ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ:ನಾಮಪತ್ರ ಹಿಂಪಡೆದವರ ಕುರಿತು ಅಪರ ಪ್ರಾದೇಶಿಕ ಆಯುಕ್ತರಿಂದ ಸ್ಪಷ್ಟನೆ
ಕಲಬುರಗಿ:ಮೇ.21:ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಸೋಮವಾರ 7 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಈ ಪೈಕಿ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ಹೆಸರು ಕಣ್ತಪ್ಪಿನಿಂದ ತಪ್ಪಾಗಿ ಮಾಹಿತಿ ಪ್ರಕಟವಾಗಿದ್ದು, ವಾಸ್ತವವಾಗಿ ಗವಿಸಿದ್ದಪ್ಪ ತಂದೆ ಚಂದ್ರಶೇಖರ, ಪ್ರಭು ತಂದೆ ನಾರಾಯಣ, ಮಲ್ಲಿಕಾರ್ಜುನ ತಂದೆ ವೀರಣ್ಣ ಧುತ್ತರಗಾಂವ, ರಾಜು ತಂದೆ ದೇವಪ್ಪ, ಎನ್.ಶೈಲಜಾ ರೆಡ್ಡಿ, ಸತೀಶಕುಮಾರ ತಂದೆ ರಾಮಮೂರ್ತಿ ಹಾಗೂ ಸುರೇಶ ತಂದೆ ರಾಜಶೇಖರಪ್ಪ ಅವರುಗಳು ನಾಮಪತ್ರ ಹಿಂಪಡೆದಿದ್ದಾರೆ ಎಂದು ಅಪರ ಪ್ರಾದೇಶಿಕ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಇದರಿಂದ ಅಂತಿಮ ಸ್ಪರ್ಧಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮರನಾಥ ನೀಲಕಂಠ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಬಸವರಾಜ, ಸ್ವತಂತ್ರ ಅಭ್ಯರ್ಥಿಗಳಾದ ಅನಿಮೇಶ ತಂದೆ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ತಂದೆ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ. ತಂದೆ ಸೋಮಪ್ಪ, ಎನ್.ಪ್ರತಾಪರೆಡ್ಡಿ ತಂದೆ ಎನ್.ಗೌರಣ್ಣ, ಬಸವರಾಜ ತಂದೆ ದುರ್ಗಪ್ಪ, ಮಹೆಬೂಬ್ ತಂದೆ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ, ಮೊಹಮ್ಮದ್ ಹುಸೇನ್ ತಂದೆ ಮೊಹಮ್ಮದ್ ಅಲಿ, ರಿಯಾಜ್ ಅಹ್ಮದ್ ತಂದೆ ನಬಿಸಾಬ್, ವಿಲಾಸ ತಂದೆ ಮಾರುತಿ, ಶರಣಬಸಪ್ಪ ತಂದೆ ಪೀರಪ್ಪ, ಶರಣಬಸಪ್ಪ ಎಸ್.ಎ. ತಂದೆ ಶ್ರೀಮಂತಪ್ಪ, ಶಶಿಧರ ತಂದೆ ಬಸವರಾಜ, ಶಿವಕುಮಾರ ತಂದೆ ಜಂಬುನಾಥ ಸ್ವಾಮಿ, ಸತೀಷಕುಮಾರ ತಂದೆ ಅಮೃತ, ಸಾಯಿನಾಥ ತಂದೆ ಸಂಜೀವಕುಮಾರ್ ನಾಗೇಶ್ವರ, ಸುನೀಲಕುಮಾರ ತಂದೆ ಹೈದ್ರಪ್ಪ, ಸುರೇಶ ತಂದೆ ದವಿದಪ್ಪ ಅವರು ಉಳಿದಂತಾಗಿದೆ.