ರಾಜ್ಯ ಸರ್ಕಾರ ಹೆಸರು ಉದ್ದಿನ ಬೆಳೆಗಳಿಗೂ ಬರ ಪರಿಹಾರ ನೀಡಲಿ
ಸೇಡಂ,ಮೇ,22: ಕಳೆದ ವರ್ಷ ರೈತರು ಹೆಸರು, ಉದ್ದು ತೊಗರಿ ಸೇರಿದಂತೆ ಹಲವು ಬೆಳೆಗಳು ಬೆಳೆಯಲು ಬೀಜ ಬಿತ್ತನೆ ಮಾಡಿದರು ಆದರೆ ಸಕಾಲಕ್ಕೆ ಮಳೆ ಬರದೆ ಇರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ, ಕೇಂದ್ರ ಸರ್ಕಾರ ಬರ ಪರಿಹಾರ ವಿತರಣೆ ಮಾಡಿದ ಈ ಪರಿಹಾರದಲ್ಲಿ ಹೆಸರು ಹಾಗೂ ಉದ್ದಿನ ಬೇಳೆಗಳಿಗು ವಿತರಿಸಿ ಬೇಕೆಂದು ಯುವ ರೈತ ಸುನೀಲಕುಮಾರ ರಜಪೂತ ಕಡಚರ್ಲಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ತೊಗರಿ ಬೆಳೆಗೆ ಮಾತ್ರ ಬರ ಪರಿಹಾರ ವಿತರಿಸಲಾಗಿದ್ಧು ಹೆಸರು ಉದ್ದು ಸೇರಿದಂತೆ ಹಲವು ಬೆಳೆಗಳಿಗೆ ಬರ ಪರಿಹಾರ ವಿತರಣೆ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.