ತಾಯಿ ದೇವರಾಗಬಹುದು:ಶಿಕ್ಷಕಿ ನಾಡಗೌಡ
ತಾಳಿಕೋಟೆ:ಮೇ.21: ನಮ್ಮ ಭಾರತೀಯ ಸಂಸ್ಕøತಿ ಒಳ್ಳೆಯ ಸಂಸ್ಕøತಿಯಾಗಿದ್ದು ಅಂತಹ ಸಂಸ್ಕøತಿಯನ್ನು ಅಳವಡಿಸಿಕೊಂಡು ಸಾಗಿದರೆ ಜೀವನ ಸಾರ್ಥಕವಾಗಲಿದೆ ಎಂದು ಸಮಿಪದ ಬಳಗಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರು ನುಡಿದರು.
ಸ್ಥಳೀಯ ಸ್ಪೂರ್ತಿ ಕೋಚಿಂಗ್ ಕ್ಲಾಸ್ ವತಿಯಿಂದ ಬೇಸಗಿ ತರಬೇತಿ ಶಿಬಿರ ಹಾಗೂ ತಾಯಂದಿರರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಅಮ್ಮನಿಗೊಂದು ನಮನ ಎಂಬ ತಾಯಂದಿರರ ಪಾದಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ತಾಯಿ ಅನ್ನುವ ಪದ ಬಹಳೇ ಶ್ರೇಷ್ಠವಾಗಿದೆ ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲಾವೆಂದರು. ಅಂತಹ ಭಾರತೀಯ ಪರಂಪರೆಯಿಂದ ನಡೆದು ಬಂದಂತಹ ನಮ್ಮ ತಾಯಂದಿರರು ಆಗಿದ್ದಾರೆಂದು ಹೇಳಿದ ಶ್ರೀಮತಿ ನಾಡಗೌಡ ಅವರು ಇಂದಿನ ಮೊಬೈಲ್ ಸಂಸ್ಕøತಿಯಿಂದ ಒಳ್ಳೆಯ ಸಂಸ್ಕಾರವೆಂಬುದು ಕಡಿಮೆಯಾಗುತ್ತಾ ಸಾಗಿದೆ ಕಾರಣ ಒಳ್ಳೆಯ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಸಾಗಬೇಕೆಂದರು. ಅಂತಹ ಸಂಸ್ಕಾರ ಈ ಒಂದು ಸ್ಪೂರ್ತಿ ಸಂಸ್ಥೆಯಡಿಯಲ್ಲಿ ನಡೆಯುತ್ತಾ ಸಾಗಿಬಂದಿದೆ ಯಾವುದೇ ಒಂದು ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಅಲ್ಲಿಯ ಆಡಳಿತ ಮಂಡಳಿಯವರು ಹಾಗೂ ಮಕ್ಕಳು ಅಗತ್ಯವಾಗಿದ್ದಾರೆ ಉತ್ತಮ ವಿದ್ಯಾರ್ಥಿಗಳು ಹಾಗೂ ಉತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಮ್ಮ ಶಾಲೆಯಲ್ಲಿ ನಡೆಸಿಕೊಂಡು ಬಂದಂತಹ ಸ್ಥಿತಿಗತಿ ಕುರಿತು ವಿವರಿಸಿದ ಅವರು ತಾವು ರಚಿಸಿದ ಕವನ ಸಂಕಲನದ ಪುಸ್ತಕ ಬಿಡುಗಡೆ ಮಾಡಿದ್ದರ ಕುರಿತು ತಾಯಂದಿರರ ಕುರಿತು ರಚಿಸಿದ ಕವನವನ್ನು ವಾಚಿಸಿ ಪ್ರೀತಿ ಎಂಬುದು ಜೀವನದ ಮೊದಲನೇಯ ಪುಟವಾಗಿದೆ ಸಾವು ಎಂಬುದು ಜೀವನದ ಕೊನೆಯ ಪುಟವಾಗಿದ್ದು ಈ ಎರಡರ ನಡುವೆ ಒಳ್ಳೆಯ ಸಂಸ್ಕಾರವಂತರಾಗಿ ಬಾಳಿ ಬೆಳಗಬೇಕೆಂದರು.
ಇನ್ನೋರ್ವ ಅತಿಥಿ ಬಾಪುಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀಮಾ ಚವ್ಹಾಣ ಅವರು ಮಾತನಾಡಿ ತಂದೆ ತಾಯಿ ಇಲ್ಲದ ಮಕ್ಕಳ ಜೀವನ ಬಹಳೇ ತೊಂದರೆಗೀಡಾಗುವಂತಹದ್ದಾಗಿದೆ ಅಂತಹ ಮಕ್ಕಳ ಭವಿಷ್ಯ ಪೂರ್ಣಗೊಳ್ಳಲು ಸಾಧ್ಯವಿಲ್ಲಾವೆಂದ ಅವರು ತಾಯಿ ಯಾದವಳಿಗೆ ದೇವತೆಯ ಸ್ಥಾನಮಾನ ನೀಡಲಾಗಿದೆ ತಂದೆಯಾದವ ಕಾವಲುಗಾರನಂತೆ ಕಾರ್ಯ ನಿರ್ವಹಿಸುತ್ತಾ ಇಡೀ ಮನೆತನವನ್ನೇ ರಕ್ಷಣೆಯತ್ತ ಕೊಂಡೊಯುತ್ತಾನೆಂದು ಪಾಲಕ, ಬಾಲಕ, ಶಿಕ್ಷಕ, ಇವೇಲ್ಲವು ಒಳ್ಳೆಯವರಿದ್ದಾಗ ಶಿಕ್ಷಣವೆಂಬುದು ಸದೃಡಗೊಳ್ಳಲು ಸಾಧ್ಯವೆಂದರು.
ಇನ್ನೋರ್ವ ಅತಿಥಿ ಚಿಕ್ಕಮಕ್ಕಳ ತಜ್ಞವೈಧ್ಯರಾದ ಡಾ.ಆಯ್.ಬಿ.ತಳ್ಳೊಳ್ಳಿ ಅವರು ಮಾತನಾಡಿ ಮದರಿಯವರು ತಮ್ಮ ಪರಿಶ್ರಮದಿಂದ ಈ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಸಾಗಿದ್ದಾರೆ ಮಕ್ಕಳಿಗೆ ಒಳ್ಳೆಯ ಜ್ಞಾನ ಒಳ್ಳೆಯ ವಿಚಾರ ಮೂಡಿಬರಲಿ ಎಂಬ ಉದ್ದೇಶ ಕಳೆದ 2 ತಿಂಗಳಿಂದ ಶಾಲೆಗಳಿಗೆ ನೀಡಿದ ಬಿಡುವಿನಲ್ಲಿ ತಮ್ಮ ಸೇವಾ ಕಾರ್ಯ ಮುಂದುವರೆಸಿ ಮಕ್ಕಳಿಗೆ ಸನ್ಮಾರ್ಗ ತೋರಿಸಿರುವದು ಅತೀ ಮಹತ್ವದ ಕಾರ್ಯ ಇದಾಗಿದೆ ಎಂದು ನಮ್ಮ ಭಾರತೀಯ ಸಂಸ್ಕøತಿ ಎಂಬುದು ಹಿಂದಿನಿಂದಲೂ ಸಾಗಿಬಂದಿದ್ದನ್ನು ಮರೆಯಬಾರದು ಇಂದು ಹಮ್ಮಿಕೊಂಡಂತಹ ತಾಯಿಯ ಪಾದ ಪೂಜೆ ಈ ಕಾರ್ಯಕ್ರಮ ಸಂತಸ ತಂದಿದೆ ಆಟದ ಜೊತೆ ಪಾಠ, ದೇವರ ಮೇಲೆ ಭಯ ಭಕ್ತಿ ಕುರಿತು ಪಾಲಕರು ಮತ್ತು ಶಿಕ್ಷಕರು ನೀಡುವ ಕಾರ್ಯವಾಗಬೇಕು ತಂದೆ ತಾಯಿಯಿಂದಲೇ ಸಂಸ್ಕಾರವಾಗಿದೆ ಸಂಸ್ಕಾರವೆಂಬುದು ಎಲ್ಲಿ ಹುಡುಕಿದರು ಸಿಗುವಂತಹದ್ದಲ್ಲಾ ತಂದೆ ತಾಯಿಯಲ್ಲಿ ಮಾತ್ರ ದೊರೆಯುತ್ತದೆ ಎಂದರು.
ಇನ್ನೋರ್ವ ಶಿಕ್ಷಕ ಅಶೋಕ ಹಂಚಲಿ ಅವರು ಮಾತನಾಡಿ ತಾಯಂದಿರ ಸಂಸ್ಕಾರವೆಂಬುದು ಮಕ್ಕಳಿಗೆ ಸಿಗುವಂತಾಗಬೇಕು ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನು ಕೆಲವರು ಅನಾಥ ಆಶ್ರಮದಲ್ಲಿ ಹಾಕುವಂತಹ ಕಾರ್ಯ ನಡೆಸಿರುವದು ದುಃಖದ ಸಂಗತಿಯಾಗಿದೆ ಇಂದು ತಾಯಿ, ತಂದೆ, ಅಜ್ಜ, ಅಜ್ಜಿ ಅವರನ್ನು ಪ್ರೀತಿಸುವ ಕಾರ್ಯ ಮಾಡುತ್ತಿರುವ ಈ ಶಾಲೆಯಲ್ಲಿ ನಡೆದಿರುವದು ಅತೀವ ಹರ್ಷ ತಂದಿದೆ ಎಂದರು.
ಸಾನಿದ್ಯ ವಹಿಸಿದ ಸ್ಥಳೀಯ ಕೈಲಾಸ ಪೇಠೆಯ ಬಸವಪ್ರಭು ದೇವರು ಆಶಿರ್ವಚನ ನೀಡಿ ತಾಯಂದಿರರಲ್ಲಿಯ ಸಹನ ಗುಣ ಇಂದು ಪಾದ ಪೂಜೆ ಗೈದ ಮಕ್ಕಳಲ್ಲಿ ಬರಲಿ ಎಂದು ಆಶಿಸಿದ ಶ್ರೀಗಳು ಈ ವಿದ್ಯಾ ಸಂಸ್ಥೆಯ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಇಂದು ಹಮ್ಮಿಕೊಂಡಂತಹ ಕಾರ್ಯಕ್ರಮ ಪ್ರತಿವರ್ಷ ಜರುಗುವಂತಾಗಬೇಕು ಇದರಿಂದ ಮಕ್ಕಳಲ್ಲಿ ತಾಯಂದಿರಲ್ಲಿ ಶಿಕ್ಷಕರಲ್ಲಿ ಪ್ರೋತ್ಸಾಹಿಸುವ ಗುಣ ಹೊರಬರಲಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಹಾಗೂ ಅಧ್ಯಕ್ಷತೆ ವಹಿಸಿದ ಸಿದ್ದಾರೂಡ ಮದರಿ ಅವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ಇದೇ ಸಮಯದಲ್ಲಿ ಭರತನಾಟ್ಯ ಕಲಾವಿದೆ ಕುಮಾರಿ ಪೃಥ್ವಿ ಹೆಗಡೆ ನೇತೃತ್ವದ ತಂಡದವರು ಭರತನಾಟ್ಯ ಪ್ರದರ್ಶಿಸಿದರು.
ಈ ಕಾರ್ಯಕ್ರಮದಲ್ಲಿ ತಾಯಂದಿರರ ಪಾದ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆದವಲ್ಲದೇ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಂಕರಗೌಡ ಬಿರಾದಾರ, ಕು.ಶ್ವೇತಾ ಯರಗಲ್ಲ, ವಿನೋದ ಹಿರೇಮಠ, ಮೊದಲಾದವರು ಇದ್ದರು.
ಶ್ವೇತಾ ಯರಗಲ್ಲ ಸ್ವಾಗತಿಸಿದರು. ಶಿಕ್ಷಕಿ ಶಿವಲೀಲಾ ನಿರೂಪಿಸಿದರು. ಮಹಾಂತೇಶ ಕುಂಬಾರ ವಂದಿಸಿದರು.