ನರಸಿಂಹ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.21: ಶ್ರೀನರಸಿಂಹ ದೇವರು ಧರೆಯಲ್ಲಿ ಅವತರಿಸಿದ ಶುಭದಿನ ವನ್ನು ದೇಶದಾದ್ಯಂತ ನರಸಿಂಹ ಜಯಂತಿ ಎಂದು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದ್ದು  ಬಳ್ಳಾರಿ ಯಂತ್ರೋದ್ದಾರಕ ದೇವಾಲಯ ದಲ್ಲಿ  ಕೂಡ ಶ್ರೀನರಸಿಂಹ ಜಯಂತಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು… ನರಸಿಂಹ ಜಯಂತಿ ಪ್ರಯುಕ್ತ  ಬೆಳಿಗ್ಗೆ ನಿಮಾ೯ಲ್ಯ ಅಭಿಷೇಕ, ನರಸಿಂಹ ದೇವರಿಗೆ ಮನ್ಯುಸೂಕ್ತದಿಂದ ಯಂತ್ರೋದ್ದಾರಕಹನುಮಂತ ದೇವರಿಗೆ ವಾಯುಸ್ತುತಿ ಪುನಶ್ಚರಣದಿಂದ ಮಧು ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು. ಶ್ರೀನರಸಿಂಹಪ್ರೀತ್ಯಥ೯ವಾಗಿ ನರಸಿಂಹ ಮಂತ್ರ ನಾರಾಯಣ ವಮ೯,ಮನ್ಯುಸೂಕ್ತ,ಶ್ರೀಸೂಕ್ತ,ಬಳಿಥಾ ಸೂಕ್ತ ಇತ್ಯಾದಿ ಹೋಳುಗಳು ಜರುಗಿದವು.ನಂತರ ರಥೋತ್ಸವ ನಡೆಯಿತು
 ಮಹಾನೈವೇದ್ಯ ,ಹಸ್ತೋದಕ ಮಹಾಮಂಗಳಾರತಿ ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ ನಡೆಯಿತು. ಶ್ರೀ ಯಂತ್ರೋದ್ದಾದರಕ, ಶ್ರೀರಾಘವೇಂದ್ರ ಸ್ವಾಮಿ ಗಳಬೃಂದಾವನ ಹಾಗೂ ಶ್ರೀ ನರಸಿಂಹ ದೇವರಿಗೆ ವಿಶೇಷ ಅಲಂಕಾರ ‌ಮಾಡಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕ ರಾದ ಶ್ರೀ ಜಿ.ಬಲರಾಮಾಚಾಯ೯ರು ನರಸಿಂಹ ದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಯ೯ಕ್ರಮದಲ್ಲಿ ಹಲವಾರು ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಅನುಗ್ರಹ ಕ್ಕೆ ಪಾತ್ರರಾದರು.