ಕಾಂಗ್ರೆಸ್ ಕಚೇರಿಯಲ್ಲಿ ಸರಡಗಿಗೆ ಸಂತಾಪ
ಕಲಬುರಗಿ,ಮೇ.22-ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾದ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಗಲಿದ ನಾಯಕನಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಕಂಬಿನಿ ಮಿಡಿದರು. ಸರಡಗಿ ಅವರ ಸರಳತೆ, ಸಮಾಜ ಮುಖಿ ಕಾರ್ಯ ಮತ್ತು ಸೇವೆಯನ್ನು ಸ್ಮರಿಸಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮುಖಂಡರಾದ ಬಾಬುರಾವ ಜಾಗಿರದಾರ, ಭಾಗಣ್ಣಗೌಡ ಪಾಟೀಲ ಸಂಕನೂರ, ನಾರಾಯಣರಾವ ಕಾಳೆ, ಜಗನ್ನಾಥ ಗೋಧಿ, ಸುಭಾಷ ರಾಠೋಡ್, ಮಜರ್ ಆಲಂಖಾನ್, ಮಜರ್ ಹುಸೇನ್, ಡಾ.ಕಿರಣ್ ದೇಶಮುಖ, ಮಹಾಂತಪ್ಪ ಸಂಗಾವಿ, ರವಿ ರಾಠೋಡ್, ಲತಾ ರವಿ ರಾಠೋಡ್ ಸೇರಿದಂತೆ ಹಲವಾರು ಜನ ಮುಖಂಡರು, ಕಾರ್ಯಕರ್ತರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.