ಜಿಎಂಐಟಿಯಲ್ಲಿ‌ ಮೇ.೨೪-೨೫ ಕ್ಕೆ ಮಲ್ಲಿಕಾ ೨೪.೦ ಇಂಟರ್ ಕಾಲೇಜ್ ಫೆಸ್ಟ್
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೨; ನಗರದ  ಜಿಎಂ ವಿಶ್ವವಿದ್ಯಾಲಯದಲ್ಲಿ ಮೇ.೨೪ ಹಾಗೂ ೨೫ ರಂದು ಸಂಜೆ ೫.೩೦ ಕ್ಕೆ ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು‌ ಕಾರ್ಯಕ್ರಮದ ಸಂಯೋಜಕರಾದ ಡಾ.ಕಿರಣ್ ಕುಮಾರ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಎರಡು ದಿನಗಳ ನಡೆಯುವ ಈ  ಸಮಾರಂಭವು ಇಂಟರ್ ಕಾಲೇಜ್ ಫೆಸ್ಟಿವಲ್ ಆಗಿದ್ದು, ಈ ಸಮಾರಂಭಕ್ಕೆ  ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಈ  ಸಮಾರಂಭದಲ್ಲಿ ಶ್ರೀಮತಿ ಶ್ರೀ ಜಿ ಎಂ ಹಾಲಮ್ಮ ಮತ್ತು ಶ್ರೀ ಜಿ ಮಲ್ಲಿಕಾರ್ಜುನಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾಲೇಜು ಮಟ್ಟದಲ್ಲಿ ರ್ಯಾಂಕ್ ಮತ್ತು 95 ಕ್ಕಿಂತ ಹೆಚ್ಚಿನ ಸಿಜಿಪಿಎ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ಸಂಸದರಾದ  ಡಾ.ಜಿಎಂ ಸಿದಶ್ವರ್ ವಿತರಿಸುವ ಮೂಲಕ ಸನ್ಮಾನಿಸಲಿದ್ದಾರೆ. ಅನೇಕ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ತಿಳಿಸಿದರು.ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಸ್ಯಗಾರ್ತಿ ಶ್ರೀಮತಿ ಸುಧಾ ಬರಗೂರು  ಭಾಗವಹಿಸಲಿದ್ದಾರೆ. ಹಾಗೂ  ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಛೇರ್ಮನ್ಜಿಎಂ ಪ್ರಸನ್ನಕುಮಾರ್,  ವಿವಿಯ ಆಡಳಿತಾಧಿಕಾರಿ ವೈ ಯು ಸುಭಾಷ್ ಚಂದ್ರ,  ಕುಲಪತಿಗಳಾದ ಡಾ. ಶಂಕಪಾಲ್ ಎಸ್. ಆರ್, ಉಪಕುಲಪತಿಗಳಾದ ಡಾ ಮಹೇಶಪ್ಪ ಹಾಗೂ ರಿಜಿಸ್ಟ್ರಾರ್ ಡಾ. ಸುನಿಲ್ ಕುಮಾ‌ರ್ ಬಿ. ಎಸ್ ಹಾಗೂ ವಿವಿಧ ವಿಭಾಗದ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆಂದರು.ಮೇ.೨೫ ರ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ  ಅರ್ಜುನ್ ಜನ್ಯ ಹಾಗೂ ಸಂಗಡಿಗರಿಂದ ಮತ್ತು ಖ್ಯಾತ ಹಿನ್ನಲೆ ಗಾಯಕಿಯರಾದ ಡಾ.ಶಮಿತಾ ಮಲ್ನಾಡ್ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಹಾಗೂ ಸಂಸದರಾದ  ಜಿ ಎಂ ಸಿದ್ದೇಶ್ವರ್, ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ. ಎಂ. ಲಿಂಗರಾಜು ಮತ್ತು ವಿವಿಧ ಗಣ್ಯರು ಉಪಸ್ಥಿತರಿರುವರು.ಎರಡು ದಿನದ ಕಾರ್ಯಕ್ರಮವನ್ನು ಜಿ ಮಲ್ಲಿಕಾರ್ಜುನಪ್ಪ  ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ.ವೀರಗಂಗಾಧರಸ್ವಾಮಿ,ಪ್ರೊ.ಬಸವರಾಜ್,ತೇಜಸ್ವಿಕಟ್ಟಿಮನಿ,ಡಾ.ಓಂಕಾರಪ್ಪ,ಪ್ರೊ.ಸಂತೋಷ್ ಉಪಸ್ಥಿತರಿದ್ದರು.