ಧರ್ಮ ದೀಕ್ಷೆ ಕೊಡುವ ಶಕ್ತಿ ಸಿದ್ದಲಿಂಗಶ್ರೀಗಳಲ್ಲಿದೆ:ಕೊಡೇಕಲ್ಲಶ್ರೀ
ತಾಳಿಕೋಟೆ:ಸೆ.23: ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಈಗೀನ ಶ್ರೀಮಠದ ಬಾಲಶಿವಯೋಗಿಗಳಾದ ಶ್ರೀ ಸಿದ್ದಲಿಂಗ ದೇವರು ಇಂದು ಈ ಕಾರ್ಯಕ್ರಮದಲ್ಲಿ ಬಂದಿಲ್ಲಾವೆಂಬುದು ನಿಮಗೆ ನಿರಾಸೆಯಾಗಿರಬಹುದು ಆದರೆ ನನಗೂ ಸಹ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳೂ ಸಹ ಇಂದು ಕಂಡಿಲ್ಲಾವೆಂಬುದು ಕಾಡಿತು ಆದರೆ ಅವರು ದೇವರಾಗಿ ನಿಂತಿದ್ದಾರೆಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ರವಿವಾರರಂದು ಪೂಜ್ಯ ಶ್ರೀ ಖಾಸ್ಗತ ಮಹಾಶಿವಯೋಗಿಗಳ 128ನೇ ಹಾಗೂ ಪೂಜ್ಯಶ್ರೀ ವಿರಕ್ತ ಮಹಾ ಶಿವಯೋಗಿಗಳ 10ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಏರ್ಪಡಿಸಲಾದ ಧರ್ಮಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಶ್ರೀಗಳು ಭಕ್ತಿಯ ಪರಾಕಾಷ್ಠೆಗೆ ಕಿಮ್ಮತ್ತಿದೆ ಅಂತಹ ಶಕ್ತಿ ಶ್ರೀ ಖಾಸ್ಗತಮಠದಲ್ಲಿದೆ ಎಂದರು. ಇಡೀ ಜಗತ್ತೇ ನೋಡುವಂತಹ ಕಾರ್ಯ ಶ್ರೀ ಖಾಸ್ಗತಮಠದ ಹಿಂದಿನ ಪೀಠಾಧಿಪತಿ ವಿರಕ್ತ ಅಜ್ಜನವರು ಮಾಡಿ ಹೋಗಿದ್ದಾರೆ ಶ್ರೀಮಠದಲ್ಲಿ ಸಂಗೀತ, ರಂಗೀನಾಟ ಒಳಗೊಂಡು ಸಂಗೀತ ಆಳುವ ಹಾಗೂ ಸಂಗೀತದಲ್ಲಿ ಪಿಎಚ್‍ಡಿಯನ್ನು ಪಡೆದುಕೊಂಡಿರುವ ಅನೇಕ ಜನರು ಶ್ರೀ ಖಾಸ್ಗತಮಠದಿಂದ ಕಲಿತು ಮೇಲ್ಮಟ್ಟಕ್ಕೇರಿದ್ದಾರೆ ಇದರಿಂದ ಶ್ರೀ ಖಾಸ್ಗತಮಠದ ವರ್ಚಸ್ಸು, ಘನತೆ ಗೌರವ ಹೆಚ್ಚುತ್ತಲಿದೆ ಎಂದರು. ಇಂದಿನ ದಿನಮಾನದಲ್ಲಿ ನಡೆಯುತ್ತಿರುವ ನ್ಯಾಯ ನಿಬಂದನೆಗಳು ಸಹ ಬಗೆಹರಿಸಿಕೊಳ್ಳಲು ಮಠ ಮಾನ್ಯಕ್ಕೆ ಆಗಮಿಸುತ್ತಾ ಸಾಗಿವೆ ಹಿಂದಿನಂತೆ ನ್ಯಾಯವನ್ನು ಮಠಗಳಿಗೆ ಕಳಿಸುವ ಕಾರ್ಯ ನಡೆದಿದೆ ಇದನ್ನು ಅರೀತು ನಡೆಯಬೇಕೆಂದು ಭಕ್ತಸಮೂಹಕ್ಕೆ ಹೇಳಿದ ಶ್ರೀಗಳು ಇಂಗಳೇಶ್ವರ ಶ್ರೀ ಚನ್ನಬಸವ ಮಹಾ ಸ್ವಾಮಿಗಳು 97 ವಯಸ್ಸಿನಲ್ಲಿ ಇದ್ದರೂ ಸಹ ಶ್ರೀ ಖಾಸ್ಗತ ಮಠದ ಮೇಲೆ ಇಟ್ಟ ಭಕ್ತಿಯಿಂದಲೇ ಅವರೂ ಸಹ ಇಂದು ಆಗಮಿಸಿದ್ದಾರೆ ಶ್ರೀ ಖಾಸ್ಗತಮಠದ ಮೇಲೆ ಇಂಗಳೇಶ್ವರ ಶ್ರೀಗಳು, ದುರದುಂಡೇಶ್ವರ ಮಠದ ಹಾಗೂ ನಾಲತವಾಡ ಮಠದ ವಲುಮೆಯೂ ಕೂಡಾ ಶ್ರೀ ಖಾಸ್ಗತಮಠದ ಮೇಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿದ ಚಲನ ಚಿತ್ರ ನಟ ರಾಜು ತಾಳಿಕೋಟಿ ಅವರು ಮಾತನಾಡಿ ಇತ್ತಿಚಗೆ ಧಾರವಾಡದ ರಂಗಾಯಣ ನಿರ್ದೇಶಕ ಸ್ಥಾನ ಲಬಿಸಿರುವದು ಶ್ರೀ ಖಾಸ್ಗತಮಠದ ಹಾಗೂ ನಿಮ್ಮೇಲ್ಲರ ಆಶಿರ್ವಾದದ ಫಲವಾಗಿದೆ ಶ್ರೀ ಖಾಸ್ಗತಮಠದಲ್ಲಿ ವರ್ಷಕ್ಕೆ 75 ರೂ. ಶಿಕ್ಷಣ ಕಲಿಯಲು ಕೊಟ್ಟು ಅಲ್ಲಿಯೇ ವಸತಿ ಊಟದೊಂದಿಗೆ ಶಾಲೆ ಕಲಿಯುತ್ತಾ ಶ್ರೀಮಠವು ಅನುಕೂಲ ಕಲ್ಪಿಸಿದ್ದರಿಂದ ನಾನು ಬೆಳೆಯುತ್ತಾ ಉತ್ತುಂಗಕ್ಕೇರಲು ಕಾರಣವಾಗಿದೆ ಎಂದರು. ಈ ಹಿಂದೆ ಸಂಗೀತ ಶಿಕ್ಷಕರಾಗಿದ್ದ ಎ.ಎಸ್.ವಠಾರ ಅವರೂ ಸಹ ನನ್ನ ಸೋದರ ಮಾವನವನಾಗಿದ್ದರು ಅವರಿಂದ ಸಂಗೀತವು ಕಲಿತೆ ಶ್ರೀ ಖಾಸ್ಗತ ಮಠದಲ್ಲಿ ಅಧ್ಯಯನ ಮಾಡುತ್ತಾ ಸಾಗಿದೆ ಅಂದು ವಿರಕ್ತ ಮಹಾಸ್ವಾಮಿಗಳೂ ಸಹ ನನ್ನ ಮೇಲೆ ಅತೀ ಪ್ರೀತಿ ವಾತ್ಸಲ್ಯದಿಂದ ನೋಡುತ್ತಿದ್ದರೆಂದು ಹೇಳಿದ ಅವರು ಹಂದಿಗನೂರ ಸಿದ್ರಾಮಪ್ಪ ಎಂಬ ಹೆಸರಿನ ಕಲಾವಿದರ ಕುರಿತು ಹಾಗೂ ಸಂಗೀತಗಾರರು, ಸಾಹಿತಿಗಳು, ತಪಸ್ವಿಗಳು, ವಿಜಯಪುರ ಜಿಲ್ಲೆಯಲ್ಲಿಯೇ ಹೆಚ್ಚಾಗಿದ್ದಾರೆ ಸಂಗೀತಗಾರರು ಸಂಘಟಿಸಿದ ಸುವರ್ಣ ಸಮಿತಿ ಎಂಬುದರಿಂದ ವಿರಕ್ತಶ್ರೀ ಎಂಬ ಪ್ರಶಸ್ತಿ ನೀಡಿ ನನಗೆ ಗೌರವಿಸಿರುವದು ಸಂತಸ ತಂದಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಹುಣಶ್ಯಾಳದ ಆನಂದ ದೇವರು ಮಾತನಾಡಿ ಇಂಗಳೇಶ್ವರ ವಚನಶಿಲಾ ಮಂಟಪದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು 12 ಜ್ಯೋತಿರಲಿಂಗಗಳ ದರ್ಶನ ಮಾಡಿ ಸಾಗಿಬಂದವರಾಗಿದ್ದಾರೆ ಸುಮಾರು 97 ವಯೋಮಿತಿ ಹೊಂದಿದ ಇವರು ಶ್ರೀ ಖಾಸ್ಗತಮಠಕ್ಕೆ ಈ ಹಿಂದಿನಿಂದಲೂ ಶ್ರೀಮಠದ ಶ್ರೀಗಳಿಗೆ ಗೌರವಿಸುತ್ತಾ ಸಾಗಿಬಂದ ಅವರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವದು ಸಂತಸ ತಂದಿದೆ ಎಂದರು. ಮಹಾತ್ಮರು ನರಕ, ಸ್ವರ್ಗದಲ್ಲಿ ಹೋಗುವದಿಲ್ಲಾ ಸಿದ್ದಲಿಂಗ ದೇವರ ಸ್ವರೂಪ ಆಗಮಿಸಿ ಆಶಿರ್ವಾದ ಮಾಡುತ್ತಾ ಸಾಗಿದ್ದಾರೆ ಆದರ್ಶವಾಗಿರುವ ಶ್ರೀ ಸಿದ್ದಲಿಂಗ ದೇವರು ನಿಮಗೆ ದೊರೆತಿರುವದು ನಿವೇಲ್ಲರೂ ಪುಣ್ಯವಂತರೆಂದರು. ಅಂತಹ ಶ್ರೀಗಳನ್ನು ಪಡೆದ ವೇ.ಮುರುಘೇಶ ವಿರಕ್ತಮಠ ಅವರೂ ಸಹ ದನ್ಯರೆಂದು ಬಣ್ಣಿಸಿದ ಶ್ರೀಗಳು ಜೀವನದಲ್ಲಿ ಆದ್ಯಾತ್ಮವೆಂಬುದರಲ್ಲಿ ದೊಡ್ಡ ಶಕ್ತಿ ಇದೆ ಆದ್ಯಾತ್ಮವಿಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯವೆಂದರು.
ಇನ್ನೋರ್ವ 5 ದಿನಗಳ ವರೆಗೆ ಪುರಾಣ ಪ್ರವಚನ ನೀಡಿದ ವೇ.ಬಂಡಯ್ಯ ಶಾಸ್ತ್ರೀಗಳು ಶ್ರೀ ಖಾಸ್ಗತಮಠದ ಪರಂಪರೆ ಕುರಿತು ವಿವರಿಸಿದ ಅವರು ಪ್ರವಚನ ನೀಡಿದ ಸಮಯದಲ್ಲಿ ಮಠದ ವತಿಯಿಂದ ತಮಗೆ ನೀಡಿದ ಸಹಕಾರ ಕುರಿತು ಬಣ್ಣಿಸಿದರು.
ಇನ್ನೋರ್ವ ಧರ್ಮ ಸಭೆಯನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿದ ಇಂಗಳೇಶ್ವರ ವಚನ ಶಿಲಾ ಮಂಟಪದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಮಾತನಾಡಿ ಶ್ರೀ ಖಾಸ್ಗತರು ಅನೇಕ ಲೀಲೆಗಳನ್ನು ಮಾಡಿದ್ದಾರೆ ಲಿಂಗವನ್ನು ಕೊರಳ್ಳಲ್ಲಿ ಕಟ್ಟದೇ ಕೊರಳೊಳಗೆ ಇಟ್ಟುಕೊಂಡು ಪವಾಡ ಸದೃಶ್ಯದಲ್ಲಿ ತೋರಿಸಿಕೊಟ್ಟಿದ್ದಾರೆ ಅಂಗೈಯಲ್ಲಿ ಕರ್ಪೂರ ಹಚ್ಚಿ ಬೆಳಗಿಸಿದವರಾಗಿದ್ದಾರೆ ಇಂತಹ ಅನೇಕ ಪವಾಡವನ್ನು ಮಾಡುತ್ತಾ ಭಕ್ತರನ್ನು ಉದ್ದರಿಸಿದ ಶ್ರೀ ಖಾಸ್ಗತರ ಆ ಸ್ಥಾನಕ್ಕೆ ವಿರಕ್ತಶ್ರೀಗಳು ಸಹ ಪೀಠಾಧಿಪತಿಗಳಾಗಿ ಅವರೂ ಸಹ ಅವರ ನಡೆ ನುಡಿಗಳಂತೆ ಸಾಗಿದ್ದರು ಅಂತಹ ಮಠದಲ್ಲಿ ಈಗಲೂ ಶ್ರೀ ಸಿದ್ದಲಿಂಗ ದೇವರೂ ಸಹ ಎಲ್ಲ ಭಕ್ತರನ್ನು ತಮ್ಮೇಡೆಗೆ ಸೇಳೆಯುತ್ತಾ ಭಕ್ತಿಯ ಮಾರ್ಗವನ್ನು ತೋರುತ್ತಾ ಸಾಗಿರುವದು ಹೆಮ್ಮೆಯ ವಿಷಯವಾಗಿದೆ ಶ್ರೀಮಠಕ್ಕೆ ಮಗನನ್ನು ನೀಡಿದ ವೇ.ಮುರುಘೇಶ ವಿರಕ್ತಮಠ ಅವರೂ ಸಹ ವಿರಕ್ತರಿಗಿಂತ ವಿರಕ್ತರಾಗಿದ್ದಾರೆ ಈ ಹಿಂದೆ ಶ್ರೀ ಖಾಸ್ಗತ ಮಠಕ್ಕೆ ಜಗದ್ಗುರು ಪೀಠ ಅನ್ನಲಾಗುತ್ತಿತ್ತೆಂದು ಶ್ರೀಮಠದ ಪರಂಪರೆಯ ಕುರಿತು ವಿವರಿಸಿದರು.
ಶಿಕ್ಷಕ ಅಶೋಕ ಹಂಚಲಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಹಾಗೂ ನಾಟ್ಯ ಕಲೆಯಲ್ಲಿ ಪ್ರವೀಣತೆ ಹೊಂದಿದಂತಹ ರಾಜು ತಾಳಿಕೋಟಿ, ಗವಾಯಿ ಮಲ್ಲಿಕಾರ್ಜುನ ಬೆನಕನಹಳ್ಳಿ, ತಬಲಾವಾದಕ ಶಿವಾನಂದ ಬಡಿಗೇರ, ಗಾಯಕಿ ಶ್ರೀಮತಿ ಪ್ರೇಮಾ ಶೆಟ್ಟಿ ಅವರಿಗೆ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದು ಅಲ್ಲದೇ ದಿ.ಮಡಿವಾಳಪ್ಪ ಮಂದೆವಾಲಿ ತಬಲಾವಾದಕರು ಕೊಕಟನೂರ ಇವರಿಗೂ ಮರಣೋತ್ತರ ವಿರಕ್ತಶ್ರೀ ಪ್ರಶಸ್ತಿ ನೀಡಿ ಅವರ ಕುಟುಂಭದವರಿಗೆ ನೀಡಿ ಗೌರವಿಸಲಾಯಿತು.
ಹುಣಶ್ಯಾಳ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶರಣಬಸವ ಗಡೇದ, ಕಲಾವಿದ ಡಾ.ಪರಶುರಾಮ ಕಟ್ಟಿಸಂಗಾವಿ ಅವರಿಗೂ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಶ್ರೀಮಠದಲ್ಲಿ ಅಖಂಡರಾತ್ರಿ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತಲ್ಲದೇ ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಬಜಂತ್ರಿ ಉದ್ಘಾಟಿಸಿದರು.
ಸಂಗೀತ ಶಿಕ್ಷಕ ಬಸವರಾಜ ಭಂಟನೂರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಅತಿಥಿಗಳಾಗಿ ಈಶ್ವರ ಬಡಿಗೇರ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶ್ರೀ ಚಂದ್ರಶೇಖರ ಶಾಸ್ತ್ರೀಗಳು ಹಿರೇಮಠ(ಯಕ್ತಾಪೂರ), ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಶಶಿಕುಮಾರ, ಅಡವೇಶ, ಮೊದಲಾದವರು ಉಪಸ್ಥಿತರಿದ್ದರು.