ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
ಸಂಜೆವಾಣಿ ನ್ಯೂಸ್
ಮೈಸೂರು, ಮೇ 22:- ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾ ವಿದ್ಯಾಲಯ, ಐಕ್ಯೂಎಸಿ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನಡೆಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಯುಪಿಎಸ್‍ಸಿ, ಕೆಪಿಎಸ್‍ಸಿ, ಎಸ್‍ಎಸ್‍ಸಿ, ಐಬಿಪಿಎಸ್ ಬ್ಯಾಂಕಿಂಗ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿ ಎಂಬಿಎ ಮತ್ತು ಎಂಸಿಎ, ಪಿಡಿಓ ಎಫ್‍ಡಿಎ, ಎಸ್‍ಡಿಎ ಮುಂತದ ಪರೀಕ್ಷೆಗಳ ಬಗೆಗೆ ಪೂರ್ವ ತಯಾರಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಭಾಗವಹಿಸುವ ಬಗೆಗೆ ಎಲ್ಲಾ ಅಂತಿಮ ವರ್ಷದ ಬಿಬಿಎ, ಬಿ.ಕಾಂ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಆನ್‍ಲೈನ್ ಅಣಕು ಕಂಪ್ಯೂಟರ್ ಆಧಾರಿತ ಪರೀಕ್ಷಾ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪೆÇ್ರ.ಸಾಯಿನಾಥ್ ಮಲ್ಲಿಗೆಮಾಡು, ಐಕ್ಯೂಎಸಿ ಸಂಚಾಲಕಿ ಪೆÇ್ರ.ಕೆ.ಎಸ್.ಸುಕೃತ, ವಿಭಾಗದ ಮುಖ್ಯಸ್ಥ ಶಿವಬೀರಪ್ಪ, ಅಧ್ಯಾಪಕ ಹಜ್ರಾಬೇಗಂ, ಎಂ.ಆರ್.ನಿರಂತ್, ಉಪಸ್ಥಿತರಿದ್ದರು.