ಬೈಕ್‍ಗಳ ಮುಖಾಮುಖಿ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು
ಸೈದಾಪುರ:ಮೇ.22:ಪಟ್ಟಣದ ಹೊರ ವಲಯದಲ್ಲಿರುವ ರೈಸ್ ಮಿಲ್ ಹತ್ತಿರ ಸೋಮವಾರ ರಾತ್ರಿ 7:40ರ ಸುಮಾರಿಗೆ ಎರಡು ಬೈಕ್‍ಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತರಾದರೆ ಓರ್ವ ಯುವಕ ಗಂಭೀರ ಗಾಯಗೊಂಡು ರಾಯಚೂರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ದುರ್ಘಟನೆಯಲ್ಲಿ ಸೈದಾಪುರ ಪಟ್ಟಣದ ಮೌನೇಶ ಉಜ್ಜೇಲಿ (23) ಮತ್ತು ಕೊಂಡಾಪುರ ಗ್ರಾಮದ ಅಶೋಕ(19) ಈ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೂರು ಗ್ರಾಮದ ಭಾಗಪ್ಪ (29)ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಪೆÇೀಲಿಸರು ಭೇಟಿ, ನೀಡಿ ಪರಿಶೀಲನೆ ಮಾಡಿದ್ದೂ, ಸೈದಾಪುರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆಳೆಯರ ಬಳಗದಿಂದ ಸಂತಾಪ ಸೂಚನೆ:ದುರ್ಘಟನೆಯಲ್ಲಿ ಮೃತಪಟ್ಟ ಮೌನೇಶ ಯುವಕ ತನ್ನ ತಾಯಿಗೆ ಏಕೈಕ ಮಗನಾಗಿದ್ದ. ಚಿಕ್ಕವನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿಯೇ ಬೆಳದು ಸದ್ಯ ಎಲೆಕ್ಟ್ರೀಕಲ್, ಬ್ಯಾಟರಿ ರಿಪೇರಿ ಕೆಲಸ ಮಾಡುತ್ತಾ ತಾಯಿಗೆ ಆಸರೆಯಾಗಿದ್ದ. ಮಗನ ಸಾವಿನಿಂದಾಗಿ ಆ ತಾಯಿಗೆ ಬರ ಸಿಡಿಲು ಬಡಿದಂತಾಗಿದೆ. ಪಟ್ಟಣದಲ್ಲಿ ಅತ್ಯಂತ ಕ್ರೀಯಾಶೀಲ ಯುವಕನಾಗಿದ್ದ ಮೌನೇಶ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಶ್ರಮಧಾನ ಮಾಡುವ ಮೂಲಕ ಮೆಚ್ಚುಗೆಗಳಿಸುವುದರ ಜತೆ ದೊಡ್ಡ ಗೆಳಯರ ಬಳಗವನ್ನು ಹೊಂದಿದ್ದನು. ಈ ದುರಂತ ನಮಗೆ ಅರಗಿಸಿಕೊಳ್ಳುವುದಕ್ಕೆ ಸಾದ್ಯವಾಗುತ್ತಿಲ್ಲ ಎಂದು ಗ್ರಾಪಂ ಸದಸ್ಯ ರಾಕೇಶ ಕೋರೆ ಮತ್ತು ಗೆಳೆಯರ ಬಳಗದವರು ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಕುಟುಂಬ ವರ್ಗಕ್ಕೆ ದುಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.