ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ ಉದ್ಘಾಟನೆ
ಕಲಬುರಗಿ,ಮೇ 22: ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ
ದಿಂದ ಬಿಲ್ಡಿಂಗ್ ವಲ್ಡ್ರ್ಸ್ : ಕಾರ್ಡ್‍ಬೋರ್ಡ್ ಮತ್ತು ಎಕ್ಸ್‍ಆರ್ ಯೂನಿಟಿಯೊಂದಿಗೆ ವಿಆರ್ ಅಭಿವೃದ್ಧಿಯ ಕುರಿತು ಒಂದು ವಾರದ ಕಾರ್ಯಾಗಾರವನ್ನು ಐಎಸ್‍ಟಿಇ(ನವದೆಹಲಿ) ಮತ್ತು ಐಇಐ ಸಂಘದ ಅಡಿಯಲ್ಲಿ ಆಯೋಜಿಸಲಾಯಿತು. ಕಾರ್ಯಾಗಾರವನ್ನು ಗುಲಬರ್ಗ ವಿವಿ ಉಪ ಕುಲಪತಿ ಡಾ. ದಯಾನಂದ ಅಗಸರ್ ಉದ್ಘಾಟಿಸಿದರು.ಹೈಕ ಶಿ ಸಂಸ್ಥೆ ಕಾರ್ಯದರ್ಶಿ ಉದಯ್ ಕುಮಾರ್ ಚಿಂಚೋಳ್ಳಿ ಅಧ್ಯಕ್ಷತೆ ವಹಿಸಿದರು. ಪ್ರಾಚಾರ್ಯ ಡಾ.ಎಸ್.ಆರ್. ಮೀಸೆ ಸ್ವಾಗತಿಸಿದರು.ಮುಖ್ಯ ಅತಿಥಿ ಡಾ. ದಯಾನಂದ ಅಗಸರ್‍ಆರ್ಟಿಫಿಕಲ್ ಇಂಟೆಲಿಜೆನ್ಸ್ ಉಪಯುಕ್ತತೆ ಬಗೆ ಮಾಹಿತಿ ನೀಡಿದರು. ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಅನಿಲ್ ಪಟ್ಟಣ್ ಉಪಸ್ಥಿತರಿದ್ದರು .ಪೆÇ್ರ. ಮಲ್ಲಿನಾಥ್ ಸ್ವಾಮಿ ಅವರು ಕಾರ್ಯಾಗಾರ ಬಗೆ ಮಾಹಿತಿ ನೀಡಿದರು. ಡಾ.ನಾಗೇಶ್ ಸಾಲಿಮಠ ರಿಸೋರ್ಸ್ ಪೆರ್ಸನ್ಸ್ ಕುರಿತು ಮಾತನಾಡಿದರು. ಉದಯ್ ಎಸ ಬಲಗಾರ ವಂದನಾರ್ಪಣೆ ಮಾಡಿದರು .ಡಾ.ಎಸ್ ಆರ್ ಹೊಟ್ಟಿ .ಡಾ. ಶ್ರೀದೇವಿ ಸೋಮ,ಡಾ. ಭಾರತಿ ಹರಸೂರ್, ಡಾ. ವಿಶ್ವನಾಥ್ ಬುರ್ಕಪಲ್ಲಿ, ಪೆÇ್ರಫ್. ಅಶೋಕ್ ಪಾಟೀಲ್ ಹಾಗು ವಿವಿಧ ವಿಭಾಗದ ಮುಖ್ಯಸ್ಥರು , ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು . ಪೆÇ್ರ. ಅಶ್ವಿನಿ ಹತ್ತಿ ಕಾರ್ಯಕ್ರಮದ ನಿರೂಪಣೆ ಮಾಡಿದರು.