ಡಾ.ಸಿ.ಎಸ್ ದ್ವಾರಕಾನಾಥ್ ರನ್ನು ಪರಿಷತ್ ಸದಸ್ಯರಾಗಿ ‌ನೇಮಿಸಲು‌ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೨; ಡಾ.ಸಿ.ಎಸ್. ದ್ವಾರಕನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ದಾವಣಗೆರೆ ಜಿಲ್ಲೆ ಅಲೆಮಾರಿ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ.
ಈ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ತಿಪ್ಪೇಶಪ್ಪ ಮಾತನಾಡುತ್ತಾ ಡಾ.ಸಿ.ಎಸ್. ದ್ವಾರಕನಾಥ್ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಜನಪರ ವಕೀಲರಾಗಿ, ಲೇಖಕರಾಗಿ  ತಬ್ಬಲಿ ಸಮುದಾಯಗಳ ಅಸ್ತಿತ್ವಕ್ಕಾಗಾಗಿ ಕಳೆದ ನಲವತ್ತು ವರ್ಷಗಳಿಂದ ದುಡಿಯತ್ತಲೇ ಬಂದಿದ್ದಾರೆ  ಇದರೊಂದಿಗೆ ಡಾ. ಸಿ.ಎಸ್. ದ್ವಾರಕನಾಥ್‌ರವರು ವಕೀಲರಾಗಿ ನಾಲ್ಕು ದಶಕಗಳ ಕಾಲ  ತಳ ಸಮುದಾಯಗಳನ್ನು ಗುರುತಿಸುತ್ತಾ, ಅವರ ಅರ್ಥಿಕ ಪರಿಸ್ಥಿತಿ ಮತ್ತು ಜೀವನ ಶೈಲಿ ಮತ್ತು ಬದುಕುವ ರೀತಿ ಇವುಗಳನ್ನೆಲ್ಲಾ ಅಧ್ಯಯನ ಮಾಡುತ್ತಾ ಸಮಸ್ತ ಅಲೆಮಾರಿ ಜನಾಂಗದವರ ಬಗ್ಗೆ ಮಾಹಿತಿ ಪಡೆಯುತ್ತಾ  ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ತಳ ಸಮುದಾಯಗಳಿಗೆ ಬೇಕಾಗುವ ವಸತಿ ಮತ್ತು ಸರ್ಕಾರಿ ಸೌವಲತ್ತುಗಳ ಬಗ್ಗೆ ಪ್ರತ್ಯೇಕ ಅಲೆಮಾರಿ ಕೋಶವನ್ನು ರಚನೆ ಮಾಡುವಂತೆ ಸರ್ಕಾರದ ಗಮನಕ್ಕೆ ತಂದು ಸಿದ್ದರಾಮಯ್ಯ ಸರ್ಕಾರವು ಅಲೆಮಾರಿ ಅಭಿವೃದ್ಧಿ ಕೋಶ ರಚನೆ ಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದಾರೆ.ದ್ವಾರಕಾನಾಥ್ ಅವರು ಇದೀಗ ಕಾಂಗ್ರೇಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯಾಧ್ಯಕ್ಷರು, ಮುಖ್ಯ ವಕ್ತಾರರು ಮತ್ತು ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ವಿಧಾನಸಭಾ ಮತ್ತು ಈಗಿನ ಲೋಕಸಭಾ ಚುನಾವಣೆಗಳಲ್ಲಿ  ರಾಜ್ಯಾದ್ಯಂತ ಮೂಲೆ ಮೂಲೆಗಳನ್ನು ಸುತ್ತಾಡಿ ಪಕ್ಷಕ್ಕಾಗಿ ಅಲೆಮಾರಿ ಸಮುದಾಯಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವದ ಬಗ್ಗೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಹಾಗೂ ಚುನಾವಣೆಗಳಲ್ಲಿ ನಮ್ಮ ಮತದ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿಸಿದ್ದಾರೆ. ಸಂವಿಧಾನದ ಅರಿವುಳ್ಳಂತಹ ಡಾ.ಸಿ.ಎಸ್. ದ್ವಾರಕನಾಥ್ ರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸಿದ್ದಪ್ಪ ಕೆ.ಪಿ‌ಹೊನ್ನಾಳಿ,ಹರೀಶ್ ಗುರುರಾಜಪುರ,ಸುರೇಶ್ ,ಕುಮಾರ್ ಉಪಸ್ಥಿತರಿದ್ದರು.