ತಿರುಪತಿ ಲಾಡುದಲ್ಲಿ ಕೊಬ್ಬು ಮಿಶ್ರಣ ಹಿಂದೆ ಕ್ರಿಶ್ಚಿಯನ್ ಮಷಿನರಿ ಕೈವಾಡ:ಈಶ್ವರಪ್ಪ
ವಿಜಯಪುರ, ಸೆ.23:ತಿರುಪತಿ ಲಡ್ಡುದಲ್ಲಿ ಕೊಬ್ಬು ಬೆರೆಸಿ ಮಾರಾಟ ಮಾಡಿರುವ ಹಿಂದೆ ಕ್ರಿಶ್ಚಿಯನ್ ಮಷಿನರಿ ಕೈವಾಡ ನೂರಕ್ಕೆ ನೂರರಷ್ಟಿದೆ. ಈ ಬಗ್ಗೆಯೂ ಸಿಬಿಐ ತನಿಖೆ ಆಗಬೇಕು. ತಪ್ಪಿತಸ್ಥರು ಯಾರೇ ಆಗಿರಲಿ. ಇಂಥ ಹೀನ ಕೆಲಸ ಮಾಡಿದವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಕೊಬ್ಬು ಮಿಶ್ರಣ ಮಾಡಿದ್ದು ಜಗತ್ತಿಗೆ ಮಾಡಿದ ಮಹಾನ್ ಮೋಸ. ಜಗನ್ ಮಾಡಿದ ಕೃತ್ಯಕ್ಕೆ ಕೇಸ್ ದಾಖಲಿಸಿ, ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಬೇಕು ಎಂದರು.
ಈಗ ಜಗನಮೋಹನ ನಾವು ಮಾಡಿಲ್ಲ ಅಂತಾರೆ. ಯಾಕೆ ಲ್ಯಾಬ್ ರಿಪೆÇೀರ್ಟ್ ಬಗ್ಗೆ ಅವರಿಗೆ ನಂಬಿಕೆ ಇಲ್ಲವಾ?. ಆಗಲೇ ಅಲ್ಲಿನ ಅರ್ಚಕರು ಹೇಳಿದ್ದರೂ ಇವರು ತಾತ್ಸಾರ ಮಾಡಿದ್ದಾರೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಗಲಭೆಗೆ ಸಂಬಂಧಿಸಿದಂತೆ ಪೆÇಲೀಸರು ಕೈಗೊಂಡ ನಿರ್ಧಾರ ಸ್ವಾಗತಾರ್ಹ.
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡ ಅಲ್ಲಿನ ಎಸ್.ಪಿ., ಪೆÇಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾಗಮಂಗಲದಲ್ಲಿ ಕಲ್ಲು ತೂರಾಟ ಮಾಡಿದರು. ಪೆಟ್ರೋಲ್ ಬಾಂಬ್ ಎಸೆದರು. ಏನು ಕ್ರಮ ಅಗಿಲ್ಲ.
ಅಲ್ಲಿನ ಪೆÇಲೀಸರು ಅದರ ಬಗ್ಗೆ ನಮಗೆ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ದಾವಣಗೆರೆಯಲ್ಲಿ ತೆಗೆದುಕೊಂಡಂತೆ ಕ್ರಮವನ್ನು ನಾಗಮಂಗಲದಲ್ಲೂ ಕೈಗೊಳ್ಳಬೇಕು ಎಂದು ಹೇಳಿದರು.
ಮುನಿರತ್ನ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಮಾತಾಡಲು ಅಸಹ್ಯ. ದಿನ ಬೆಳಗಾದರೆ ಮುನಿರತ್ನ, ಪ್ರಜ್ವಲ ರೇವಣ್ಣ, ದರ್ಶನ ಬಗ್ಗೆಯೇ ಬರುತ್ತದೆ. ಟಿವಿಗಳಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೂ ಅದೆ ಇರುತ್ತದೆ. ರಾಜ್ಯದಲ್ಲಿ ಹೆಣ್ಣುಮಕ್ಕಳು ಆಟದ ಬೊಂಬೆ ಆಗಿದ್ದಾರೆ. ಈ ರೀತಿ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಇದು ಅಸಹ್ಯ ನಾನು ಹೆಚ್ಚು ಮಾತನಾಡಲು ಹೋಗಲ್ಲ ಎಂದು ತಿಳಿಸಿದರು.
ಈಶ್ವರಪ್ಪನವರನ್ನು ಪಕ್ಷಕ್ಕೆ ತರುತ್ತೇವೆ ಎಂದು ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಅವರು ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ, ಹಿಂದುತ್ವ ಇರುವುದರಿಂದ ನನ್ನ ಬಗ್ಗೆ ಹಾಗೆ ಹೇಳಿದ್ದಾರೆ.
ಅವರು ನನ್ನ ಬಗ್ಗೆ ಮಾತನಾಡಿದ ಮಾತುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಸೇರುವುದು ಬಿಡುವುದು ಆಮೇಲೆ ವಿಚಾರ ಮಾಡುತ್ತೇನೆ. ನಾನು ಬಿಜೆಪಿ ಬಿಟ್ಟಿದ್ದು ಪಕ್ಷದಲ್ಲಿನ ಪಕ್ಷಪಾತದಿಂದ. ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕಾರಣ ಹೋಗಬೇಕು. ಯಡಿಯೂರಪ್ಪ ಅವರ ಮಕ್ಕಳ ಕೈಯಲ್ಲಿರುವ ಪಕ್ಷ ಆಗಬಾರದು ಎಂದು ಪಕ್ಷ ಬಿಟ್ಟೆ. ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಸಿಕ್ಕಾಪಟ್ಟೆ ಆಗಿದೆ. ಇದನ್ನು ಕೇಂದ್ರ ಗಮನಿಸಲಿ ಎಂದು ನಾನು ಲೋಕಸಭೆಗೆ ಸ್ಪರ್ಧಿಸಿದ್ದೆ ಎಂದು ತಿಳಿಸಿದರು.
ನಾನು ಜೀವನದಲ್ಲಿ ಪಕ್ಷ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಬಿಜೆಪಿ ನನ್ನ ತಾಯಿ ಎಲ್ಲವನ್ನೂ ಕೊಟ್ಟಿದೆ.
ಪಕ್ಷದಲ್ಲಿ ತಾಯಿ ಮೇಲೆ ಆಗುತ್ತಿರುವ ಅನ್ಯಾಯ ನೋಡಿ ನಾನು ಸುಮ್ಮನೇ ಕೂರುವುದಿಲ್ಲ. ತಾಯಿಯ ಋಣ ತೀರಿಸಬೇಕು, ಪಕ್ಷ ಶುದ್ಧೀಕರಣ ಆಗಬೇಕು ಎಂಬುದು ನನ್ನ ಆಸೆಯಾಗಿದೆ ಎಂದರು.
ಮತ್ತೊಂದು ಬ್ರಿಗೇಡ್ ಮಾಡುವ ವಿಚಾರ ಸದ್ಯಕ್ಕಿಲ್ಲ.
ಮೊದಲು ನಾನು ರಾಯಣ್ಣ ಬ್ರಿಗೇಡ್ ಮಾಡಿದಾಗ ಲಕ್ಷ ಲಕ್ಷ ಜನರು ಬ್ರಿಗೇಡ್ ಜೊತೆ ಬಂದಿದ್ದರು. ಆಗ ಇದೇ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಅಮೀತ್ ಶಾ ಹತ್ತಿರ ದೂರು ನೀಡಿ ಅದನ್ನು ನಿಲ್ಲಿಸಿದರು.
ಈಗ ನಾನು ರಾಯಣ್ಣ ಬ್ರಿಗೇಡ್ ಬಿಡಬಾರದು ಎಂದು ಅನಿಸುತ್ತದೆ ಎಂದು ನುಡಿದರು.
ಈಗ ಬ್ರಿಗೇಡ್ ಥರದಲ್ಲಿ ಒಂದು ಆಗಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಅನ್ಯಾಯ ಆಗದಂತೆ ಏನಾದರೂ ಮಾಡಬೇಕು. ಸಭೆ ನಡೆಸಿ ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಪಂಚಮಸಾಲಿ ಸ್ವಾಮೀಜಿ ಅವರು ಆರ್ ಸಿ ಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಮಾಡಬೇಕು ಎಂದು ವೇದಿಕೆಯಲ್ಲೇ ಹೇಳಿದರು. ಅದರ ಬಗ್ಗೆ ನಾವು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ಮುಡಾ ಹಗರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿಎಂ ಕುರ್ಚಿ ಮೇಲೆ ಎಲ್ಲರೂ ಕಣ್ಣು ಇಟ್ಟಿದ್ದಾರೆ. ಅವರ ಕುರ್ಚಿ ಅಲುಗಾಡಲ್ಲಾ ಎಂದು ಮೇಲು ನೋಟಕ್ಕೆ ಬೆಂಬಲ ಕೊಡುವುದು ನಡೆದಿದೆ. ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕು ಎಂಬ ಹಂಬಲ ಇದೆ. ಅಷ್ಟಕ್ಕೂ ಸಿದ್ಧರಾಮಯ್ಯ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ರಾಜೀನಾಮೆ ಕೊಡ್ತಾರೋ, ಜೈಲಿಗೆ ಹೋಗ್ತಾರೊ ಗೊತ್ತಿಲ್ಲ ಎಂದರು.
ಸಿಎಂ ಸಿದ್ಧರಾಮಯ್ಯನವರು ನಮ್ಮ ಸರ್ಕಾರ ಇದ್ದಾಗ ಮಾಡಿದ್ದ 1093 ಪ್ರಾಜೆಕ್ಟ್ ಗಳನ್ನು ರದ್ದು ಮಾಡಿದ್ದಾರೆ.
ನಮ್ಮ ಸರ್ಕಾರ ಹಣ ಕೊಟ್ಟಿದನ್ನು ರದ್ದು ಮಾಡಿದ್ದಾರೆ.
ಇದು ಹಿಂದುಳಿದ, ದಲಿತರಿಗೆ ಮಾಡಿದಂತಹ ಮೋಸ ಎಂದು ತಿಳಿಸಿದರು.