ಛಾಯಾ ಸಾಧಕ, ಛಾಯಾಶ್ರೀ ಪ್ರಶಸ್ತಿ ಪ್ರದಾನ
ಕಲಬುರಗಿ,ಸೆ.23-ಕರ್ನಾಟಕ ಛಾಯಾಗ್ರಾಹಕರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 10ನೇ ಡಿಜಿ. ಇಮೇಜ್ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದ ಕಾರ್ಯಕ್ರಮದದಲ್ಲಿ ಕಲಬುರ್ಗಿಯ ಹಿರಿಯ ಛಾಯಾಗ್ರಾಹಕರಾದ ನಾಗೇಂದ್ರ ಎಚ್. ಅವರಿಗೆ ಛಾಯಾ ಸಾಧಕ ಪ್ರಶಸ್ತಿ ಹಾಗೂ ಛಾಯಾಗ್ರಾಹಕರ ಸಂಘಟನೆಯಲ್ಲಿ ತೊಡಗಿಸಿಕೊಂಡು ಎಲ್ಲಾ ಛಾಯಾಗ್ರಾಹಕರನ್ನು ಒಗ್ಗುಡಿಸುತ್ತಿರುವ ಕ್ರಿಯಾಶೀಲ ಛಾಯಾಗ್ರಾಹಕರಾದ ಅನಿಲಕಯಮಾರ ಗಣೇಶಕರ್, ಆಳಂದ ತಾಲೂಕಿನ ಪ್ರಕಾಶ ಜಂಗಲೆ, ಚಿತ್ತಾಪುರ ತಾಲೂಕಿನ ಮೊಹನ ಬಾಬು, ಚಿಂಚೊಳಿ ತಾಲೂಕಿನ ಸಾಯಬಣ್ಣ, ಕಾಳಗಿ ತಾಲೂಕಿನ ಶರಣಬಸ್ಸಪ್ಪ ಹೂಗಾರ, ಶಹಾಬಾದ ತಾಲೂಕಿನ ಸಾಯಿಬಣ್ಣಾ, ಜೇವರ್ಗಿ ತಾಲೂಕಿನ ಶಾಂತವೀರ ಅವರಿಗೆ ಛಾಯಾಶ್ರೀ ಪ್ರಶಸ್ತಿಯನ್ನು ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ಸ್ ಅಸೊಶಿಯೇಶನ್ ಅದ್ಯಕ್ಷರಾದ ಬಸವರಾಜ ಸಿ. ತೋಟದ ಅವರ ಅಧ್ಯಕ್ಷತೆಯಲ್ಲಿ ವಿತರಿಸಿದರು. ಪ್ರಶಸ್ತಿಯನ್ನು ಸಂಘದ ರಾಜ್ಯಾಧ್ಯಕ್ಷರು ನೀಡಿ ಗೌರವಿಸದರು.
ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾದಿಕಾರಗಳಾದ ವೀರೆಂದ್ರ ಹೆಗಡೆ ಅವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಕೆ.ಪಿ.ಎ ಸದಸ್ಯರಾದ ಮಹಾದೇವ, ಪತ್ರ ಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ರಾದ ಭವಾನಿ ಸಿಂಘ ಠಾಕೂರ್, ಹಿರಿಯ ಛಾಯಾಗ್ರಾಹಕರಾದ ಶೇಖರ ಬ್ಯಾಕೊಡ, ರಾಘವೇಂದ್ರ ಭುರ್ಲಿ, ಮಲ್ಲಿನಾಥ ಚನ್ನಪಗೊಳ, ಗಂಗಾರಾಮ ರಾಠೊಡ, ಪ್ರಕಾಶ ಶೆರಖಾನೆ, ಮಲ್ಲಪ್ಪ ದೊಡ್ಡಿ, ರಾಜಶೇಖರ್ ಗಣೇಶಕರ್, ರಾಹುಲ, ಮಹೇಶ ದೇವಣಿ, ವಸಂತ ಪವಾರ ಹಾಗೂ ಎಲ್ಲಾ ತಾಲೂಕಿನ ಛಾಯಾಗ್ರಾಹಕರು ಉಪಸ್ಥಿತರಿದ್ದರು.