ಮಟಕಾ: ಓರ್ವನ ಬಂಧನ
ಕಲಬುರಗಿ,ಮೇ.22-ಶಿವಾಜಿ ನಗರದ ಅಂಬಾ ಭವಾನಿ ಗುಡಿಯ ಎದರುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಐ ದಿಲೀಪ್ ನಿಂಬಾಳಕರ್ ಮತ್ತು ಸಿಬ್ಬಂದಿಗಳಾದ ಶಿವಾನಂದ, ರಾಜಕುಮಾರ ಅವರು ದಾಳಿ ನಡೆಸಿ ಶಿವಾಜಿ ನಗರದ ಬಸವರಾಜ ರೇವಪ್ಪ ಕಂಟಿ (70) ಎಂಬಾತನನ್ನು ಬಂಧಿಸಿ 2110 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ ಜಪ್ತಿ ಮಾಡಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.