ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ಒಳಜಗಳ: ಬೊಮ್ಮಾಯಿ
ಕಲಬುರಗಿ,ಮೇ.21: ಮುಖ್ಯಮಂತ್ರಿಕುರ್ಚಿಗಾಗಿಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ನಡೆಯುತ್ತಿದ್ದು, ಲೋಕಸಭಾಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ‘ನನಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕದೆ ಹೋದರೆ, ನನಗೆ ಶಕ್ತಿ ತುಂಬಲು ಆಗಲ್ಲ’ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಇನ್ನೊಂದೆಡೆ, ಡಿ.ಕೆ.ಶಿವಕುಮಾರ್ ಅವರಿಗೂತಮಗೆಸಿಎಂ ಸ್ಥಾನ ಸಿಗುತ್ತೋ ಇಲ್ಲವೋ ಎಂಬ ಅಸಮಾಧಾನವಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಈ ಸರ್ಕಾರದಲ್ಲಿಎಲ್ಲವೂಸರಿಯಿಲ್ಲ.ಆಂತರಿಕ ಗೊಂದಲಗಳಿವೆಎಂಬುದುಅರ್ಥವಾಗುತ್ತದೆಎಂದು ವ್ಯಾಖ್ಯಾನಿಸಿದರು.
ಚುನಾವಣೆ ಬಂದಕಾರಣಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್‍ನಲ್ಲಿಅಲ್ಪವಿರಾಮ ಬಿದ್ದಿದೆ. ಕೆಲವೇ ದಿನಗಳಲ್ಲಿ ಆಲ್‍ಇಂಡಿಯಾಕಾಂಗ್ರೆಸ್‍ನಲ್ಲಿ ಸಾಕಷ್ಟು ಬದಲಾವಣೆ ಆಗಲಿವೆ. ಅದೇ ಪರಿಣಾಮರಾಜ್ಯ ಸರ್ಕಾರದ ಮೇಲೆ ಸಹ ಬೀಳಲಿದೆ. ರಾಜ್ಯದಲ್ಲಿ ಸಿಎಂ ಆಗಲು ಸಾಕಷ್ಟುಜನ ಪೈಪೆÇೀಟಿ ನಡೆಸುತ್ತಿದ್ದಾರೆ. ಸಿಎಂ ಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿದೆಎಂದರು.
ರಾಜ್ಯದ ನಾಲ್ವರು ಸಚಿವರುಕೇಂದ್ರದ ಬಿಜೆಪಿ ವರಿಷ್ಠರೊಂದಿಗೆಸಂಪರ್ಕದಲ್ಲಿದ್ದಾರೆ ಎಂಬ ವಿಚಾರತಮಗೆಗೊತ್ತಿಲ್ಲಎಂದ ಬೊಮ್ಮಾಯಿ, ಚುನಾವಣೆ ಬಳಿಕ ವಿಜಯೇಂದ್ರತಮ್ಮ ಸ್ಥಾನದಲ್ಲಿಇರಲ್ಲ ಎಂಬ ಪ್ರಿಯಾಂಕ್‍ಖರ್ಗೆ ಹೇಳಿಕೆಗೆ ‘ಸರ್ಟಿಫಿಕೇಟ್‍ಕೊಡೋಕೆಅವರ್ಯಾರು?ಅವರು ಏನೆನೊ ಅಂತಾರೆ, ಅನ್ನಲಿ ಬಿಡಿ’ ಎಂದರು.
ಕಲ್ಯಾಣಕರ್ನಾಟಕ ಭಾಗವನ್ನುಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಈವರೆಗೆಒಂದೇಒಂದುಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು ರಿವ್ಯೂ ಮಿಟಿಂಗ್ ಮಾಡಿಲ್ಲಎಂದು ಟೀಕಿಸಿದರು.
ಬರ ನಿರ್ವಹಣೆಯಲ್ಲೂ ವಿಫಲ:
ಸರ್ಕಾರದಿಂದ ಬರ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ. ಭೀಕರ ಬರಗಾಲವಿದ್ದರೂರಾಜ್ಯ ಸರ್ಕಾರ ನಯಾಪೈಸೆಖರ್ಚು ಮಾಡುತ್ತಿಲ್ಲ. ಮಾತ್ತೆತ್ತಿದರೆ ಡಿಸಿ ಬಳಿ ಕೋಟ್ಯಾಂತರರೂ. ಹಣಇದೆಅಂತಾರೆ. ಇದರಿಂದಇದುರೈತ ವಿರೋಧಿ ಸರ್ಕಾರಅನ್ನೋದುಸ್ಪಷ್ಟವಾಗಿಗೊತ್ತಾಗುತ್ತದೆ. ಇನ್ನೊಂದೆಡೆ, ಶಾಸಕರಿಗೆಅನುದಾನಅನ್ನೋದು ಮರಿಚೀಕೆಯಾಗಿದೆಎಂದುಅಸಮಾಧಾನ ವ್ಯಕ್ತಪಡಿಸಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಪ್ಪು ಮಾಡುವವರಿಗೆಪೆÇಲೀಸರ ಬಗ್ಗೆ ಭಯಇಲ್ಲದಂತಾಗಿದೆಎಂದು ಬೊಮ್ಮಾಯಿರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ನಡೆದರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿಕ್ರೈಂ ಹೆಚ್ಚಳವಾಗುತ್ತಿದೆ. ಕಾಲೇಜುಗಳಕ್ಯಾಂಪಸ್‍ನಲ್ಲಿ ನುಗ್ಗಿ ಕೊಲೆ ಮಾಡಲಾಗುತ್ತಿದೆ. ಡ್ರಗ್ ಮಾಫಿಯಾರಾಜ್ಯಾದ್ಯಂತಹರಡಿದೆ. ಈ ಸರಕಾರ ಬಂದ ಮೇಲೆ ಸಮಾಜಘಾತುಕ ಶಕ್ತಿಗಳಿಗೆ ದೊಡ್ಡಮಟ್ಟದ ಶಕ್ತಿ ಬಂದಿದೆಎಂದರು.
ಶಿಕ್ಷಣ ಕ್ಷೇತ್ರ ಅಸ್ತವ್ಯಸ್ಥ
ಕಳೆದ ಒಂದು ವರ್ಷದಲ್ಲಿರಾಜ್ಯ ಸರ್ಕಾರ ಶಿಕ್ಷಣಕ್ಷೇತ್ರವನ್ನುಕಡೆಗಣಿಸುತ್ತಾ ಸಂಪೂರ್ಣ ಹದಗೆಡಿಸಿದೆಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅಸಮಾಧಾನ ವ್ಯಕ್ತಪಡಿಸಿದರು.
ಈ ಸರ್ಕಾರ ಬಂದಮೇಲೆ ಶಾಲಾ ಕೊಠಡಿಗಳ ನಿರ್ಮಾಣಕಾಮಗಾರಿಅರ್ಧಕ್ಕೆ ನಿಂತಿದೆ. ಶಿಕ್ಷಕರ ನೇಮಕಾತಿ ವಿಚಾರದಲ್ಲೂಗೊಂದಲ ಹುಟ್ಟಿಸಲಾಗಿದೆ. ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅತಿಕಡಿಮೆಅನುದಾನಇಟ್ಟಿದ್ದಾರೆಎಂದು ಬೇಸರ ಹೊರಹಾಕಿದರು.
ನಾವುಎನ್‍ಇಪಿತಂದಿದ್ದೆವು. ಆದರೆಕಾಂಗ್ರೆಸ್ ಸರ್ಕಾರಅದನ್ನುಅನುಷ್ಠಾನಕ್ಕೆತಂದಿಲ್ಲ. ಆ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನೇಕಾಂಗ್ರೆಸ್ ಸರ್ಕಾರಗೊಂದಲಮಯ ಮಾಡಿದೆ. ಈ ಹಿನ್ನೆಲೆಯಲ್ಲಿಈ ಬಾರಿ ಪದವೀಧರಕ್ಷೇತ್ರದಚುನಾವಣೆಯಲ್ಲಿಪದವೀಧರರು ಹೆಚ್ಚಾಗಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆಎಂದರು.
ಪ್ರಜ್ವಲ್‍ರಕ್ಷಣೆಯ ಮಾತೇಇಲ್ಲ
ಪ್ರಜ್ವಲ್‍ರೇವಣ್ಣಅವರನ್ನು ಬಿಜೆಪಿ ರಕ್ಷಿಸುವ ಮಾತೇಉದ್ಭವಿಸುವುದಿಲ್ಲ. ಯಾರೇತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕಾಗುತ್ತದೆಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ತಪ್ಪು ಮಾಡಿದವರನ್ನುನಾವು ಯಾವುದೇಕಾರಣಕ್ಕೂ ಬೆಂಬಲಿಸುವುದಿಲ್ಲ. ಪ್ರಜ್ವಲ್ ಪಾಸ್‍ಪೆÇೀರ್ಟ್‍ರದ್ದುಪಡಿಸಲುಕೇಂದ್ರ ಸರ್ಕಾರತನ್ನ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಅವರನ್ನುನಾವ್ಯಾರೂರಕ್ಷಿಸುತ್ತಿಲ್ಲಎಂದರು.
ಪ್ರಜ್ವಲ್ ಬಂಧನದ ಬಗ್ಗೆ ಬಿಜೆಪಿ ಕೇಂದ್ರಕ್ಕೆ ಪತ್ರ ಬರೆದಿಲ್ಲ ಎಂಬ ಕಾಂಗ್ರೆಸ್‍ಆರೋಪಕ್ಕೆತಿರುಗೇಟು ನೀಡಿದ ಬೊಮ್ಮಾಯಿ, ಪತ್ರ ಬರೆಯೋಕೆಏನಿದೆ?ಕೋರ್ಟ್‍ಅರೆಸ್ಟ್ ವಾರೆಂಟ್‍ಜಾರಿ ಮಾಡಿದೆಎಂದ ಮೇಲೆ ಅಲ್ಲಿ ಪತ್ರ ಬರೆಯುವುದರ ಮಹತ್ವಏನಿರುತ್ತದೆಎಂದುಅಚ್ಚರಿಯಿಂದ ಪ್ರಶ್ನಿಸಿದರು.
ಈ ಲೋಕಸಭಾಚುನಾವಣೆಯಲ್ಲಿಜನ ಬದಲಾವಣೆ ಬಯಸಿದ್ದಾರೆ. ಹೀಗಾಗಿ, ದೇಶದಲ್ಲಿ ನರೇಂದ್ರ ಮೋದಿಯವರಿಗೆದೊಡ್ಡಮಟ್ಟದಬೆಂಬಲ ನೀಡಿದ್ದಾರೆ.