ಹಾರಕೂಡ ಶ್ರೀ ಅಪಾಯದಿಂದ ಪಾರು
ಬಸವಕಲ್ಯಾಣ:ಮೇ.22: ತಾಲೂಕಿನ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಕಾರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಶ್ರೀಗಳು ಆಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಬದಿಯ ಹೊಳಕುಂದೆ ಪೆಟ್ರೋಲ್ ಬಂಕ್ ಬಳಿ ವಾಹನಕ್ಕೆ ಡಿಸೆಲ್ ಹಾಕಿಕೊಳ್ಳಲು ವಾಹನ ತಿರುಗುಸುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಶ್ರೀಗಳ ಕಾರಿಗೆ ಲೆಫ್ಟ್ ಸೈಡ್ ಡೋರ್‍ಗೆ ಟಚ್ ಆಗಿದೆ. ಲಾರಿ ಚಾಲಕ ಲಾರಿಯನ್ನು ನಿಯಂತ್ರಿಸಿದ್ದರಿಂದ ಕಾರಿಗೂ ಹೆಚ್ಚಿನ ಹಾನಿ ಆಗಿಲ್ಲ. ಶ್ರೀಗಳಿಗೂ ಸಣ್ಣ-ಪುಟ್ಟ ಗಾಯವೂ ಆಗಿಲ್ಲ. ತಮ್ಮ ಕಾರನ್ನು ಬದಲಾಯಿಸಿ ಬೇರೆ ಕಾರಿನಲ್ಲಿ ಶ್ರೀಗಳು ತಮ್ಮನಿಗದಿತ ಕಾರ್ಯಕ್ರದಲ್ಲಿ ಭಾಗವಹಿಸಲು ತೆರಳಿದ್ದಾರೆ.
ಕಾರಿಗೆ ಹಿಂಬದಿಯಿಂದ ಬಂದ ಲಾರಿ ಸ್ವಲ್ಪ ಡಿಕ್ಕಿಯಾಗಿದೆ. ಹಾರಕೂಡ ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳ ಶಕ್ತಿ ಹಾಗೂ ಭಕ್ತರ ಭಕ್ತಿಯಿಂದಾಗಿ ಯಾವುದೇ ಅಪಾಯವಾಗಿಲ್ಲ. ಸಣ್ಣ-ಪುಟ್ಟ ಗಾಯಗಳು ಆಗಿಲ್ಲ. ಭಕ್ತರು ಗಾಬರಿ ಆಗಬಾರದು ಹಾರಕೂಡ ಶ್ರೀಗಳು ತಿಳಿಸಿದ್ದಾರೆ.
s