ನಾಡಿನ ಸಾಹಿತ್ಯ ಸಂಸ್ಕøತಿ ಶ್ರೀಮಂತಗೊಳಿಸುವ ಕಾರ್ಯ ಅನಿವಾರ್ಯ :ಡಾ. ಸಂಜೀವಕುಮಾರ ಅತಿವಾಳೆ
ಬೀದರ :ಮೇ.21:ನಗರದ ಮಹಾಲಕ್ಷಿ??ೀ ಸಭಾಂಗಣದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ 2021-22 ನೇ ಸಾಲಿನ ಸಂಘ ಸಂಸ್ಥೆಗಳ ಸಾಮಾನ್ಯ ಧನಸಹಾಯ ಯೋಜನೆಯಡಿಯಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಗೀತ ಕವಿಗೋಷ್ಠಿ ಕನ್ನಡ ಹಾಡುಗಳ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, ಮಂಜೂರು ಮಾಡಿರುವ ಹಣವನ್ನು ಸರ್ಮಪಕವಾಗಿ ಬಳಸಿಕೊಂಡು, ನಾಡಿನ ವಿವಿಧ ಜಿಲ್ಲೆಗಳಿಂದ ದೇಶದ ವಿವಿಧ ರಾಜ್ಯಗಳಿಂದ ಮತ್ತು ಸ್ಥಳಿಯ ಕಲಾವಿದರು, ಕವಿಗಳನ್ನು ಕರೆಸಿ ಕಾರ್ಯಕ್ರಮ ಮಾಡಿರುವುದು ಶ್ಲಾಂಘನಿಯವಾದ ಕೆಲಸವಾಗಿದೆ. ಮೊಬೆಲಿನ ಮಾನವರಾಗಿ ಜೀವನ ನಾಡೆಸುತ್ತಿರುವ ನಾವು ಮಾಹಿತಿ ತಂತ್ರಜ್ಞಾನವನ್ನು ನಾಡಿನ ಸಾಹಿತ್ಯ ಸಂಸ್ಕೃತಿ ಶ್ರೀಮಂತಗೊಳಿಸುವ ಕಾರ್ಯಕ್ಕಾಗಿ ಉಪಯೋಗ ಮಾಡಬೇಕು. ಮಕ್ಕಳಿಗೆ, ಪಾಲಕರು ವಿದ್ಯಾರ್ಥಿಗಳಿಗೆ ಶಿಕ್ಷಕರು ಕಲಿಸಿಕೊಡಬೇಕ್ಕಾಗಿದೆ. ನಾಡುಗೀತೆ ಶಿವಕುಮಾರ ಪಾಂಚಾಳ ತಂಡದವರು ಹಾಡಿದರು. ಭರತ ನಾಟ್ಯ ಕು. ಭವಾನಿ ಎಸ್ ಕವಲ್ದಾರ ಕಲರ್ಬುಗಿ, ಕು. ಅನುಶ್ರೀ ಮುಂಬಯಿ, ಜಾನಪದ ವಾದ್ಯ ಶೇಷಪ್ಪಾ ಚಿಟ್ಟಾ ನಡೆಸಿಕೊಟ್ಟರು, ಹರಿಷ ಚಕ್ರವರ್ತಿ, ಸೆಬಾಸ್ಟಿನ್ ಡಾ. ಸುನೀತಾ ಬಿಕ್ಲೆ, ಕನ್ನಡ ಹಾಡುಗಳು ಹಾಡಿದರು, ಮಾತೋಶ್ರೀ ರಮಾಬಾಯಿ ಸಾಂಸ್ಕೃತಿಕ ಸಂಘ ಅಧ್ಯಕ್ಷ ಶ್ರೀಮತಿ ಭಾರತಿ ತಂಡದವರು ಭಜನೆ ಹಾಡುಗಳು ಹಾಡಿದರು, ಡಾ.ಬಸವರಾಜ ವಿಜಯಪೂರ, ಡಾ. ಸುನೀತಾ ಪಿ ಸೂರ್ಯವಂಶಿ, ಸುರೇಖ ಕಾಂಬಳೆ ಅಜೀತ , ದಿಲೀಪ ಮೋಘ, ಅವಿನಾಶ ಸೋನೆ, ಪ್ರಿಯಾಂಕ ಎಚ್ ಬಿ, ಡಾ. ಹಣಮಂತರಾಯ ಜೆವರ್ಗಿ, ರವಿದಾಸ ಕಾಂಬಳೆ, ಬಸವೇಶ್ವರಿ ರಾಯಬಾಗ, ಡಾ. ವಿಲಾಸ ಕಾಂಬಳೆ ಬೆಳಗಾವಿ, ಶಿವಾನಂದ, ರಾಜು ಮಾರುತಿ ಪವಾರ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ವಿಶೇಷ ಉಪನ್ಯಾಸವನ್ನು ಬೀದರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಡಾ. ರಾಮಚಂದ್ರಪ್ಪ ಗಾಣಪೂರು, ಗ್ರಾಮೀಣ ಭಾರತದ ಜಾನಪದ ಸಾಹಿತ್ಯ ಸಂಸ್ಕೃತಿ ಜೀವಂತವಾಗಿಡಬೇಕ್ಕಾದರೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಸಾಹಿತ್ಯ ಸಂಸ್ಕೃತಿ ಪ್ರಸಾರ ಮಾಡುವ ಕಾರ್ಯ ಮಾಡಬೆಕು. ಗ್ರಾಮೀಣ ಒಗಟುಗಳಲ್ಲಿ ನಡೆ ನುಡಿ ನಡಾವಳಿ ಹಿಡಿಟ್ಟಿದೆ. ಜಾನಪದ ವಾದ್ಯಗಳು, ಸಹಾಸ ಕಲೆಗಳು ಆಟ ಓಟಗಳು, ಜಾತ್ರೆ ಉತ್ಸವಗಳಲ್ಲಿನ ಸಂಸ್ಕೃತಿ ನಮ್ಮ ನಾಡಿನ ದೇಶದ ಘನತೆ ಗೌರವ ಹೆಚ್ಚಿಸುತ್ತದೆ. ಕರ್ನಾಟಕದವರಾಗಿ ಮುಂಬಯಿಯಲ್ಲಿ ಅನಾಥ ಆಶ್ರಮಗಳು, ನಡೆಸುತ್ತಿರುವ ಶ್ರೀ ಸುರೇಶ ಪ್ರಭಾಕರ ರೇವಣಕರ ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳಿಗೆ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಾರ ಮಾಡುವ ಕೆಲಸ, ನವಜೀವನ, ಆಧಾರ ಸಂಸ್ಥೆ ಮೂಲಕ ರಕ್ತ ನಿಧಿ ಮೂಲಕ ರಕ್ತದ ಅವಶ್ಯತೆ ಇದ್ದಾಗ, ದೇಶದ ಮೂಲೆ ಮೂಲೆಗೂ ತಲುಪಿಸುವ ಸಮಾಜ ಸೇವೆ ಮಾಡುತ್ತಿರುವೆ, ಹೊರ ರಾಜ್ಯಗಳಲ್ಲಿ ಕನ್ನಡ ಸೇವೆ ಮಾಡುತ್ತಿರುವವರಿಗೆ, ಕರ್ನಾಟಕ ಸರ್ಕಾರ ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದಾಗ, ಕನ್ನಡ ಕಾರ್ಯಕ್ಕೆ ಶಕ್ತಿ ನೀಡಿದಂತಾಗುತ್ತದೆ. ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕ ಅಧ್ಯಕ್ಷ ಎಂ ಎಸ್ ಮನೋಹರ ಮಾತನಾಡಿ, ಕನ್ನಡದ ಕೆಲಸಕ್ಕಾಗಿ ಟೊಂಕಕಟ್ಟಿ ದುಡಿಯುವ ಸುಬ್ಬಣ್ಣ ಕರಕನಳ್ಳಿ ಸೇವೆ ಗುರುತಿಸಿ ಏಷಯಾ ಅಂತರಾಷ್ಟ್ರೀಯ ಸಂಸ್ಕೃತಿ ಸಂಶೋಧನೆ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ತಂದಿರುವ ಗೌರವಾಗಿದೆ. ಕ್ರಾಂತಿಯ ಬೆಳಕು, ಸಂಘರ್ಷದ ಬೆಳಕು ಕೃತಿ ಮೂಲಕ ನಾಡಿನ ಸಾಹಿತಿಗಳಾಗಿ,ಸೇವೆ, ಕವಿಗಳು ಪ್ರಚಲಿತ ವಿಷಯಗಳು ಕುರಿತು ಕವಿತೆ ರಚನೆ ಮಾಡಿ, ಸರ್ಕಾರದ ಗಮನಕ್ಕೆ ತರಬೇಕು. ಜಾನಪದ ಕಲೆಯನ್ನು ಜೀವಂತವಾಗಿಡಲು ಸಂಘ ಸಂಸ್ಥೆಗಳಿಗೆ ಹೆಚ್ಚಿನ ಅನುಧಾನವನ್ನು ಸರ್ಕಾರ ನೀಡಬೇಕು. ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣ ನವರ ಭಾವಚಿತ್ರ ವಚನದೊಂದಿಗೆ ಮೂಡಿ ಬಂದಿರುವ ನೆನಪಿನ ಕಾಣಿಕೆ ಸಾಹಿತ್ಯ ಕೃಷಿಕರಿಗೆ ಕಲಾವಿದರಿಗೆ ಕೊಟ್ಟು ಗೌರವಿಸಿರುವುದು ಶ್ಲಾಂಘನಿಯ ವಿಷಯ. ಮುಖ್ಯ ಅತಿಥಿಗಳಾಗಿ ಸತಾರಾದಿಂದ ಪ್ರಸಾದ ಚಂದ್ರಕಾಂತ, ಭಾಗವಹಿಸಿದರು. ಸ್ವಾಗತ, ಪ್ರಾಸ್ತಾವಿಕ ನುಡಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಮಾಡಿದರು. ಸಂಸ್ಥೆಗೆ ಮಂಜೂರಾಗಿರುವ ಹಣದಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಂಸ್ಕೃತಿ ಕನ್ನಡ ಹಾಡುಗಳ ಪ್ರಸಾರ ಕಾರ್ಯಕ್ಕೆ ಕೈ ಜೊಡಿಸಿರುವ ಎಲ್ಲರಿಗೂ ಆಭಾರಿಯಾಗಿದ್ದೇನೆ. ಜಾಮೂನು, ಸಿರಿರಾ ಪೂರಿ, ಪಲಾವ, ಒಳಗೊಂಡಂತೆ ಐದುತರಹದ ಊಟವನ್ನು ಮಾಡಿಸಿದ್ದೇನೆ. ಕಲಾತಂಡದವರಿಗೆ ಗೌರವ ಧನವನ್ನು ನೀಡಿದ್ದೇನೆ. ಸರ್ಕಾರದ ಹಣದ ಜೊತೆಗೆ ತನ್ನ ಸ್ವಂತ ಹಣವನ್ನು ಸಹ ನೀಡಿದ್ದೇನೆ. ನಿರೂಪಣೆ ಪ್ರೇಮ ಅವಿನಾಸ ಪಕ್ಕಲವಾಡ ಮಾಡಿದರು.