ಉತ್ತಮಮಳೆಗಾಗಿ ಕರಗಲ್ಲಿಗೆ ವಿಶೇಷಪೂಜೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.22: ಉತ್ತಮ ಮಳೆಗಾಗಿ ಮಂತ್ರ ಶಾಸ್ತçಗಳೊಂದಿಗೆ ನಗರದ ದುಗ್ಗಮ್ಮ ದೇವಸ್ಥಾನದ ಹತ್ತಿರವಿರುವ ಕರಗಲ್ಲಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಗರದ ಜಿಲ್ಲಾ ಮತ್ತು ತಾಲ್ಲೂಕು ಬಿತ್ತನೆ ಬೀಜ ಕ್ರಿಮಿನಾಶಕ ರಸಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಉತ್ತಮ ಮಳೆಗಾಗಿ, ಸರ್ವರ ಒಳಿತಿಗಾಗಿ ಮಂತ್ರ ಶಾಸ್ತçಗಳೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಜಿಲ್ಲೆಯ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್ ಮೂರ್ತಿ, ರೇವಣಸಿದ್ದ ಗೌಡ, ಶಿವಕುಮಾರ್ ಮಲ್ಲಾಡ ಮತ್ತು ಸಂಘದ ಅಧ್ಯಕ್ಷ ಆರನೇಕಲ್ ಮಂಜಣ್ಣ, ಸಂಘದ ಪದಾಧಿಕಾರಿಗಳಾದ ಸೋಮಶೇಖರ್ ಶಾಂತರಾಜ್, ಸುರೇಶ್, ಖಂಜಾಚಿ ಕಿರಣ್‌ಕುಮಾರ್ ಬಾಳೆಹೊಲದ್ ಮತ್ತು ತಾಲ್ಲೂಕು ಹಾಗೂ ಜಿಲ್ಲಾ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.