ನಾಟಕಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆ: ಹಾಸಿಂಪೀರ
ವಿಜಯಪುರ,ಮೇ.22: ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅರಿವು ಮೂಡಿಸುವುದೇ ನಾಟಕಗಳ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಹಿಟ್ಟಿನಹಳ್ಳಿ ಗ್ರಾಮದಲ್ಲಿ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆಯ ನಿಮಿತ್ತ ಏರ್ಪಡಿಸಿದ ಕಾಲು ಕೆದರಿದ ಹುಲಿ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿ, ಏಳಗಿ ಬಾಳಪ್ಪ ” ಕರ್ನಾಟಕ ಏಕೀಕರಣ” ನಾಟಕ ಮೂಲಕ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸಿದರು. ನಾಟಕಗಳು ಸಮಾಜ ತಿದ್ದುವದರ ಜೊತೆಗೆ ಕಲೆ, ಸಂಸ್ಕøತಿ ಸಾಹಿತ್ಯ, ಸಂಗೀತದ ಅಭಿರುಚಿ ಬೆಳೆಸುತ್ತದೆ. ಬಹು ದಶಕಗಳಿಂದ ವಿಜಯಪುರ ನಗರದಲ್ಲಿರುವ ರಾಣಿ ಚನ್ನಮ್ಮ ನಾಟಕ ಆಲಯದಲ್ಲಿ (ಥೇಟರ) ನಾಟಕಗಳ ಪ್ರದರ್ಶನವಾಗುತ್ತಿಲ್ಲ. ಇದರಿಂದ ನಾಟಕ ಕಲಾವಿದರು ಹಾಗೂ ರಂಭೂಮಿ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ ಎಂದರು.
ಜಿಲ್ಲಾಡಳಿತ ತ್ವರಿತವಾಗಿ ರಾಣಿ ಚನ್ನಮ್ಮ ಥೇಟರ ಖಾಸಗಿಯವರ ಕಬ್ಜಾದಿಂದ ಉಳಿಸಬೇಕು. ಸಾವಿರಾರು ಗ್ರಾಮೀಣರಿಗೆ ನಾಟಕವೊಂದೆ ಮನರಂಜನೆಯ ಕೇಂದ್ರವಾಗಿದೆ. ನೀನಾಸಂ, ರಂಗಾಯಣ, ಜಮುರಾ, ಸಾಣೆಹಳ್ಳಿ ನಾಟಕಗಳು ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಇತಿಹಾಸ ಹೊಂದಿರುವ ಪರಂಪರೆಗಳ ಆಧಾರದಲ್ಲಿ ನಾಟಕ ಪ್ರದರ್ಶನ ನೀಡಿದ್ದರಿಂದ ಪ್ರಸಿದ್ಧಿ ಪಡೆದಿವೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಡಾ. ಶಶಿಧರ ಇಂಡಿ ಮಾತನಾಡಿದರು.
ದುಂಡಯ್ಯ ಹಿರೇಮಠ, ಪ್ರಕಾಶ ಚಿಕ್ಕಲಕಿ, ಸಿದಗೊಂಡ ಬಿರಾದಾರ, ದಾನಪ್ಪ ಸಾಲಿ, ಶ್ರೀಶೈಲ ಬಿರಾದಾರ, ಸೋಮನಾಥ ಕಳ್ಳಿಮನಿ, ಲಕ್ಷ್ಮಣ ಬಗಲಿ, ಸಿದ್ದಾರ್ಥ ತಮಗೊಂಡ, ಬಸವರಾಜ ಬಿಳೂರ, ಸಂಗಮೇಶ ಕವಡಿಮಟ್ಟಿ, ಮಹೇಶ ಮಾಲಗಾರ, ಮುದಸ್ಸರ ವಾಲಿಕಾರ, ಶಾಂತು ಇಂಡಿ, ರಮೇಶ ಕತ್ನಳ್ಳಿ, ಚಿದಾನಂದ ಬಿರಾದಾರ, ರವಿ ಬಿರಾದಾರ, ಮಲ್ಲಿಕಾರ್ಜುನ ನಾಗಶೆಟ್ಟಿ, ಅಪ್ಪು ನಾಟೀಕಾರ, ಮುರಳಿ ಬಾವಿಕಟ್ಟಿ, ಮಹಮ್ಮದ ವಾಲೀಕಾರ, ಡಾ. ಸುನೀಲ ಕುಸಗಲ್, ಮಹೇಶ ಹಿಟ್ನನಹಳ್ಳಿ, ಮಲ್ಲಪ್ಪ ಗೆಣ್ಣೂರ, ಶರಣು ಉಕ್ಕಲಿ, ಮಲ್ಲಿಕಾರ್ಜುನ ಪಡನಾಡ, ಶರಣು ಸಾಲಿ, ತಿಪ್ಪಣ್ಣ ಬೆನಕಟ್ಟಿ, ಹನಮಂತ ಯತ್ನಟ್ಟಿ, ಸುಭಾಷ ಯಂಭತ್ತನಾಳ, ಬಸವರಾಜ ಬಿರಾದಾರ, ಮುಡಕಪ್ಪ ಯಾಳವಾರ ಮುಂತಾದವರು ಉಪಸ್ಥಿತರಿದ್ದರು.