ಮಹಾದೇವ ದೇವಸ್ಥಾನಕ್ಕೆ ಕನ್ನ
ಭಾಲ್ಕಿ:ಮೇ.22: ತಾಲ್ಲೂಕಿನ ತೇಗಂಪುರ ಗ್ರಾಮದ ಮಹಾದೇವ ಮಂದಿರಕ್ಕೆ ಭಾನುವಾರ ಕಳ್ಳರು ಕನ್ನ ಹಾಕಿದ್ದಾರೆ.
ರಾತ್ರಿ ಯಾರೂ ಇಲ್ಲದ ವೇಳೆ ಕಳ್ಳರು ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿ ಮೂರ್ತಿ, ಬೆಳ್ಳಿ ಪ್ಲೇಟ್, ಬಟ್ಟಲು ಸೇರಿದಂತೆ ರೂ. 1 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
ಗ್ರಾಮದ ಗೋಪಾಲರಾವ್ ಬಿರಾದಾರ, ಶಿವಕುಮಾರ ಪಾಟೀಲ, ಮಾಣಿಕರಾವ್ ಪಾಟೀಲ, ಪ್ರೇಮ ಪ್ರಭಾ ಮತ್ತಿತರರು ಈ ಕುರಿತು ಧನ್ನೂರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.