ಬೌದ್ಧ ಸಾಹಿತ್ಯ ಪರಿಷತ್ ಉದ್ಘಾಟನೆ
ಕಲಬುರಗಿ,ಮೇ.22-ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತು ರಾಜ್ಯ ಘಟಕದ ಉದ್ಘಾಟನಾ ಸಮಾರಂಭ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾ ಮಂಡಳದಲ್ಲಿ ಇಂದು ನಡೆಯಿತು.
ಸಿದ್ಧಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ ಅವರ ಸಾನಿಧ್ಯದಲ್ಲಿ ಸಂಸ್ಕøತಿ ಚಿಂತಕ ಡಾ.ಪ್ರಭು ಖಾನಾಪುರೆ ಅವರು ಪರಿಷತ್ ರಾಜ್ಯ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ, ಹಿರಿಯ ಸಾಹಿತಿ ವಿ.ಆರ್.ಚಾಂಬಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಕಾನೇಕರ್ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಗವಿಸಿದ್ದಪ್ಪ ಪಾಟೀಲ, ಕೋಶಾಧ್ಯಕ್ಷ ಡಾ.ರಾಜಕುಮಾರ ಮಾಳಗೆ, ರಾಜಶೇಖರ ಕಡಗನ್, ಡಾ.ಚಿದಾನಂದ ಕುಡ್ಡನ್, ಡಾ.ಸಿದ್ದಪ್ಪ ಹೊಸಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.