ಅಕ್ರಮ ಮದ್ಯ ಮಾರಾಟ: 7 ಜನರ ಬಂಧನ
ಕಲಬುರಗಿ,ಮೇ.21-ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು 7 ಜನರನ್ನು ಬಂಧಿಸಿ 40 ಲೀಟರ್ ಕಳ್ಳಬಟ್ಟಿ, 96 ಟೆಟ್ರಾ ಪಾಕೇಟ್, 12 ಬಿಯರ್ ಸೇರಿ 8,076 ರೂ.ಮೌಲ್ಯದ ಮದ್ಯ ಮತ್ತು 1400 ರೂ.ನಗದು ಜಪ್ತಿ ಮಾಡಿದ್ದಾರೆ.
ಬ್ರಹ್ಮಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಭರತ್ ನಗರ ತಾಂಡಾದ ಬಲ್ಲಿ ತಂದೆ ಕೋಟು ಚವ್ಹಾಣ ಅಲಿಯಾಸ್ ಕೋಟ್ಯಾ ಚವ್ಹಾಣ, ಗೊರಿಬಾಯಿ ಅಲಿಯಾಸ್ ಗೋರಿ ಗಂಡ ಬಲ್ಲಿ ಚವ್ಹಾಣ, ಶಾಂತಾಬಾಯಿ ಗಂಡ ಕೋಟು ಅಲಿಯಾಸ್ ಕೋಟ್ಯಾ ಚವ್ಹಾಣ ಎಂಬುವವರನ್ನು ಬಂಧಿಸಲಾಗಿದೆ.
ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯಲ್ಲಿ ದಾಳಿ ನಡೆಸಿ ನಾಗೇನಹಳ್ಳಿಯ ಶಿವಲು ತಂದೆ ಷಣ್ಮುಖ ಕಡಗಂಚಿ ಎಂಬಾತನನ್ನು ಬಂಧಿಸಲಾಗಿದೆ.
ರಾಘವೇಂದ್ರನಗರ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಿ ನ್ಯೂ ರಾಘವೇಂದ್ರ ಕಾಲೋನಿಯ ವಿಶಾಲ್ ತಂದೆ ವಿಜಯಕುಮಾರ್ ಗುತ್ತೇದಾರ ಎಂಬಾತನನ್ನು ಬಂಧಿಸಲಾಗಿದೆ.
ಅಶೋಕ್ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ ನಿಂಬರ್ಗಾದ ರಾಮದಾಸ್ ತಂದೆ ಶಂಕರ್ ರಾಥೋಡ್, ಬಸವನಗರದ ಸತಾರಾಂ ಚವ್ಹಾಣ್ ಎಂಬುವವರನ್ನು ಬಂಧಿಸಲಾಗಿದೆ.