ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಅಥಣಿ :ಮೇ.23: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಗಳಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷದಂತೆ ಈ ಬಾರಿಯೂ 4ನೇ ವರ್ಷದ ರಾಜ್ಯ ಮಟ್ಟದ ಕೋಳಿ ಸಮಾಜದ 37 ಪರ್ಯಾಯ ಜಾತಿಗಳ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಚಿಕ್ಕೋಡಿ ವಿಭಾಗ ಕೋಳಿ ಸಮಾಜ ಸಂಘ ಮತ್ತು ವ್ಯಾಸ ಮಹರ್ಷಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸಲಾಗುವುದು. ಅರ್ಹ ವಿದ್ಯಾರ್ಥಿಗಳು
ಸ್ವ- ವಿವರಗಳೊಂದಿಗೆ ಎರಡು ಭಾವಚಿತ್ರ, ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರಗಳನ್ನೊಳಗೊಂಡ ಅರ್ಜಿಯನ್ನು ಜೂನ್ 30 ಒಳಗೆ ಅಂಚೆಯ ಮೂಲಕ ಅಥವಾ ನೇರವಾಗಿ ಕಳುಹಿಸಬಹುದು
ವಾಟ್ಸಪ್‍ದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ
ಮೋ. 9448863655, 9449107947 ಸಂಪರ್ಕಿಸುವಂತೆ ಎಸ್ ಕೆ ಹೊಳೆಪ್ಪನವರ ಕೋರಿದ್ದಾರೆ.
ಅರ್ಜಿ ಕಳಿಸುವ ವಿಳಾಸ: ಎಸ್. ಕೆ. ಹೊಳೆಪ್ಪನವರ, ಬಸವನಗರ ಅಥಣಿ ತಾ. ಅಥಣಿ. ಜಿಲ್ಲಾ ಬೆಳಗಾವಿ- 591304