ಡೊನೇಷನ್ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ
ಬೀದರ:ಮೇ.21:ನಾಡಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾಗಿ ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಡೊನೇಶನ್ ಹಾವಳಿ ಎದುರಿಸಬೇಕಾಗಿದೆ. ಇದರಿಂದ ಎಷ್ಟೋ ಜನ ವಿದ್ಯಾರ್ಥಿಗಳ ಶಿಕ್ಷಣದ ಕನಸು ಕಮರುತ್ತಿದೆ. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡಬೇಕಾದ ವಿದ್ಯಾಸಂಸ್ಥೆಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಣವಸೂಲಿ ಮಾಡುತ್ತಿವೆ. ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದರೂ ಸರ್ಕಾರದ ಇಲಾಖೆಗಳು ಕ್ರಮ ಕೈಗೊಳ್ಳದೆ ಮೌನವಾಗಿದ್ದು ಖಂಡನೀಯ.
ಸರಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಿ ಮೂಲಭೂತ ಸೌಲಭ್ಯ ನೀಡಬೇಕು. ಮೇಲೆ ಹೇಳಿದಂತೆ ಖಾಸಗಿ ಕಾಲೇಜುಗಳು ಮನ ಬಂದಂತೆ ಡೊನೇಷನ್ ವಸೂಲಿ ಮಾಡುತ್ತಿವೆ. ಇದನ್ನು ತಡೆಯಲು ಸರಕಾರ ಕೂಡಲೇ ಮುಂದಾಗಬೇಕು.
ಶಿಕ್ಷಣ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರಕಾರ ಹಲವು ಕಾಯಿದೆ ಜಾರಿಗೆ ತಂದಿದೆ. ಇದರ ಪ್ರಕಾರ ಅನುದಾನಿತ ಸಂಸ್ಥೆಗಳು, ಅನುದಾನರಹಿತ ಸಂಸ್ಥೆಗಳು ಅಭಿವೃದ್ಧಿ ಶುಲ್ಕವನ್ನು ಸರ್ಕಾರ ನಿಗದಿತ ಶುಲ್ಕ ಮಾತ್ರ ಸಂಗ್ರಹಿಸಲು ಅವಕಾಶವಿದೆ. ಹೆಚ್ಚು ಸಂಗ್ರಹಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ರೂ ಸರ್ಕಾರದ ನಿಯಮ ಉಲ್ಲಂಘಿಸಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ವಿಧ್ಯಾರ್ಥಿ, ಪಾಲಕರಿಂದ ಮನಸ್ಸಿಗೆ ಬಂದಂತೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಪ್ರತಿನಿಧಿಗಳು, ಪೆÇೀಷಕರು ಹಾಗೂ ಸಂಸ್ಥೆಗಳನ್ನೊಳಗೊಂಡ ಸಮಿತಿ ರಚಿಸಿ ಅಲ್ಲಿ ಇದರ ಬಗ್ಗೆ ಚರ್ಚಿಸಬೇಕು. ಈ ಪ್ರಕ್ರಿಯೆ ಎಲ್ಲಿಯೂ ಜಾರಿಗೆ ಬರುತ್ತಿಲ್ಲ. ಈ ಪ್ರಕ್ರಿಯೆ ಜಾರಿಯಾಗದ ಪರಿಣಾಮ ಮನ ಬಂದಂತೆ ವಂತಿಗೆ ವಸೂಲಿ ಮಾಡಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಸಮಿತಿ ರಚಿಸಬೇಕು. ಕಾಲೇಜುಗಳ ಮಕ್ಕಳ ಸಂಖ್ಯೆ ಪ್ರಕಾರ ಸಂಸ್ಥೆಯ ಆದಾಯ ಕ್ರೂಢಿಕರಿಸಿ ಇಲಾಖೆಯೇ ಶುಲ್ಕ ನಿಗದಿ ಮಾಡಬೇಕು. ಸಂಘಟನೆಗಳ, ಪಾಲಕರ ಜಂಟಿ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಚರ್ಚಿಸುವಂತಾಗಬೇಕು. ಡೊನೇಷನ್ ಹಾವಳಿ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧ್ಯಾರ್ಥಿ ಹಾಗೂ ಪಾಲಕರಿಗೆ ಮಾಹಿತಿ ನೀಡಲು ಸರ್ಕಾರ ಹೊಸದಾಗಿ ಆದೇಶ ಹೊರಡಿಸಬೇಕು. ಡೊನೇಷನ್ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಲ್ಲದೇ ವಿದ್ಯಾರ್ಥಿ, ಪಾಲಕರೊಂದಿಗೆ ಜೊತೆಗೂಡಿ ಡೊನೇಷನ್ ವಸೂಲಿ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸಂದೀಪ ಕಾಂಟೆ, ಜಿಲ್ಲಾಧ್ಯಕ್ಷರಾದ ವಿಶಾಲ ಕುದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾಲೆ, ಸಂಗಪ್ರಕಾಶ, ಅಮರನಾಥ ಹುಡಗೆ , ರೋಹನ ಆರ್ಯ ಇದ್ದರು