ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಚಿತ್ರದುರ್ಗ.ಮೇ.21:ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾಲಯದ  ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಎನ್‍ಎಸ್‍ಎಸ್ ಘಟಕ-1 ಮತ್ತು 2 ಹಾಗೂ ಐಮಂಗಲ ಪೊಲೀಸ್ ತರಬೇತಿ ಶಾಲೆಯಯ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಹೊಸ ಅಪರಾಧಿಕ ಕಾನೂನುಗಳ ಅರಿವು ಮತ್ತು ಬಸವ ಜಯಂತಿ ಕಾರ್ಯಕ್ರಮ ನಡೆಯಿತು.
ಐಮಂಗಲ ಪೊಲೀಸ್ ತರಬೇತಿ ಶಾಲೆಯ ಉಪ  ಪ್ರಾಂಶುಪಾಲರು ಹಾಗೂ ಡಿವೈಎಸ್‍ಪಿ ಪಿ.ಪರಶುರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜುಲೈ-2024ರಿಂದ ಹೊಸ ಕಾನೂನಿನ ವ್ಯವಸ್ಥೆಯು ಚಾಲ್ತಿಗೆ ಬರುತ್ತಿದ್ದು, ಅಪರಾಧಗಳಿಗೆ ಶಿಕ್ಷೆಯ ಸ್ವರೂಪಗಳ ಕುರಿತು ಅರಿವು ಮೂಡಿಸಿದರು.ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣನಾಯ್ಕ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ  ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿನ ಕಾನೂನಿನ ವ್ಯವಸ್ಥೆಯು ಭಾರತೀಯ ವ್ಯಕ್ತಿಗಳಿಗೆ  ಶಿಕ್ಷಿಸಲು ಅನುಕೂಲವಾಗುವಂತಹ ಕಾನೂನುಗಳನ್ನು ಕೈಗೊಂಡಿದ್ದರು.  ಸ್ವಾತಂತ್ಯ ಬಂದು  ಮುಕ್ಕಾಲು ದಶಕ ಕಳೆದರೂ ಅದೇ ಹಳೆಯ ಕಾನೂನಿನ ಅಡಿಯಲ್ಲಿ ಕೆಲವು ಅಪರಾಧಗಳಿಗೆ ಶಿಕ್ಷೆಯನ್ನು ನೀಡುವುದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನಿನ ವ್ಯವಸ್ಥೆಯನ್ನು ತರಲಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಅವರು, ಸೈಬರ್ ಅಪರಾಥಗಳು,ಸಿವಿಲ್ ಅಪರಾಧಗಳು, ಕ್ರಿಮಿನಲ್ ಅಪರಾಧಗಳ ಕುರಿತು  ವಿದ್ಯಾರ್ಥಿಗಳಿಗೆ  ತಿಳುವಳಿಕೆ ಹೇಳಿದರು.   ಕಾನೂನಿನ ತಿಳುವಳಿಕೆ ಬರೀ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಅವರ ತಂದೆ- ತಾಯಿಯವರಿಗೂ  ತಿಳಿದಿರಬೇಕಾದುದು ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು.ವಕೀಲರಾದ ಮಹಮದ್ ಇಮ್ರಾನ್ ಅವರು, ಹೊಸ ಅಪರಾಧಿಕ ಕಾನೂನುಗಳ ಅರಿವು ಕುರಿತು ದೇಶದ್ರೋಹ ಅಪರಾಧಗಳಿಗೆ ಹೊಸ ಕಾಯಿದೆಯನ್ನು ತರಲಾಗಿದೆ. ಇದುವರೆವಿಗೂ ಇದ್ದಂತಹ ಕಾಯಿದೆಗಳಲ್ಲಿ  ಅನ್ವಯಿಸದೇ ಇರುವ ಕಾನೂನುಗಳಿಗೆ  ಹೊಸ ಸ್ವರೂಪ ಕೊಡಲಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಂ.ಯು.ಲೋಕೇಶ್ ಮಾತನಾಡಿ, ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಹೊಸ ಅಪರಾಧಿಕ ಕಾನೂನುಗಳ ಅರಿವು ಹಾಗೂ ಬಸವ ಜಯಂತಿ ಸೇರಿದಂತೆ ಮೂರು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ತುಂಬಾ ಸಂತೋಷಕರವಾದ ಸಂಗತಿ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳಿಗೆ ಹೊಸ ಕಾನೂನಿನ ಅರಿವು ತುಂಬಾ ಅಗತ್ಯವಾಗಿದೆ ಎಂದು ತಿಳಿಸಿದರ. ಬಸವಣ್ಣನವರ ತತ್ವಗಳನ್ನು ಆದರ್ಶವನ್ನಾಗಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ರೂಪೇಶ್ ಕುಮಾರ್, ಎನ್‍ಎಸ್‍ಎಸ್ ಘಟಕದ-2ರ ಕಾರ್ಯಕ್ರಮಾಧಿಕಾರಿ ಬಿ.ಟಿ.ನಿವೇದಿತ, ಎನ್‍ಎಸ್‍ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಎಂ.ಸುಂದರಂ ಹಾಗೂ  ಜ್ಞಾನಗಂಗೋತ್ರಿ ಕೇಂದ್ರದ ಎಲ್ಲಾ ಅಧ್ಯಯನ ವಿಭಾಗಗಳ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.