ನರೋಣಾ ಕ್ಷೇಮಲಿಂಗೇಶ್ವರ ಜಾತ್ರೆಗೆ ವ್ಯವಸ್ಥೆ ಕಲ್ಪಿಸುವಂತೆ ಸಿರಗಾಪೂರ ಆಗ್ರಹ
ಕಲಬುರಗಿ:ಮೇ.21: ದಕ್ಷಿಣ ಕಾಶಿ ಎಂದೇ ಹೆಸರಾದ ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಆರಾಧ್ಯ ದೈವ ಶ್ರೀ ಕ್ಷೇಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಹಸಿಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ 23 ರಂದು ಸಾಯಂಕಾಲ ಜರುಗುವ ರಥೋತ್ಸವಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.ಪ್ರತಿ ವರ್ಷ ರಥೋತ್ಸವ ವೇಳೆ ಜಾತ್ರಾ ಮೈದಾನದಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಭಕ್ತರು ಕತ್ತಲಲ್ಲಿ ಪರದಾಡುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಸರಿಯಾದ ಬೆಳಕಿಗೆ ಫೆÇೀಕಸ್ ಬಲ್ಬಗಳು ಅಳವಡಿಸಬೇಕು.ಭಕ್ತರಿಗೆ ಕುಳಿತುಕೊಳ್ಳುವ ಜಾಗದ ಸ್ವಚ್ಛತೆ ಮಾಡಬೇಕು.ಜಾತ್ರೆಗೆ ಬರುವ ನೂರಾರು ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಬೇಕು.ಭಕ್ತರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಅಳವಡಿಸಬೇಕು.ಶ್ರೀ ಕ್ಷೇಮಲಿಂಗೇಶ್ವರ ಗುಡಿಯ ಕಮಿಟಿ ಇದ್ದರೂ ಕೂಡ ಕಾಟಾಚಾರಕ್ಕೆ ಎಂಬಂತೆ ಕಮಿಟಿಯವರು ಅಲ್ಪ ಸ್ವಲ್ಪ ವ್ಯವಸ್ಥೆ ಮಾಡುತ್ತಾರೆ.ಆದರೆ ತಾಲೂಕು ಆಡಳಿತ ವತಿಯಿಂದ ಭಕ್ತರಿಗೆ ತೊಂದರೆಯಾಗದಂತೆ ಈ ಬಾರಿ ರಥೋತ್ಸವಕ್ಕೆ ಹಾಗೂ 3 ದಿನ ನಡೆಯುವ ಜಾತ್ರೆಗೆ ಸಂಪೂರ್ಣ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನರೋಣಾ ಗ್ರಾಮದಿಂದ ಸುಕ್ಷೇತ್ರ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನ ಸುಮಾರು 3 ಕಿಮೀ ದೂರದಲ್ಲಿದೆ.ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಕೂಡಲೆ ಗ್ರಾಮೀಣ ಮತಕ್ಷೇತ್ರದ ಶಾಸಕರು ಗಮನ ಹರಿಸಿ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.