ಖಾಜಾ ಬಂದೇನವಾಜ ಉರುಸ್ ಪ್ರಯುಕ್ತಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ
ಕಲಬುರಗಿ:ಮೇ.21:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2 ವತಿಯಿಂದ 620ನೇ ಖಾಜಾ ಬಂದೇನವಾಜ ಉರುಸ್ ಪ್ರಯುಕ್ತ ಹೈದ್ರಾಬಾದನಿಂದ-ಕಲಬುರಗಿಗೆ ಬರುವ/ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಮೇ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಕಲಬುರಗಿ ನಗರದ ನ್ಯಾಶನಲ್ ಕಾಲೇಜು ಬಿಂದುವಿನಿಂದ ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.