ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಜ್ಯೋತಿ ಸಾಗರ
ಕಲಬುರಗಿ:ಮೇ.21:ನರೇಗಾ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಅರ್ಹ ವಯಸ್ಕರಿಗೆ ಕೂಲಿ ಕೆಲಸ ನೀಡಲು ಅವಕಾಶವಿದೆ ಪ್ರತಿ ಕುಟುಂಬಸ್ಥರು ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿ ಕೆಲಸ ಮಾಡಬೇಕು ಎಂದು ನರೇಗಾ ಐಇಸಿ ಸಂಯೋಜಕಿ ಜ್ಯೋತಿ ಸಾಗರ ತಿಳಿಸಿದರು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಅರಣಕಲ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ. ಅರ್ಹ ವಯಸ್ಕರು ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಇನ್ನೂ ನರೇಗಾ ಯೋಜನೆಯಡಿ ವರ್ಷದಲ್ಲಿ ನೂರು ದಿನಗಳವರೆಗೆ ಕೆಲಸ ವದಗಿಸಿ ಕೊಡುವ ಗುರಿಯಿದೆ. ವಯಸ್ಕ ಕೂಲಿ ಕಾರ್ಮಿಕರು ಸ್ವಯಂ ಪ್ರೇರಿತವಾಗಿ ಹೆಸರು ನೋಂದಾಯಿಸಿದರೆ ಅಂತಹವರಿಗೆ ಕೂಲಿ ಕೆಲಸ ನೀಡಲಾಗುವುದು. ಇನ್ನೂ ಕೆಲ ಕುಟುಂಬಸ್ಥರು ಕೆಲಸ ಬಯಸಿ ಹೆಸರು ನೋಂದಣಿ ಮಾಡಿಕೊಳ್ಳದವರು ಹೆಸರು ನೋಂದಾಯಿಸಿ ಕೂಲಿ ಕೆಲಸ ಮಾಡಬೇಕು ಅಲ್ಲದೆ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಗುಲಾಬಿ ಹೂದೋಟ, ಬದು ನಿರ್ಮಾಣ, ಅರೆ ಹುಳು ಘಟಕ, ಕುರಿದೊಡ್ಡಿ, ದನದ ದೊಡ್ಡಿ ಮುಂತಾದ ಕಾರ್ಯಗಳನ್ನು ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನರೇಗಾ ಐಇಸಿ ಸಂಯೋಜಕಿ ಕುಮಾರಿ ಜ್ಯೋತಿ ಸಾಗರ, ತಾಂಡಾ ರೋಜಗಾರ್ ಮಿತ್ರ ಹೇಮನಾಥ ಜಿ ಚವ್ಹಾಣ, ಕಾಯಕ ಬಂಧುಗಳು ಶಾಂತಕುಮಾರ ಬಿಬ್ಬಹಳ್ಳಿ, ಪರಶುರಾಮ, ಸಂತೋಷ್ ಸಾಸರಗಾಂವ, ನಾತ್ಸು ರಾಥೋಡ್ ಹಾಗೂ ಕೂಲಿ ಕಾರ್ಮಿಕರು ಇದ್ದರು.