ಬಿತ್ತನೆ ಬಿಜೋಪಚಾರ ರೈತರಿಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ
ಸೇಡಂ, ಮೇ,23: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡ ಹಿನ್ನೆಲೆಯಲ್ಲಿ ಸೇಡಂ ತಾಲೂಕಿನ ರೈತರಿಗೆ ನಟೇ ರೋಗದ ನಿರ್ವಹಣೆ ಕುರಿತು,ತೊಗರಿಬೇಳೆ ಪರಿವರ್ತನೆ ಮಾಡುವುದು, ಬೋದು ಮಾಡಿ ಬಿತ್ತನೆ ಮಾಡುವುದು, ಬಿತ್ತನೆ ಬಿಜೋಪಚಾರ ಮಾಡುವುದು, ನೀರಾವರಿ ಸೌಲಭ್ಯ ಇರುವ ರೈತರು ಕನಿಷ್ಠ 1 ಅಥವಾ 2 ಸಲ ನೀರು ಹಾಯಿಸುವುದು ಮುಂತಾದ ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್ ಅವರು ಇಂದು ಅರಿವು ಮೂಡಿಸಿದರು. ಈ ವೇಳೆಯಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ಸುಮಾರು ರೈತರು ಉಪಸ್ಥಿತರಿದ್ದರು.
ನಮ್ಮ ತಾಲೂಕಿನ ಕೃಷಿ ಅಧಿಕಾರಿಗಳು ರೈತರಿಗೆ ಬಿಜೋಪಚಾರ ಮಾಡುವುದು ರೈತರಿಗೆ ಅನುಭವದ ಜ್ಞಾನ ಕೊಡುತ್ತಿದ್ದಾರೆ ಮತ್ತು ರೈತರಿಗೆ ಬೆಳೆ ಪರಿವರ್ತನೆ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿದ್ದಾರೆ ರೈತರು ಸದುಪಯೋಗ ಪಡೆದುಕೊಳ್ಳಬೇಕು.
ಸೋಮನಾಥ ರೆಡ್ಡಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ
ಪ್ರಗತಿಪರ ರೈತರು ಕೋಡ್ಲಾ