ವಚನ ಸಾಹಿತ್ಯ 21ನೇ ಶತಮಾನಕ್ಕೆ ಸಂಜೀವಿನಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.೨೨;  21ನೇ ಶತಮಾನದ ಸಮಾಜೋ ಧಾರ್ಮಿಕ ಸವಾಲುಗಳಿಗೆ 12ನೇ ಶತಮಾನದ ಶರಣರ ವಚನಗಳು ಉತ್ತರವಾಗ ಬಲ್ಲವೂ ಎಂದು   ಮೈಸೂರಿನ ನಿವೃತ್ತ ಶಿಕ್ಷಣಾಧಿಕಾರಿಗಳಾದ ಭರ್ಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಮತ್ತು ಎಸ್. ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಇವರ ಸಹಯೋಗದಲ್ಲಿ  ಏರ್ಪಡಿಸಲಾಗಿದ್ದ ಕಾಯಕ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ವಚನಗಳಲ್ಲಿ ವೈಚಾರಿಕತೆ”ಎಂಬ ವಿಷಯ ಕುರಿತು ಉಪನ್ಯಾಸ ನೀಡಿ 21ನೇ ಶತಮಾನದಲ್ಲಿ 12ನೇ ಶತಮಾನದಲ್ಲಿದ್ದ ಎಲ್ಲಾ ವರ್ಗ, ಜಾತಿ, ಕೋಮುವಾದ ಮೂಲಭೂತವಾದ ಜನಾಂಗ ದ್ವೇಷ ಮುಂತಾದವುಗಳು ಇನ್ನು ಜೀವಂತವಾಗಿದ್ದು ಅವುಗಳನ್ನು ನಿರ್ಮೂಲನೆ ಮಾಡಲು ಶರಣರ ಆಶಯಗಳೊಂದಿಗೆ ಜನಮಾನಸದಲ್ಲಿ ವಚನ ಸಾಹಿತ್ಯವನ್ನು ಪಸರಿಸ ಬೇಕಾದ ತುರ್ತು ಅಗತ್ಯ ಇದೆ ಎಂದು ಮಾತನಾಡಿದರು.ಎಸ್ ಬಿ ಸಿ ಮಹಿಳಾ ಕಾಲೇಜಿನಪ್ರಾಂಶುಪಾಲರಾದ  ಕೆ ಷಣ್ಮುಖ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ  ಶರಣರ ವಚನಗಳು ಎಂದೆಂದಿಗಿಂತ ಇಂದು ತುಂಬಾ ಅಗತ್ಯವಾಗಿ ಇಂದಿನ ಕಲುಷಿತ ಸಮಾಜವನ್ನು ಬದಲಾಯಿಸಲು ಅಗತ್ಯವಾಗಿ ಬೇಕಾಗಿದೆ ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಶರಣ ಕೆ ಬಿ ಪರಮೇಶ್ವರಪ್ಪ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರು ಅಧ್ಯಕ್ಷ ನುಡಿಗಳನ್ನಾಡಿದರು. ದತ್ತಿ ದಾನಿಗಳಾದ ಶರಣ ಎಂ.ಟಿ ಜಯಪ್ಪ, ಈ ದತ್ತಿಯನ್ನು ನಮ್ಮ ಕುಟುಂಬದ ಹಿರಿಯರ ನೆನಪಿಗಾಗಿ ಶರಣ ಸಾಹಿತ್ಯವನ್ನು ಪ್ರಚಾರ ಮಾಡಲು ತೊಡಗಿಸಲಾಗಿದೆ ಎಂದು ಮಾತನಾಡಿದರು. ಕಾಯಕ ದಿನಾಚರಣೆ ಅಂಗವಾಗಿ ಕಾಯಕ ಜೀವಿಗಳಾದ ಶರಣ ಸೈಯದ್ ಕುಮಾರ್ ಡಿಟಿಪಿ ಆಪರೇಟರ್ ದಾವಣಗೆರೆ ಮತ್ತು ಶರಣ ಎಂ ಮಂಜಪ್ಪ ಅಡಿಗೆ ತಯಾರಿಕರುಮಾಳಗೊಂಡನಹಳ್ಳಿ, ಇವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶರಣ ಎನ್.ಎಸ್.ರಾಜು ಉಪಾಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ,ಸುಶೀಲ ಸೋಮಶೇಖರ್ ಅಧ್ಯಕ್ಷರು ಜಿಲ್ಲಾ ಕದಳಿ ಮಹಿಳಾ ವೇದಿಕೆ ಆವರಗೆರೆ ರುದ್ರಮುನಿ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಪರಮೇಶ್ವರಪ್ಪ ಎಂ ಸಿರಿಗೆರೆ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಮತ್ತು ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಲ್ಲಿ ಶರಣ ಕುಮಾರಪ್ಪ ಇವರು ಸರ್ವರನ್ನು ಸ್ವಾಗತಿಸಿದರು. ಶರಣ ಬಿಟಿ ಪ್ರಕಾಶ್ ವಚನ ಪ್ರಾರ್ಥನೆ ಮತ್ತು ವಚನ ಸಮರ್ಪಣೆ ಮತ್ತು ವಚನ ಮಂಗಳ ಗೀತೆಯನ್ನು ಹಾಡಿದರು.ಶರಣ ಆರ್ .ಸಿದ್ದೇಶ್ವರಪ್ಪ ಇವರು ಕಾರ್ಯಕ್ರಮದ ನಿರೂಪಣೆ ಮಾಡಿ ಯಶಸ್ವಿಗೊಳಿಸಿದರು.