ಚಿನ್ನಾಭರಣ ಕಳ್ಳತನ ಪ್ರಕರಣ: ಮೂವರ ಬಂಧನ
ವಿಜಯಪುರ, ಮೇ.22:ಚಿನ್ನಾಭರಣ ದೋಚುವ ದಂಧೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರನ್ನು ಪೆÇಲೀಸರು ಬಂಧಿಸಿದ್ದಾರೆ.
ಬೆಳಗಾವಿ ಶಿವಬಸವ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ಸವಿತಾ ಲೊಂಡೆ, ನಿಪ್ಪಾಣಿ ಬೋಧನಗರ ಬಡಾವಣೆಯ ನಿವಾಸಿಗಳಾದ ಸ್ವಪ್ನಾ ಜಾಧವ, ಪ್ರೇರಣಾ ಚೌಗಲೆ ಬಂಧಿತ ಆರೋಪಿತರು.
ಬಂಧಿತ ಆರೋಪಿತರು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಅವರಿಂದ 2.40 ಲಕ್ಷ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಬೇಧಿಸಲು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ, ಡಿಎಸ್ಪಿ ಬಸವರಾಜ ಯಲಿಗಾರ, ಗಾಂಧಿ ಚೌಕ ಪೆÇಲೀಸ್ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಧಾಮಣ್ಣವರ ಪಿ.ಐ ಗಾಂಧಿಚೌಕ ಪೆÇಲೀಸ್ ಠಾಣೆ ಅವರ ನೇತೃತ್ವದಲ್ಲಿ ರಚಿಸಿದ ವಿಶೇಷ ತನಿಖಾ ತಂಡ ಆರೋಪಗಳನ್ನು ಪತ್ತೆ ಹಚ್ಚಿದೆ. ತನಿಖಾ ತಂಡವು ವಿಜಯಪುರ ಜಿಲ್ಲೆಗೆ ಬರುವ ಅಂತರ ಜಿಲ್ಲಾ ಕಳ್ಳರ ಮಾಹಿತಿ ಸಂಗ್ರಹಿಸಿ ವಿಜಯಪುರ ಸೆಟ್‍ಲೈಟ್ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ಕಳ್ಳತನ ಮಾಡುವ ಮಹಿಳಾ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.