ಕೃಷಿ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರ ಜಲಸಮಾಧಿ
ಇಂಡಿ:ಮೇ.22: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಪಟ್ಟಣದ ಸಮೀಪ ದೇಶಪಾಂಡೆ ತಾಂಡಾದಲ್ಲಿ ಮೇ.21ರ ಮಂಗಳವಾರ ನಡೆದಿದೆ.
ಕೃಷಿ ಹೊಂಡದಲ್ಲಿ ಇಜಾಡಲು ಹೋದ ಇಬ್ಬರು ಬಾಲಕರು ಈಜು ಬಾರದೆ ಇರುವದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾಂಡಾದ ಅಮೀತ ಬಾಳು ರಾಠೋಡ ವಯಸ್ಸು 12 ಮತ್ತು ಪುನ್ನ ಜಾಧವ ವಯಸ್ಸು 13 ದುರ್ಘಟನೆಗೆ ಬಲಿಯಾದ ಬಾಲಕರು ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.