ಸಂಗೀತ ಶಕ ಪುರುಷ ಪಂ. ವಿರೂಪಾಕ್ಷಯ್ಯ ಸ್ವಾಮಿಗಳು: ಡಾ. ಕೇಶವರಾವ ಸೂರ್ಯವಂಶಿ
ಬೀದರ:ಮೇ.21:ಸಂಗೀತ ರುದ್ರ ಜನಕ ಪಂ. ವಿರೂಪಾಕ್ಷಯ್ಯ ಸ್ವಾಮಿರವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಎಣಿಕೆಗೆ ಅಸಾಧ್ಯ ಅವರು ಸಂಗೀತ ಕ್ಷೇತ್ರದ ನಿಜವಾದ ಶಕಪುರುಷರೆಂದು ಡಾ|| ಕೇಶವರಾವ ಸೂರ್ಯವಂಶಿ ಅಭಿಪ್ರಾಯಪಟ್ಟರು. ಅವರು ಗೋರಟಾದಲ್ಲಿ ನಡೆದ ಶ್ರೀ ಸಂಗೀತ ರುದ್ರೇಶ್ವರ 2ನೇ ಜಾತ್ರ ಮಹೋತ್ಸವ, ಶ್ರೀಮತಿ ವೀರಮ್ಮಾ ಶ್ರೀ ವಿರೂಪಾಕ್ಷಯ್ಯ ಸ್ವಾಮಿಗಳವರ 12ನೇ ಪುಣ್ಯ ಸಂಸ್ಮಣೋತ್ಸವ ಕಲ್ಯಾಣ ಕರ್ನಾಟಕ 05ನೇ ಪ್ರಾಂತಿಯ ಸಂಗೀತ ಸಮ್ಮೇಳನ ಮತ್ತು ಪಂ. ವಿರೂಪಾಕ್ಷ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕøತರಾಗಿ ನುಡಿದರು.
ಪೂಜ್ಯ ವಿರೂಪಾಕ್ಷಯ್ಯ ಸ್ವಾಮಿರವರು ಸಂಗೀತದ ವಿವಿಧ ಕ್ಷೇತ್ರಗಳಾದ ಗಾಯನ, ಸಿತಾರವಾದನ, ರುದ್ರಸಂಗೀತ, ನಟ ಮತ್ತು ರಂಗಭೂಮಿಯ ಸಂಗೀತ ನಿರ್ದೇಶಕರಾಗಿ ಅವರು ನೀಡಿರುವ ಕೊಡುಗೆ ಅಪಾರ. ವೇದದ ರುದ್ರ ಮಂತ್ರಗಳಿಗೆ ಸಂಗೀತ ಸ್ವರ ಸಂಯೋಜನೆ ಮಾಡಿ ಸಂಗೀತ ಶ್ರೀರುದ್ರವನ್ನು ಜಾರಿಗೆ ತಂದ ದೇಶದ ಮೊಟ್ಟಮೊದಲ ಸಂಗೀತ ವಿದ್ವಾಂಸರಾಗಿರುವರು. ದೇಶದ ಅನೇಕ ಕಡೆಗಳಲ್ಲಿ 65 ವರ್ಷ ಕಾಲ ತಮ್ಮ ಸಂಗೀತ ಶ್ರೀರುದ್ರ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಗೆ ನಾಡಿಗೆ ಅಪರ ಕೀರ್ತಿಯನ್ನು ತಂದಿರುವ ಮಹಾನ ಸಂಗೀತ ಸಂಶೋದಕರಾಗಿರುವರು. ಅನೇಕ ನಾಟಕಗಳಿಗೆ ನಟರಾಗಿ ಸಂಗೀತ ನಿರ್ದೇಶಕರಾಗಿ ರಂಗಭೂಮಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸರ್ಕಾರಿ ಸಂಗೀತ ನೌಕರಿಯನ್ನು ಬಂದರು ಸಹ ಅದನ್ನು ಬದಿಗೊತ್ತಿ ಸದ್ಗುರುಗಳ ಅಪೇಕ್ಷೆಯಂತೆ ರುದ್ರ ಸಂಗೀತಕ್ಕೆ ನಾಂದಿ ಹಾಡಿರುವರು. ದೇಶದಲ್ಲಿಯೇ ಪ್ರ.ಪ್ರಥಮ ಕಾರ್ಯವೆಂದು ಮನ್ನಣೆಯನ್ನು ಪಡೆದಿರುವರು. 1942ರಲ್ಲಿ ಗೋರಟಾದಲ್ಲಿ ಶಾರದಾ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಯನ್ನು ಅನಕೂಲ ಮಾಡಿಕೊಟ್ಟಿರುವರು. ಅವರ ಮೊದಲ ವಿದ್ಯಾರ್ಥಿ ನಾನೇಯೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ನಾನೂ ಕೂಡ ಅವರ ಶಿಷ್ಯನೆಂದು ಹೇಳಿಕೊಳ್ಳಲು ಹೆಮ್ಮ ಎನಿಸುತ್ತಿದೆ. ಅವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಅವಕಾಶವಾಗಿರುವುದು ನನ್ನ ಜೀವನದ ಅಮೃತ ಕ್ಷಣವೆಂದು ಅಭಿಮಾನದಿಂದ ಹೇಳ ಬಯಸುತ್ತೇನೆಂದು ಅವರು ಹೇಳಿದರು.
ಇನ್ನೋರ್ವ ಪ್ರಶಸ್ತಿ ಪುರಸ್ಕøತರಾದ ಖ್ಯಾತ ಗಾಯಕರಾದ ಉಸ್ತಾದ್ ಶೇಖ್ ಹನ್ನುಮಿಯ್ಯಾ ರವರು ಮಾತನಾಡಿ ನನ್ನ ಸಂಗೀತ ಗುರುಗಳು ವಿರೂಪಾಕ್ಷಯ್ಯನವರು ಅವರ ಆಶೀರ್ವಾದದಿಂದ ನಾನು ಸಂಗೀತ ಕ್ಷೇತ್ರದಲ್ಲಿ ಇಷ್ಟೊಂದು ಬೆಳುವಣಿಗೆ ಸಾಧ್ಯವಾಯಿತು. ಇಂದು ಅವರ ಹೆಸರಿನ ಪ್ರಶಸ್ತಿಯು ನನಗೆ ದೊರಕಿರುವುದು ನನ್ನ ಅಹೋಭಾಗ್ಯ. ಇಂದು ಅವರ ಸುಪುತ್ರರು, ಭಕ್ತರು ಕೂಡಿ ಚಾರಿತ್ರಿಕ ಕಾರ್ಯವನ್ನು ಮಾಡುತ್ತಿರುವುದು. ಎಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಾಂದಿ ನುಡಿ ಹೇಳಿರುವ ಪೂಜ್ಯ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಗೋರಟಾದ ಚಾರಿತ್ರಿಕ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಪ್ರಾಚೀನ ಗೋರಟಾ ಕಲೆ, ಸಾಹಿತ್ಯ, ಸಂಗೀತ ವಿದ್ಯಗಳ ಬಹುದೊಡ್ಡ ವಿದ್ಯಾಕೇಂದ್ರವಾಗಿ ಪ್ರಸಿದ್ದವಾಗಿದ್ದು ಶ್ರೀ ಸಂಗೀತ ರುದ್ರೇಶ್ವರ ದೇವಾಲಯ ಪ್ರಾಚೀನ ರುದ್ರೇಶ್ವರರ ಪ್ರತಿರೂಪವಾಗಿದೆ. ಅಂದಿನ ಘಟಿಕಸ್ಥಾನ ಮಾದರಿಯಲ್ಲಿ ಇಲ್ಲೊಂದು ಸಂಗೀತದ ವಿದ್ಯಾಕೇಂದ್ರ ತಲೆ ಎತ್ತಬೇಕಾಗಿದೆ. ನೆನೆಗುದಿಗೆ ಬಿದ್ದಿರುವ ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕೆಂದು ಶ್ರೀಗಳು ಸರ್ಕಾರವನ್ನು ಒತಾಯಿಸಿದರಲ್ಲದೆ ಬರುವ ಮುಂದಿನ ವರ್ಷದಲ್ಲಿ ಶ್ರೀ ಸಂಗೀತ ರುದ್ರೇಶ್ವರ 03ನೇ ಜಾತ್ರೆಯಲ್ಲಿ ನೂತನ ಮಹಾರಥೋತ್ಸವ ನಡೆಸಲಾಗುವದೆಂದು ಶ್ರಾವಣದ ನಂತರ ನೂತನ ರಥದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದೆಂದು ಶ್ರೀಗಳು ಹೇಳಿದರು.
ಖ್ಯಾತ ಸಂಗೀತ ವಿದ್ವಾಂಸರಾದ ಡಾ|| ಕೇಶವರಾವ ಸೂರ್ಯವಂಶಿ ಮತ್ತು ಉಸ್ತಾದ ಶೇಖ್ ಹನ್ನುಮಿಯ್ಯಾರವರನ್ನು ಪಂ. ವಿರೂಪಾಕ್ಷ ಸಮ್ಮಾನ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತ್ತು. ಅಭಿನಂದನಾ ನುಡಿಯನ್ನು ಹೇಳಿದ ಖ್ಯಾತ ಸಂಗೀತ ವಿದ್ವಾಂಸರಾದ ಡಾ|| ಸಿದ್ದಾರಾಮಯ್ಯ ಸ್ವಾಮಿ ಗೋರಟಾ, ಪ್ರಾಚೀನ ಸಂಗೀತದ ತವರು ಎನಿಸಿಕೊಂಡಿರುವ ಗೋರಟಾದ ಸಂಗೀತ ರುದ್ರೇಶ್ವರ ಮಂದಿರದಲ್ಲಿ ಇಂತಹ ಐತಿಹಾಸಿಕ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ನಮ್ಮ ಕನಸು ಸಾಕಾರಗೊಳ್ಳುತ್ತಿರುವ ನಮ್ಮೆಲ್ಲರ ಸುದೈವ. ಮುಂದಿನ ವರ್ಷ ಗಾಯನ, ವಾದನ ಮತ್ತು ನೃತ್ಯ ಮೂರು ಪ್ರಕಾರದ ಸಂಗೀತ ಕಾರ್ಯಕ್ರಮಗಳು ಈ ವೇದಿಕೆಯ ಮೇಲೆ ನಡೆಸಲಾಗುವುದು. ಎಂದು ಅವರು ಹೇಳಿದರಲ್ಲದೆ ತಮ್ಮ ಅಮೋಘ ಗಾಯನದಿಂದ ಕಲ್ಯಾಣ ಕರ್ನಾಟಕ 5ನೇ ಪ್ರಾಂತೀಯ ಸಂಗೀತ ಸಮ್ಮೇಳನಕ್ಕೆ ನಾಂದಿ ಹಾಡಿದರು.
ಶ್ರೀಶೈಲದ ಅಕ್ಕಮಾಹದೇವಿ ಚೈತನ್ಯ ಪೀಠದ ಅಧಿಪತಿಗಳಾದ ಪೂಜ್ಯ ಶ್ರೀ ಕರುಣಾದೇವಿ ಮಾತರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಹಾರೈಸಿದರು. ರಾಜ್ಯ ದಿಶಾ ಕಮೀಟಿಯ ಸದಸ್ಯರಾದ ಶಿವಯ್ಯಾ ಸ್ವಾಮಿ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಅನೇಕ ಜನ ಸಂಗೀತಗಾರರಿದ್ದು. ಅವರಿಗೆ ರಾಜ್ಯಮಟ್ಟದಲ್ಲಿ ಅವಕಾಶಗಳು ಹೆಚ್ಚಿಗೆ ದೊರೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಶೀಲರಾಗಬೇಕೆಂದು ನುಡಿದರು. ಜೋತಿಷ್ಯ ಪಂಡಿತರಾದ ಗಂಗಾಧರ ಸ್ವಾಮಿ ಮಾತನಾಡಿ ಗೋರಟಾ ಪೂಜ್ಯ ವಿರೂಪಾಕ್ಷಯ್ಯನವರಿಂದ ಪುಣ್ಯಭೂಮಿಯಾಗಿದೆ. ನಾವೆಲ್ಲರೂ ಸೇರಿ ನಮ್ಮ ದೇಶದ ಅದ್ಯಾತ್ಮ ಕ್ಷೇತ್ರವನ್ನು ಇನ್ನಷ್ಟು ಸಮೃದ್ಧಿಯನ್ನು ಮಾಡುವುದು ಅತ್ಯಾವಶ್ಯಕವಾಗಿದೆ ಎಂದು ನುಡಿದರು. ಜಿಲ್ಲಾ ಅಂಚೆ ಇಲಾಖೆ ನಿವೃತದ ಅಧಿಕಾರಿಗಳಾದ ಗುರನಾಥ ಅಕ್ಕಣ್ಣ ಗೋರಟಾದ ಸಂಗೀತದ ಕುರಿತು ಮಾತನಾಡಿದರು.
ಡಿ.ವಾಯ್. ಬಿರಾದಾರ, ಶರಣಮ್ಮ ರೇವಪ್ಪಾ ಮುದ್ದಾ, ಡಿ.ವಾಯ್.ಎಸ್.ಪಿ, ಗಂಗಾಧರ ಸ್ವಾಮಿ, ಭೂದಾನಿ ಕಮಳಬಾಯಿ ಅಕ್ಕಣ್ಣ, ಕರಬಸಪ್ಪಾ ಅಕ್ಕಣ್ಣ, ಯುವ ಮುಖಂಡರಾದ ಮಹಾದೇವ ಪಟ್ನೆ, ರಾಜಕುಮಾರ ಬುಧೇರಾ, ಶಿವಕುಮಾರ ಪಾಟೀಲ್, ಕಂಟೆಪ್ಪಾ ಭಂಗೋರೆ, ಸೋಮೇಶ್ವರ ಬಿರಾದಾರ ಮುಖ್ಯ ಅಥಿತಿಗಳಾಗಿದ್ದರು. ಡಾ|| ರುದ್ರೇಶ್ವರ ಸ್ವಾಮಿ ಎಲ್ಲರನ್ನು ಸ್ವಾಗತಿಸಿದರು, ಶ್ರೀ ಬಸವರಾಜ ಹಾಲಹಳ್ಳಿ ನಿರೂಪಿಸಿದರು, ಚಂದ್ರಕಾಂತ ಸ್ವಾಮಿ ಚಂದನಹಳ್ಳಿ ವಂದಿಸಿದರು.
ಪಂ. ಹಣಮಂತಪ್ಪಾ ಚಿದ್ರಿ, ಪಂ.ಶಿವಾಜಿರಾವ ಸಗರ, ನವಲಿಂಗ ಪಾಟೀಲ್, ಜನಾರ್ಧನ ವಾಗಮಾರೆ, ರಾಜಕುಮಾರ ಹೂಗಾರ, ಡಾ|| ಅರ್ಜುನ ವಠಾರ, ಡಾ|| ಗಣೇಶ ಪರೀಟ್, ನೀಲಯ್ಯ ಹೀರೆಮಠ, ಸಂಗಶೇಟ್ಟಿ ಡೊಣಗಾಪೂರ ಮುಂತಾದ ಪ್ರಸಿದ್ಧ ಕಲಾವಿದರು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ಮಾಡಿದರು. ಬೆಳ್ಳಿಗೆ ಶ್ರೀ ಸಂಗೀತ ರುದ್ರೇಶ್ವರಿಗೆ ಸಂಗೀತ ರುದ್ರಾಭಿಶೆಕ ನಡೆಯಿತ್ತು. ಸಾಯಂಕಾಲ ಶ್ರೀ ಸಂಗೀತ ರುದ್ರೇಶ್ವರ ಮರುವಣಿಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದರು.