ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಜ್ಞಾನವೂ ಮುಖ್ಯ:ಮಣಿಲಾಲ್ ಷಾ
ಕಲಬುರಗಿ,ಸೆ.23-“ಕಲಿಕೆಯಲ್ಲಿ ಪಠ್ಯದ ಜ್ಞಾನ ಎಷ್ಟು ಮುಖ್ಯವೋ, ಪಠ್ಯೇತರ ಜ್ಞಾನವೂ ಅಷ್ಟೇ ಮುಖ್ಯವಾಗಿರುತ್ತದೆ”ಎಂದು ಚಾರ್ಟೆಡ್ ಅಕೌಂಟೆಂಟ್ ಮಣಿಲಾಲ್ ಷಾ ಹೇಳಿದರು.
ನಗರÀ ಹೊರವಲಯದಲ್ಲಿರುವ ಸಂತ ಜೇವಿಯರ್ಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಕಾಮರ್ಸ್ ಫೆಸ್ಟ್” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಹಣಕಾಸು ಅಧಿಕಾರಿ ಫಾ.ಆನಂದ ಪ್ರಭುರವರು ಮುಖ್ಯ ಅತಿಥಿಯಾಗಿ ಆಗಮಿಸಿ ಅಂತರ್ಶಿಸ್ತೀಯ ಅಧ್ಯಯನದ ಪ್ರಾಮುಖ್ಯತೆಯ ಸ್ವರೂಪವನ್ನು ವಿದ್ಯಾರ್ಥಿಗಳಿಗೆ ಉದಾಹರಣೆಗಳ ಮುಖಾಂತರ ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಫಾ.ಜಾನ್ ಥಾಮಸ್ ವಾಣಿಜ್ಯ ವಿಭಾಗದ ಹಬ್ಬದ ಕುರಿತು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕುಮಾರಿ ಐಶ್ವರ್ಯ ತಂಡದವರು ಪ್ರಾರ್ಥನೆ ಗೀತೆಯನ್ನು ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಜಾಗೃತಿ ಕಾರ್ಯಕ್ರಮ ನಿರೂಪಿಸಿದರು.