ರೈತರ ಬೆಳೆ ಪರಿಹಾರಕ್ಕೆ ರಮೇಶ ಹೂಗಾರ ಮನವಿ
ಅಫಜಲಪುರ:ಮೇ.22: ತಾಲೂಕಿನ ಹಲವು ರೈತರ ಜಮೀನುಗಳಲ್ಲಿ ಕಾಲುವೆಗಳು ಹಾಯ್ದು ಹೋಗಿದ್ದು ಇನ್ನುಳಿದ ಸಾಗುವಳಿ ಜಮೀನಿನಲ್ಲಿ ಇರುವ ಬೆಳೆಯ ಪರಿಹಾರ ಹಣವನ್ನು ಮಂಜೂರು ಮಾಡದೆ ತಾರತಮ್ಯ ಮಾಡುತ್ತಿರುವ ಕ್ರಮವನ್ನು ಸರಿಪಡಿಸಿ ಕೂಡಲೇ ರೈತರಿಗೆ ಪರಿಹಾರ ಹಣವನ್ನು ಮಂಜೂರು ಮಾಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಹೂಗಾರ ಅವರು ತಹಸೀಲ್ದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಈ ವೇಳೆ ಲಕ್ಷ್ಮಿಪುತ್ರ ಮನಮಿ, ಭಾಗಣ್ಣ ಕುಂಬಾರ, ಸುರೇಶ ತೇಲಿ, ಶರಣಗೌಡ ವಾಲಿ, ಮಲ್ಲನಗೌಡ ಪಾಟೀಲ, ಸಿದ್ದು ಚಲಗೇರಿ ಅನೇಕರಿದ್ದರು.