ದೇವರಿಗೆ ಅರ್ಪಿಸಿದ ವಸ್ತ್ರಗಳ ಮಾರಾಟ ಸ್ಥಳ ಕಸದ ಡಬ್ಬಿ
ಸಂಜೆವಾಣಿ ನ್ಯೂಸ್
ನಂಜನಗೂಡು.ಮೇ.23:- ನಂಜನಗೂಡು ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ ಬಂದಂತ ಭಕ್ತಾದಿಗಳು ಶಿವ ಪಾರ್ವತಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಭಕ್ತರು ದೇವರಿಗೆ ವಸ್ತ್ರಗಳು ಮತ್ತು ಸೀರೆಗಳನ್ನು ನೀಡುತ್ತಾರೆ ಇದನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡುತ್ತಾರೆ ಅರ್ಪಿಸಿರುವ ವಸ್ತ್ರಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪಡೆದುಕೊಂಡು ರಿಯಾತಿ ದರದಲ್ಲಿ ದೇವಸ್ಥಾನ ಆಡಳಿತ ವತಿಯಿಂದ ಬಂದಂತ ಭಕ್ತಾದಿಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ವಸ್ತ್ರಗಳನ್ನು ಮಾರಾಟ ಮಾಡುತ್ತಿಲ್ಲ ಆದ್ದರಿಂದ ಮಾರಾಟ ಮಾಡುವ ಸ್ಥಳ ಕಸ ಶೇಖರಣೆ ಡಬ್ಬಿಯಾಗಿದೆ ಇದನ್ನು ಕಂಡು ಭಕ್ತಾದಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ ಬಟ್ಟೆ ಮಾರಾಟನೂ ಇಲ್ಲ ಸ್ವಚ್ಛತೆಯು ಇಲ್ಲ ದೇವರಿಗೆ ಅರ್ಪಿಸಿರುವ ವಸ್ತ್ರಗಳು ಮಾರಾಟ ಮಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಭಕ್ತಾದಿಗಳು ದೇವರ ಪೂಜೆಗೆ ನೀಡಿದ ವಸ್ತ್ರಗಳನ್ನು ರಿಯಾಯಿತಿ ದರದಲ್ಲಿ ಭಕ್ತಾದಿಗಳಿಗೆ ಹರಾಜಿನ ಮೂಲಕ ನೀಡುತ್ತಿದ್ದರು ಭಾನುವಾರ ಸೋಮವಾರ ಹುಣ್ಣಿಮೆ ರಜಾದಿನಗಳಲ್ಲಿ ದೇವಸ್ಥಾನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಅಂತಹ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸೀರೆಗಳು ಮತ್ತು ಸಲ್ಯಗಳು ಪಂಚೆಗಳನ್ನು ಹರಾಜಿನ ಮೂಲಕ ನೀಡುತ್ತಿದ್ದರು ಆದರೆ ಕೆಲವು ವರ್ಷಗಳಿಂದ ದೇವಸ್ಥಾನ ಮುಂಭಾಗ ವಸ್ತ್ರಗಳನ್ನು ಮತ್ತು ಸೀರೆಗಳನ್ನು ಮಾರಲು ನಿಗದಿತ ಸ್ಥಳ ಮಾಡಲಾಗಿದೆ ಹರಾಜಿನ ಮೂಲಕ ಮಾಡದೆ ನಿಗದಿತ ಬೆಲೆ ನಿಗದಿ ಮಾಡಿ ವಸ್ತ್ರ ಗಳ ಮೇಲೆ ಬಿಲ್ಲನ್ನು ಹಾಕಿ ಬೆಳಿಗ್ಗೆಯಿಂದ ಸಂಜೆವರೆಗೂ ಮಾರಾಟ ಮಳಿಗೆಯಲ್ಲಿ ಇದ್ದು ಮಾರುತಿದ್ದರು ಕೆಲವು ತಿಂಗಳುಗಳಿಂದ ದೇವರಿಗೆ ಅರ್ಪಿಸಿರುವ ಸೀರೆ ಮತ್ತು ವಸ್ತ್ರಗಳನ್ನು ಮಾರಾಟ ಮಾಡದೆ ಇರುವುದರಿಂದ ಮಾರಾಟ ಮಳಿಗೆ ಕುಡಿಯಲು ಕಸ ತುಂಬಿಕೊಂಡು ಗುಜರಿ ರೀತಿ ಮಾಡಿಕೊಂಡಿದ್ದಾರೆ.
ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳು ದೇವರಿಗೆ ಅರ್ಪಿಸಿದ ಸೀರೆಗಳು ಸಲ್ಯಾ ಪಂಚೆಗಳನ್ನು ತೆಗೆದುಕೊಳ್ಳಲು ಅಕ್ಕಪಕ್ಕ ಕೇಳುತ್ತಿದ್ದಾರೆ ಸರಿಯಾದ ಮಾಹಿತಿ ಇಲ್ಲದೆ ಮತ್ತು ದೇವಸ್ಥಾನದ ವತಿಯಿಂದ ಮಾರಾಟ ಮಾಡದೆ ಇರುವುದರಿಂದ ಭಕ್ತಾದಿಗಳಿಗೆ ವಸ್ತ್ರಗಳು ಸಿಗುತ್ತಿಲ್ಲ ಬಂದಂತ ವಸ್ತ್ರಗಳನ್ನು ದೇವಸ್ಥಾನದ ಸಂಬಂಧಪಟ್ಟ ರೂಮಿನಲ್ಲಿ ಶೇಖರಣೆ ಮಾಡುತ್ತಿದ್ದಾರೆ ಜೊತೆಗೆ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡದೆ ರೂಮಿನಲ್ಲಿ ಕೆಲವರಿಗೆ ಮತ್ತು ಅವರವರಿಗೆ ಸಂಬಂಧಪಟ್ಟವರಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ ಎಂದು ಕೇಳಿಬರುತ್ತಿದೆ ಒಟ್ಟಿನಲ್ಲಿ ಭಕ್ತಾದಿಗಳು ದೇವರಿಗೆ ಅರ್ಪಿಸಿದ ವಸ್ತ್ರ ಮತ್ತು ಸೀರೆಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಿಗುತ್ತಿಲ್ಲ ಕಡಿಮೆ ದರದಲ್ಲಿ ಯಾರ ಪಾಲಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಯಾಕೆಂದರೆ ದೇವಸ್ಥಾನದ ವತಿಯಿಂದ ಮಾರಾಟ ಮಾಡುವ ಸ್ಥಳದಲ್ಲಿ ಮಾರುತಿಲ್ಲ ಅದು ಕಸದ ಬುಟ್ಟಿಯಾಗಿದೆ ಆದ್ದರಿಂದ ಯಾರಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಕಾರಣ ಮಾರಾಟ ಮಳಿಗೆಯಲ್ಲಿ ಮಾರಿದರೆ ಈ ಅನುಮಾನ ಬರುವುದಿಲ್ಲ ಮುಂದಾದರು ಮಾರಾಟ ಮಳಿಗೆಯಲ್ಲಿ ಮಾರಾಬೇಕೆಂದು ಭಕ್ತಾದಿಗಳು ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ ಮಳಿಗೆಯಲ್ಲಿ ಮಾರಿದರೆ ದೇವಸ್ಥಾನಕ್ಕೆ ಬರುವಂತಹ ಎಲ್ಲಾ ಭಕ್ತಾದಿಗಳಿಗು ರಿಯಾಯಿತಿ ದರದಲ್ಲಿ ಸಿಗುತ್ತದೆ ಎಂದು ಭಕ್ತಾದಿಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.