ಹಮದರದ್ ಕಾಲೋನಿ ವೇಲ್ಫರ್ ಸೊಸೈಟಿಯ ಕಚೇರಿ ಉದ್ಘಾಟನೆ
ಕಲಬುರಗಿ: ಮೇ.22:ನಗರದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ಹತ್ತಿರದ ಹಮದರದ ಕಾಲೋನಿಯಲ್ಲಿ ಹಮದರದ ಕಾಲೋನಿ ವೇಲ್ಫರ್ ಸೊಸೈಟಿಯ ಕಚೇರಿಯನ್ನು ಸಿಹಿ ಹಂಚುವ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ ಮಾತನಾಡಿ ಈ ನೂತನ ಕಮಿಟಿಯು ಸಂವಿಧಾನದ ಆಶಯಕ್ಕೆ ಪೂರಕವಾಗಿ ಜನರೊಟ್ಟಿಗೆ ಕೈ ಜೊಡಿಸಿ ಕೆಲಸ ಮಾಡಬೇಕೆಂದು ಸದಸ್ಯರಿಗೆ ಕರೆ ನೀಡಿದರು.
ಸೊಸೈಟಿಯ ಶಕೀಲ್ ಅಹ್ಮದ್, ಉಪಾಧ್ಯಕ್ಷ ಮೊಹಮ್ಮದ್, ಕಾರ್ಯದರ್ಶಿ ಮೊಹಮ್ಮದ್ ರೌಫ್, ಸಹ ಕಾರ್ಯದರ್ಶಿ ಮೊಹಮ್ಮದ್ ಜಮೀರುದ್ದೀನ್, ಖಜಾಂಚಿ ರುಕುಮುದ್ದೀನ್, ಸದಸ್ಯರುಗಳಾದ ದಸ್ತಗೀರ್ ನೂರಿ, ಮೊಹಮ್ಮದ್ ನಸೀರ್, ಶಾನವಾಜ್, ಏಜಾಜ್, ಮಶಾಕ್, ಫಿದಾ ಹುಸೇನ್, ಮೊಹಮ್ಮದ್ ಬಶೀರುದ್ದೀನ್, ಮೊಹಮ್ಮದ್ ಆರಿಫ್, ಸೈಯದ್ ರಹೀಂ, ಮೊಹಮ್ಮದ್ ಏಜಾಜ್ ಸೇರಿದಂತೆ ಮುಂತಾದವರು ಇದ್ದರು.