ಸೈದಾಪೂರ ಗ್ರಾಮದ ಕಂದಾಯ ನಿರೀಕ್ಷಕರ ಕಛೇರಿ,ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ಆಕಸ್ಮಿಕ ಭೇಟಿ
ಯಾದಗಿರಿ : ಮೇ 22: : ಯಾದಗಿರಿ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರು ???ಂಟನಿ ಜಾನ್ ಜೆ.ಕೆ ಅವರ ಮಾರ್ಗದರ್ಶಿನದ ಅನ್ವಯ ಸರ್ಕಾರಿ ಕಛೇರಿಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳಲ್ಲಿ ವಿಳಂಭ ಮಾಡುತ್ತಿದ್ದರೆ, ಕಾರಣ ಅಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಲ್ಲದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ನಮ್ಮ ಗಮನಕ್ಕೆ ತರಬಹುದಾಗಿದೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರಾದ ಹಣಮಂತರಾಯ ಅವರು ತಿಳಿಸಿದರು.