ಮರೆವಿನ ಕಾಯಿಲೆಗೆ ಭಯಪಡುವ ಅಗತ್ಯವಿಲ್ಲ:ಡಾ.ಕಿರಣ ಪಾಟೀಲ್
ಬೀದರ, ಸೆ.23:ಮರುವಿನ ಕಾಯಿಲೆ ಮುಖ್ಯ ಲಕ್ಷಣಗಳು ಕಂಡುಬಂದರೆ ಯಾರೂ ಭಯಪಡದೆ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕೇಂದ್ರವನ್ನು ಆರಂಭಿಸಲಾಗಿದ್ದು, ನರರೋಗ ವೈದ್ಯ ಶಾರೀರಿಕ ಚಿಕಿತ್ಸೆಕ ನರ್ಸ, ಮನೋವೈದ್ಯ ಮತ್ತು ಕಾರ್ಯಕ್ರಮ ಸಂಯೋಜಕರು ಈ ಕೇಂದ್ರದಲ್ಲಿ ಲಭವಿರುದ್ದರಿಂದ ತಾವು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ ಪಾಟೀಲ್ ಹೇಳಿದರು.
ಅವರು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವರ “2024-25 ರ ಘೋಷವಾಕ್ಯ ಮರುವಿನ ಕಾಯಿಲೆ ವಿಶ್ವ ಅಲ್ಝೈಮರ್ ರೋಗಗಳನ್ನು ನಿರ್ವಹಿಸಲು ಇದು ಸಕಾಲ” ಎಂಬ ಘೋಷವಾಕ್ಯಯೊಂದಿಗೆ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಬೀದರ ಹಾಗೂ ಮದರ ತೆರಿಸಾ ವೃದ್ಧಾಶ್ರಮ ರವರ ಸಂಯುಕ್ತಶ್ರಾಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಲ್ಝೈಮರ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ತೊಂದರೆ, ಜ್ಞಾಪಕ ಶಕ್ತಿಯ ನಷ್ಟ, ದೃಷ್ಟಿ ಮತ್ತು ಸ್ಥಳದ ಮಾಹಿತಿಯ ಸಮಸ್ಯೆ, ವರ್ತನೆ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಭಾಷಾ ಸಮಸ್ಯೆ, ಮತ್ತು ಸ್ಥಳದ ಗೊಂದಲ, ದುರ್ಬಲ ಅಥವಾ ನಿರ್ಧಾರದಲ್ಲಿ ದೃಢತೆಯಿಲ್ಲದಿರುವುದಿಲ್ಲ, ವಸ್ತುಗಳನ್ನು ತಪ್ಪಾದ ಜಾಗದಲ್ಲಿಡುವುದು ಈ ಮರುವಿನ ಕಾಯಿಲೆಯ ಲಕ್ಷಣಗಳಾಗಿರುತ್ತದೆ. ಕಾರಣ ಸಾರ್ವಜನಿಕರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು ದೈನಂದಿನ ವ್ಯಾಯಾಮ, ಸತತವಾಗಿ ಮಾನಸಿಕ ವ್ಯಾಯಾಮಗಳು ಸಮತೋಲಿತ ಆಹಾರ ಸೇವನೆ, ಯೋಗ ಮತ್ತು ಧ್ಯಾನ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೀದರ ಮದರ ತೆರಿಸಾ ವೃದ್ಧಾಶ್ರಮದ ರವಿ ಜೋಸಫ್, ಬೀದರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೇಟ್ಟಿ ಚೆನ್ನಶೆಟ್ಟಿ, ಸುದರ್ಶನ, ಕೃತಿ, ಮಲ್ಲಿಕಾರ್ಜುನ ಗುಡೆ, ರಾಕೇಶ ಸೇರಿದಂತೆ ಜಿಲ್ಲಾ ಸಂಯೋಜಕರು ಉಪಸ್ಥಿತರಿದ್ದರು.