ಧರ್ಮ, ಸಂಸ್ಕøತಿ ರಕ್ಷಿಸಬೇಕಾದದು ಎಲ್ಲರ ಕರ್ತವ್ಯ
ಭಾಲ್ಕಿ:ಮೇ.22: ವಿಶ್ವದ ಎಲ್ಲ ಮನುಷ್ಯರೂ ಪರಸ್ಪರ ಪ್ರೀತಿ-ವಿಶ್ವಾಸ, ಸ್ನೇಹ-ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಬಾಳುವುದೇ ನಿಜವಾದ ಧರ್ಮ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು. ತಾಲೂಕಿನ ಮೊರಂಬಿ ಗ್ರಾಮದ ಮಹಾದೇವ ಮಂದಿರ ಕಳಸಾರೋಹಣ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮ, ಸಂಸ್ಕøತಿ ರಕ್ಷಿಸಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತರಾಗಬೇಕು. ಪ್ರತಿಯೊಬ್ಬರೂ ಪರಸ್ಪರ ವಿಶ್ವಾಸದಿಂದ ಕೂಡಿ ಬಾಳಬೇಕು. ಇದುವೇ ನಿಜವಾದ ಧರ್ಮ. ಹಾಗಾದರೆ ಮಾತ್ರ ಶಾಂತಿ ನೆಮ್ಮದಿ ಹಾಗೂ ಸೌಹಾರ್ದತೆ ವೃದ್ಧಿಸಲಿದೆ ಎಂದು ತಿಳಿಸಿದರು.
ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಮಾತನಾಡಿ, ಪ್ರತಿಯೊಬ್ಬರು ಮನುಷ್ಯ ಧರ್ಮ ಪಾಲಿಸಿದರೆ ಖಂಡಿತ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಜತೆಗೆ ಶಾಂತಿ, ನೆಮ್ಮದಿಯೂ ಸಿಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪ್ಪಣ್ಣ ಜನವಾಡ, ಪಪ್ಪು ಪಾಟೀಲ್ ಖಾನಾಪೂರ ಸೇರಿದಂತೆ ಹಲವರು ಇದ್ದರು.