ಅಂಜಲಿ ಕುಟುಂಬಕ್ಕೆ ಐವತ್ತೊಂದು ಸಾ. ಸಹಾಯಧನ ಮಾಡಿ ಮಾನವಿಯತೆ ಮೆರೆದ ಲಚ್ಚಪ್ಪ ಜಮಾದಾರ
ಕಲಬುರಗಿ:ಮೇ.22: ಹುಬ್ಬಳ್ಳಿಯ ಮೃತ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿಕೊಟ್ಟು ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ವಯಕ್ತಿಕವಾಗಿ ರೂ. 51 ಸಾವೀರ ರೂಪಾಯಿ ಸಹಾಯಧನವನ್ನು ಕೂಲಿ ಕಬ್ಬಲಿಗ ಎಸ್. ಟಿ.ಹೋರಾಟ ಸಮಿತಿ ರಾಜ್ಯಾದ್ಯಕ್ಷರಾದ ಲಚ್ಚಪ್ಪ ಎಸ್. ಜಮಾದಾರ ಅವರು ಮಾಡುವ ಮೂಲಕ ಮಾನವಿಯತೆ ಮೆರೆದರು.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಕ್ರೂರವಾಗಿ ಕೊಲೆಯಾದ ಅಂಜಲಿ ಅಂಬಿಗರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಕಲಬುರಗಿಯಿಂದ ಹುಬ್ಬಳ್ಳಿಗೆ ತೆರೆಳಿ ಕುಟುಂಬಕ್ಕೆ ಧೈರ್ಯ ತುಂಬಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ
ಕೂಡಲೇ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಲಚ್ಚಪ್ಪ ಜಮಾದಾರ ಅವರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.
ದಿನೇ, ದಿನೇ ಕೋಲಿ ಸಮಾಜದ ಮೇಲೆ ಅಂಜಲಿ ಅಂಬಿಗೇರ ಹಾಗೆ, ರಾಜ್ಯದಲ್ಲಿ ಅನೇಕ ಕೃತ್ಯಗಳು ಮತ್ತು ಕೊಲೆಗಳು ನಡಿಯುತ್ತಿವೆ. ಈ ತರ ಹೀನ ಕೃತ್ಯಗಳನ್ನು ನಾವು ತೀವ್ರವಾಗಿ ಖಂಡಿಸುವುದರ ಜೊತೆಗೆ ಕೊಲೆ ಆರೋಪಗಳನ್ನು ಕಾನೂನು ಪ್ರಕಾರ ಕಠಿಣವಾದ ಶಿಕ್ಷೆ ನೀಡುವವರೆಗೂ ಬೀದಿಗಿಳಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಜಮಾದಾರ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿಂಟೂ ಜಮಾದಾರ, ರಾಮಲಿಂಗ ನಾಟಿಕಾರ, ಮಲ್ಲಿಕಾರ್ಜುನ ಗುಡಬಾ, ನಾಗೇಂದ್ರಪ್ಪ ಲಿಂಗಂಪಲ್ಲಿ, ಸಿದ್ದಪ್ಪ ಸಿನ್ನೂರ, ಅಂಬಾರಾಯ ಜವಳಗಾ, ದುಂಡಪ್ಪ ಜಮಾದಾರ, ಸತೀಶ್ ಜಮಾದಾರ, ದೇವೇಂದ್ರ ಜಮಾದಾರ, ಪರಮೇಶ್ವರ ಅಪಚಂದ, ಸುರೇಶ್ ನಾಟಿಕಾರ ಹಾಗೂ ಅಂಜಲಿ ಕುಟುಂಬದ ಸದಸ್ಯರಿದ್ದರು.