು,
ನಗರ ಹೊರವಲಯದ ಮೂರಂಡಹಳ್ಳಿ ಸಮೀಪದ ಸಿ.ಬಿ.ಐ.ಟಿ. ಕಾಲೇಜಿಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಡಾ. ವೈ.ಎ.ನಾರಾಯಣಸ್ವಾಮಿ ಪರವಾಗಿ ಶಿಕ್ಷಕರ ಮತಯಾಚನೆಗಾಗಿ ಆಯೋಜಿಸಿದ್ದ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು,
ವಿಧಾನ ಪರಿಷತ್ ಸಹ ಇಂದು ತನ್ನ ಮೌಲ್ಯವನ್ನು ಕಳೆದು ಕೊಂಡು ರಾಜಕೀಯ ಪ್ರವೇಶವಾಗಿದೆ.ರಾಜಕಾರಣದಲ್ಲಿ ಸ್ಥಾನಮಾನಗಳಿಂದ ವಂಚಿತರಾದವರಿಗೆ ಆರ್ಹರಲ್ಲದವರಿಗೂ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸುವಂತ ಪರಿಪಾಠವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು,
ವಿಧಾನ ಪರಿಷತ್‌ಗೆ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರ, ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಮೂಲಕ ಪ್ರತಿನಿಧಿಸಿರುವಂತ ಪ್ರಜ್ಞಾವಂತರು ರಾಜ್ಯದ ವಿವಿಧ ಕ್ಷೇತ್ರಗಳ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ನೀಡುವ ಮೂಲಕ ಸಮಾಜಕ್ಕೆ ಉತ್ತಮವಾದ ಮಾರ್ಗದರ್ಶನವನ್ನು ನೀಡಿ ಅಮೂಲ್ಯವಾದ ಬದಲಾವಣೆಯನ್ನು ತರುವುದಾಗಿದೆ ಎಂದು ಅಭಿಪ್ರಾಯ ಪಟ್ಟರು,
ನೀರಾವರಿ ಅಧ್ಯಾಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ನಾನು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಯರ್‌ಗೋಳ್, ಎತ್ತಿನ ಹೊಳೆ ಯೋಜನೆಗಳನ್ನು ಮಂಜೂರು ಮಾಡಿದ್ದೆ ಎಂದು ನೆನಪಿಸಿದರು,
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತದಲ್ಲಿ ೫ ಗ್ಯಾರೆಂಟಿಗಳ ಉಚಿತ ಕೊಡುಗೆಯಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ನಿರುದ್ಯೋಗಿಗಳನ್ನಾಗಿ ಮಾಡಿ ಜೀವನ ಶೈಲಿಯಲ್ಲಿ ನಿರುದ್ಯೋಗಿಗಳಾಗಿ ಬದಲಾವಣೆ ತರುತ್ತಿರುವುದು ಮುಂದಿನ ದಿನದಲ್ಲಿ ದುಷ್ಪರಿಣಾಮ ಬೀರಲಿದೆ. ಇದಕ್ಕೆ ವೆಚ್ಚ ಮಾಡುತ್ತಿರುವ ನೊರಾರು ಕೋಟಿ ರೂಗಳನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಿದ್ದಲ್ಲಿ ಶಾಶ್ವತವಾದ ಸ್ವಾವಲಂಭಿಗಳನ್ನಾಗಿಸ ಬಹುದಾಗಿತ್ತು ಎಂದು ತಿಳಿಸಿದರು,
ವೈ.ಎ.ನಾರಾಯಣಸ್ವಾಮಿ ಅವರನ್ನು ಈ ಬಾರಿಯೂ ಆಯ್ಕೆ ಮಾಡಿದಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ನಿಮ್ಮ ವಿಶ್ವಾಸಕ್ಕೆ ಚುಕ್ತಿ ಬಾರದಂತೆ ನಡೆದು ಕೊಳ್ಳುತ್ತಾರೆ ಎಂದರು,
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ಕಳೆದ ೧೮ ವರ್ಷಗಳಿಂದ ವೈ.ಎ.ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡುತ್ತಾ ತಮ್ಮ ಸೇವೆಗೆ ಅವಕಾಶ ಕಲ್ಪಿಸಿದ್ದು ಹಲವಾರು ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಂಡಿದ್ದೀರಿ ಎಂದರು. ನಮ್ಮ ಎರಡು ಶಿಕ್ಷಣ ಸಂಸ್ಥೆಗಳ ಶಿಕ್ಷಕರು ವೈ.ಎ.ಎನ್. ಅವರಿಗೆ ಸಂಪೂರ್ಣವಾಗಿ ಬೆಂಬಲಿಸಿ ಮತ ನೀಡುವ ಮೂಲಕ ಗೆಲ್ಲಿಸುವ ವಿಶ್ವಾಸವನ್ನು ವ್ಯಕ್ತ ಪಡೆಸಿದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್. ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ವೈ.ಎ.ನಾರಾಯಣಸ್ವಾಮಿ ಸಹೋದರ ವೀರಭದ್ರಪ್ಪ, ಲೋಕಸಭಾ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಜೆ.ಡಿ.ಎಸ್. ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಉಪಸ್ಥಿತರಿದ್ದರು,