ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ
ಮುಧೋಳ,ಮೇ.22: ವಿವಿದ ಹುದ್ದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿರುವ ನೀವೆಲ್ಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಎಂದು ನಿವೃತ್ತ ಪ್ರಾಧ್ಯಾಪಕ ಅಶೋಕ ಗಂಗಣ್ಣವರ ಹೇಳಿದರು.
ಅವರು ನಗರದ ಪಾರ್ಕ್ ಹೊಟೇಲಿನಲ್ಲಿ ಆರ್‍ಎಮ್‍ಜಿ ಹಾಗೂ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಆಯೋಜಿಸಲಾಗಿದ್ದ 1999-2004 ರ ಕಾಮರ್ಸ್ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಣಿಜ್ಯ ಪದವೀಧರರಾಗಿ ವಿವಿಧ ಹುದ್ದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇಂದು ನೀವೆಲ್ಲ ಕಾರ್ಯ ನಿರ್ವಹಿಸುತ್ತಿದ್ದೀರಿ. ಇದರ ಜೊತೆಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಭಾಗವಿಸುವ ಮೂಲಕ ಸಮಾಜ ಸೇವೆ ಮಾಡಿ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಶ್ರೀಮತಿ ಶಾರದಾ ಬಿರಾದಾರ ಮಾತನಾಡಿ, ಗುರು-ಶಿಷ್ಯರ ಪರಂಪರೆ ಇಂದು ಹಂತ ಹಂತವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೀವೇಲ್ಲ ಈಗ ಒಂದೆಡೆ ಸೇರಿ ನಿಮಗೆ ಕಲಿಸಿದ ಗುರುಗಳನ್ನು ಕರೆಯಿಸಿ ಸನ್ಮಾನಿಸುವ ಮೂಲಕ ಗೌರವಿಸುತ್ತಿರುವುದು ತುಂಬಾ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವಾರು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತಾವು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು.
ಪ್ರಾಧ್ಯಾಪಕರಾದ ಶ್ರೀಮತಿ ಶಾರದಾ ಬಿರಾದಾರ, ಜೆ.ಪರದೇಶಿ, ಪಿ.ಬಿ.ಬಡಿಗೇರ, ಎಮ್.ಜಿಗಬಡ್ಡಿ, ಎಸ್.ಬಿ.ಹೆಬ್ಳಿ, ಎ.ಐ.ಗಂಗಣ್ಣವರ ಅವರನ್ನು ಸನ್ಮಾನಿಸಲಾಯಿತು.
ಬಸು ಹಳ್ಳದ, ವಿಶಾಲ ಓಸ್ವಾಲ, ಅಮೀತ ಒಣಕುದರಿ, ಈರಣ್ಣಾ ತೇಲಿ, ಈರಣ್ಣಾ ಆನದಿನ್ನಿ, ತ್ರಿವೇಣಿ ಹಾದಿಮನಿ ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.